Viral Video: ಯುವತಿಯನ್ನು ಸೂಟ್​ಕೇಸ್​ನಲ್ಲಿ ತುಂಬಿ ಹಾಸ್ಟೆಲ್​ನಿಂದ ಕರೆತಂದ ಇಂಜಿನಿಯರಿಂಗ್ ವಿದ್ಯಾರ್ಥಿ; ಟ್ರೋಲ್ ಆಯ್ತು ಮಣಿಪಾಲ್ ಗರ್ಲ್ ವಿಡಿಯೋ | Viral Video college student gets caught sneaking girl out of hostel in suitcase Twitter Trolls Video


Viral Video: ಯುವತಿಯನ್ನು ಸೂಟ್​ಕೇಸ್​ನಲ್ಲಿ ತುಂಬಿ ಹಾಸ್ಟೆಲ್​ನಿಂದ ಕರೆತಂದ ಇಂಜಿನಿಯರಿಂಗ್ ವಿದ್ಯಾರ್ಥಿ; ಟ್ರೋಲ್ ಆಯ್ತು ಮಣಿಪಾಲ್ ಗರ್ಲ್ ವಿಡಿಯೋ

ಸೂಟ್​ಕೇಸ್​ನಲ್ಲಿ ಯುವತಿಯನ್ನು ಕರೆದೊಯ್ದ ಯುವಕನ ವಿಡಿಯೋ

ಬೆಂಗಳೂರು: ಗರ್ಲ್​ಫ್ರೆಂಡ್​ ಅನ್ನು ಟ್ರಾವೆಲ್ ಬ್ಯಾಗ್‌ನಲ್ಲಿ ತುಂಬಿಕೊಂಡು, ಹಾಸ್ಟೆಲ್‌ಗೆ ಒಳಗೆ ಕರೆದೊಯ್ದಿದ್ದ ವಿದ್ಯಾರ್ಥಿ ಹಾಸ್ಟೆಲ್​ನಿಂದ ಹೊರಗೆ ಬರುವಾಗ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ (Video Viral) ಆಗಿದೆ. ಉಡುಪಿ ಜಿಲ್ಲೆಯ ಮಣಿಪಾಲ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತನ್ನ ಗೆಳೆತಿಯನ್ನು ಹಾಸ್ಟೆಲ್​ನೊಳಗೆ ಕರೆದುಕೊಂಡು ಹೋಗಲು ಬ್ಯಾಗ್​ನೊಳಗೆ ತುಂಬಿಕೊಂಡಿದ್ದ. ಹಾಸ್ಟೆಲ್‌ ಗೇಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಂದ ತಪಾಸಣೆ ನಡೆದಾಗ ಈ ವಿಷಯ ಗೊತ್ತಾಗಿತ್ತು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಕ್ಯುರಿಟಿ ಗಾರ್ಡ್​ ಬ್ಯಾಗ್ ತೆಗೆದು ನೋಡಲು ಪ್ರಯತ್ನಿಸುತ್ತಿದ್ದಂತೆ ಆತಂಕಗೊಂಡ ವಿದ್ಯಾರ್ಥಿ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡು ಬ್ಯಾಗ್ ಪರಿಶೀಲನೆ ಮಾಡಿದಾಗ ಆ ಬ್ಯಾಗ್​ನೊಳಗೆ ಯುವತಿ ಇರುವುದು ಪತ್ತೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತನ್ನ ಗರ್ಲ್​ ಫ್ರೆಂಡನ್ನು ಹಾಸ್ಟೆಲ್ ರೂಂನೊಳಗೆ ಕರೆದುಕೊಂಡು ಹೋಗಲು ಟ್ರಾವೆಲ್ ಬ್ಯಾಗ್​ನೊಳಗೆ ತುಂಬಿಕೊಂಡು ಹೋಗುವ ಐಡಿಯಾ ಮಾಡಿದ ಯುವಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಈ ದೃಶ್ಯ ಉಡುಪಿ ವಿಶ್ವವಿದ್ಯಾಲಯದ ಎಂಐಟಿಯದ್ದು ಎಂದು ಕೆಲವರು ಹೇಳಿದ್ದಾರೆ. ಆದರೆ, ಈ ವಿಡಿಯೋ 2019ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಡೆಹ್ರಾಡೂನ್​ನದ್ದು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.

ಹೀಗಾಗಿ, ಈ ವಿಡಿಯೋ ಕರ್ನಾಟಕದ ಮಣಿಪಾಲದ್ದಾ ಅಥವಾ ಡೆಹ್ರಾಡೂನ್​ನದ್ದಾ ಎಂಬುದು ಇನ್ನೂ ಖಚಿತವಾಗಿಲ್ಲ. ಯುವತಿಯನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಹಾಸ್ಟೆಲ್‌ನೊಳಗೆ ಹೋಗುತ್ತಿದ್ದಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಈ ವಿಡಿಯೋ ನೋಡಿದವರು ಟ್ವಿಟ್ಟರ್​​ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

2019ರಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಈ ವೀಡಿಯೋ ಉಡುಪಿಯದ್ದಲ್ಲ, ಡೆಹ್ರಾಡೂನ್‍ನದ್ದು ಎಂದು ಹೇಳಲಾಗುತ್ತಿದೆ. ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಟ್ರೋಲ್ ಪೇಜ್‍ಗಳಲ್ಲಿ ಈ ವಿಡಿಯೋ ಮತ್ತೆ ಟ್ವಿಟ್ಟರ್​​ನಲ್ಲಿ ಹರಿದಾಡುತ್ತಿದೆ.

TV9 Kannada


Leave a Reply

Your email address will not be published.