
ವೈರಲ್ ಆದ ಆನೆಗಳು
ದೊಡ್ಡ ಆನೆಮಗಳು ಮರಿಯಾನೆಯನ್ನು ಯಾವುದೇ ಭದ್ರತೆಗೂ ಕಡಿಮೆ ಇಲ್ಲದಂತೆ ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿ.
ಆನೆಗಳ (Elephants) ಗಾಂಭೀರ್ಯ ನಡೆಯ ಮಧ್ಯೆ ಒಂದು ಸಣ್ಣ ಮರಿಯಾನೆ, ಯಾವುದೇ ಭದ್ರತೆಗೆ ಕಡಿಮೆ ಇಲ್ಲ ಈ ಮರಿಯಾನೆಯ ಸೆಕ್ಯೂರಿಟಿ, ರಸ್ತೆಯಿಂದ ಕಾಡಿಗೆ ಹೋಗುವಾಗ ಆನೆ ಮರಿಗೆ ಗಜಪಡೆಯ ಫುಲ್ ಟೈಟ್ ಸೆಕ್ಯೂರಿಟಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ ಗಜಪಡೆಯ Z+++ ಸೆಕ್ಯೂರಿಟಿ!
ಮೂರ್ನಾಲ್ಕು ಆನೆಗಳಿರುವ ಗುಂಪೊಂದು ರಸ್ತೆಯುದ್ದಕ್ಕೂ ಗಾಂಭೀರ್ಯ ನಡೆಯ ಹೆಜ್ಜೆಯನ್ನು ಇಟ್ಟಿದೆ. ಈ ಗುಂಪನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಗುಂಪಿನ ನಡುವೆ ಸಣ್ಣ ಆನೆಮರಿಯೊಂದನ್ನು ಕಾಣಬಹುದು. ದೊಡ್ಡ ಆನೆಗಳು ರಸ್ತೆಯಲ್ಲಿ ಒಂದು ಸ್ವಲ್ಪವೂ ಜಾಗ ಇಲ್ಲದಂತೆ ನಡೆದುಕೊಂಡು ಹೋಗುತ್ತಿದ್ದಾಗ ಚೋಟುದ್ದ ಕಾಲುಗಳ ಮರಿಯಾನೆ ಮುದ್ದುಮುದ್ದಾಗಿ ಓಡಾಡುವುದನ್ನು ಕಾಣಬಹುದು. ಹೀಗೆ ತನ್ನ ಬಳಗದಲ್ಲಿ ಜನಿಸಿದ ಮರಿಯಾನೆಗೆ ಯಾವುದೇ ಆಪತ್ತು ಬರದಂತೆ ನೋಡಿಕೊಳ್ಳುತ್ತಾ ಕಾಡಿನ ಕಡೆಗೆ ಕರೆದುಕೊಂಡ ಹೋಗಿವೆ. ಈ ದೃಶ್ಯಾವಳಿಯನ್ನು ಸತ್ಯಮಂಗಲಂ ಕೊಯಮತ್ತೂರು ರಸ್ತೆಯಲ್ಲಿ ಸೆರೆಹಿಡಿಯಲಾಗಿದೆ.