Viral Video: ‘ಮೆಕ್ಕಾದ ಗಡಿಯಾರ ಗೋಪುರಕ್ಕೆ ಬಡಿದ ಸಿಡಿಲು‘ ವಿಡಿಯೋ ನೋಡಿ | Viral video: Lightning strikes clock tower in Mecca, here’s what happened next


Mecca : ಸೌದಿ ಅರೇಬಿಯಾದಲ್ಲಿ ಆಗಸ್ಟ್​ 5ರ ಮಧ್ಯರಾತ್ರಿ ಬೀಳುತ್ತಿದ್ದ ಮಹಾಮಳೆ. ಖಡಲ್ ಖಡಲ್​ ಎಂಬ ಸಿಡಿಲು… ಮುಂದೇನಾಯಿತು?

Viral : ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾದ ಬಹುಪಾಲು ಪ್ರದೇಶಗಳು ವಾತಾವರಣ ವೈಪರೀತ್ಯಕ್ಕೆ ಒಳಗಾಗುತ್ತಿವೆ. ಅತಿಯಾದ ಮಳೆ, ಗುಡುಗು, ಸಿಡಿಲು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಆಗಸ್ಟ್ 5ರಂದು ಮೆಕ್ಕಾದಲ್ಲಿ ಮಧ್ಯರಾತ್ರಿ ದೊಡ್ಡ ಸಿಡಿಲೊಂದು ಗಡಿಯಾರ ಗೋಪುರಕ್ಕೆ ಬಡಿದು ಅದು ಆಕಾಶದಲ್ಲಿ ಮರದ ಟಿಸಿಲುಗಳು ಮೂಡಿದಂತೆ ಮೂಡಿ ಮರೆಯಾದ ರೀತಿ ನೆಟ್ಟಿಗರನ್ನು ಚಕಿತರನ್ನಾಗಿಸಿದೆ. ಈತನಕ 61 ಸಾವಿರ ವೀಕ್ಷಣೆಗೆ ಈ ವಿಡಿಯೊಓ ಒಳಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆ ಬೀಳುತ್ತಿದೆ. ದಶಕದಿಂದ ಇಲ್ಲಿಯ ವಾತಾವರಣ ತೇವಾಂಶದಿಂದ ಕೂಡಿದೆ ಎಂದು ಅಲ್​ ಅರೇಬಿಯಾ ವರದಿ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ಹವಾಮಾನ ಕೇಂದ್ರ (NCM)ವು ಪ್ರಕಾರ 30 ವರ್ಷಗಳಲ್ಲಿ ಪ್ರಸಕ್ತ ಸಾಲಿನ ಜುಲೈ ಅತ್ಯಂತ ತೇವಾಂಶದಿಂದ ಕೂಡಿದ ತಿಂಗಳಾಗಿದೆ ಎಂದು ದಾಖಲಿಸಿದೆ. ಒಟ್ಟಾರೆಯಾಗಿ ಇಲ್ಲಿ ಇನ್ನೂ ಹೆಚ್ಚನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *