Viral Video: ಮುದ್ದಾದ ಪುಟ್ಟ ನಾಯಿ ಮರಿಯೊಂದಿಗೆ ನೃತ್ಯ ಮಾಡಿದ ಯುವಕ! ಕ್ಯೂಟ್ ವಿಡಿಯೊ ನೀವೂ ನೋಡಿ | Man dance with little pug cutest video goes viral in social media


Viral Video: ಮುದ್ದಾದ ಪುಟ್ಟ ನಾಯಿ ಮರಿಯೊಂದಿಗೆ ನೃತ್ಯ ಮಾಡಿದ ಯುವಕ! ಕ್ಯೂಟ್ ವಿಡಿಯೊ ನೀವೂ ನೋಡಿ

ಮುದ್ದಾದ ನಾಯಿ ಮರಿ ಜೊತೆ ನೃತ್ಯ ಮಾಡಿದ ಯುವಕ

ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ಬೆಕ್ಕು, ನಾಯಿ ಮರಿಯೊಂದಿಗೆ ಸಲಹೆ ಜಾಸ್ತಿ. ಅವುಗಳೊಟ್ಟಿಗೆ ಆಟವಾಡುತ್ತಾ ಖುಷಿಯಿಂದ ಕಾಲ ಕಳೆಯುತ್ತೇವೆ. ಇದೀಗ ವೈರಲ್​ ಆಗಿರುವ ವಿಡಿಯೋ ಕೂಡಾ ಅಂಥದ್ದೇ! ಈ ವಿಡಿಯೊ ನೋಡಿದಾಕ್ಷಣ ಮುಖದಲ್ಲಿ ನಗು ಅರಳುತ್ತದೆ. ಅಷ್ಟೊಂದು ಕ್ಯೂಟ್​ ಆಗಿರುವ ವಿಡಿಯೊವನ್ನು ನೀವು ಮಿಸ್​ ಮಾಡ್ಕೊಳೊ ಹಾಗೇ ಇಲ್ಲ. ಇಲ್ಲಿದೆ ವಿಡಿಯೊ ನೀವೇ ನೋಡಿ.

ಇಂದು ನೀವು ಬೇಸರದಲ್ಲಿದ್ದೀರಾ? ನಿಮ್ಮ ಮುಖದಲ್ಲಿ ಸಂತೋಷ ತರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತವೆ. ಅವುಗಳನ್ನು ನೋಡುತ್ತಾ ನೀವು ಬೇಸರವನ್ನು ಮರೆಯಬಹುದು. ಅವುಗಳಲ್ಲಿ ಕ್ಯೂಟ್ ವಿಡಿಯೊವೊಂದು ಫುಲ್ ವೈರಲ್ ಆಗುತ್ತಿದೆ. ಮುದ್ದಾದ ಪುಟ್ಟ ನಾಯಿ ಮರಿ ಜೊತೆಗೆ ಯುವಕ ನೃತ್ಯ ಮಾಡುತ್ತಿದ್ದಾನೆ. ನಾಯಿ ಮರಿಯಂತೆಯೇ ವರ್ತಿಸುತ್ತಾ ಸಂತೋಷದಿಂದ ಜಿಗಿಯುತ್ತಿರುವ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ನೆಟ್ಟಿಗರ ಮನ ಗೆದ್ದಿದೆ.

ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈ ಮುದ್ದಾದ ವಿಡಿಯೊ ಸುಮಾರು 224 ಸಾವಿರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ವಿಡಿಯೊದಲ್ಲಿ ನೋಡುವಂತೆ ವ್ಯಕ್ತಿಯು ನಾಯಿ ಮರಿ ಜೊತೆ ನೃತ್ಯ ಮಾಡುತ್ತಿದ್ದಾನೆ. ನಾಯಿ ಮರಿಯಂತೆಯೇ ನಕಲಿಸುತ್ತಾನೆ. ಸಂತೋಷಗೊಂಡ ನಾಯಿ ಮರಿ ಮತ್ತೆ ಮತ್ತೆ ಕುಣಿದಾಡುತ್ತಿದೆ. ಈ ಮುದ್ದಾದ ವಿಡಿಯೊವನ್ನು, ನಾಯಿ ಮರಿಯೊಂದಿಗೆ ಡಾನ್ಸ್ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ.

ನೆಟ್ಟಿಗರು ಈ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ. ಅದಾಗ್ಯೂ ಕೆಲವು ಬಳಕೆದಾರರು ನಾಯಿ ಮರಿಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ್ದಾರೆ. ಏಕೆಂದರೆ ವ್ಯಕ್ತಿ ನಾಯಿ ಮರಿಯ ಹತ್ತಿರದಲ್ಲಿಯೇ ಜಿಗಿಯುತ್ತಿದ್ದಾನೆ ಎಚ್ಚರ ಎಂದು ಹೇಳಿದ್ದಾರೆ. ನಾಯಿ ಮರಿ ತುಂಬಾ ಮುದ್ದಾಗಿದೆ. ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದೆ ಎಂದು ಮತ್ತೋರ್ವರು ಹೇಳಿದ್ದಾರೆ. ಯಾವಾಗಲೂ ಅವರಿಬ್ಬರು ಸಂತೋಷದಿಂದ ಸ್ನೇಹಿತರಾಗಿರಲಿ, ಮುದ್ದಾದ ವಿಡಿಯೊವಿದು ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್

Viral Video: ಟ್ರಾಫಿಕ್ ಕ್ಯಾಮೆರಾ ಮುಂದೆ ಬಂದು ಪೋಸ್ ಕೊಟ್ಟ ಮುದ್ದಾದ ಗಿಳಿ; ವಿಡಿಯೊ ವೈರಲ್

TV9 Kannada


Leave a Reply

Your email address will not be published. Required fields are marked *