Viral Video: ರೈಲಿನಲ್ಲಿ ತಾತ್ಕಾಲಿಕ ಸೀಟ್ ತಯಾರಿಸಿಕೊಂಡು ಕುಳಿತ ಪ್ರಯಾಣಿಕ; ಹೇಗಂತೀರಾ? ವಿಡಿಯೊ ನೋಡಿ | Passenger create jugad seats in train video goes viral in social media

Viral Video: ರೈಲಿನಲ್ಲಿ ತಾತ್ಕಾಲಿಕ ಸೀಟ್ ತಯಾರಿಸಿಕೊಂಡು ಕುಳಿತ ಪ್ರಯಾಣಿಕ; ಹೇಗಂತೀರಾ? ವಿಡಿಯೊ ನೋಡಿ

ರೈಲಿನಲ್ಲಿ ತಾತ್ಕಾಲಿಕ ಸೀಟ್​ ತಯಾರಿಸಿಕೊಂಡ ಪ್ರಯಾಣಿಕ

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ತಮಾಷೆಯ ದೃಶ್ಯಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಭಾರೀ ಇಷ್ಟವಾಗುತ್ತವೆ. ಕೆಲವರು ಸಂದರ್ಭಕ್ಕೆ ಸರಿಯಾಗಿ ಕೆಲವು ಉಪಾಯಗಳನ್ನು ಮಾಡಿ ಸಮಸ್ಯೆಯಿಂದ ಪಾರಾಗುತ್ತಾರೆ. ಅವುಗಳಲ್ಲಿ ಕೆಲವು ನಗುತರಿಸುವಂತಿರುತ್ತದೆ. ಇನ್ನು ಕೆಲವು ಅಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ರೈಲಿನಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೇ ತಳಮಳಿಸುತ್ತಿದ್ದ ಪ್ರಯಾಣಿಕನೊಬ್ಬ ತನ್ನದೇ ಆದ ಸೀಟ್ ತಯಾರಿಸಿಕೊಂಡಿದ್ದಾನೆ. ತಮಾಷೆ ವಿಡಿಯೊ ಸಕತ್ ವೈರಲ್ ಆಗಿದೆ.

ಭಾರತೀಯನೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಆದರೆ ಕುಳಿತುಕೊಳ್ಳಲು ಜಾಗವಿರಲಿಲ್ಲ. ನಿಂತು ನಿಂತು ಸುಸ್ತಾದ ಪ್ರಯಾಣಿಕ ತನ್ನದೇ ಆದ ಸೀಟ್ ತಯಾರಿಸಿಕೊಂಡಿದ್ದಾನೆ. ಬೆಡ್ ಶೀಟನ್ನು ಎರಡೂ ಬದಿಯಿರುವ ಸರಳಿಗೆ ಕಟ್ಟಿ ತೂಗು ಜೋಕಾಲಿ ರೆಡಿ ಮಾಡಿದ್ದಾನೆ. ಅದರ ಮೇಲೆ ಕುಳಿತುಕೊಂಡು ನಿದ್ರಿಸುತ್ತಿದ್ದಾನೆ. ತಾತ್ಕಾಲಿಕ ಆಸನದ ಮೇಲೆ ಕುಳಿತುಕೊಂಡು ರೈಲಿನಲ್ಲಿ ಸಾಗಿದ್ದಾನೆ.

ಆ ಪ್ರಯಾಣಿಕನು ತಯಾರಿಸಿದ ತಾತ್ಕಾಲಿಕ ಸೀಟ್ ಎಲ್ಲರೂ ಬೆರಗಾಗುವಂತೆ ಮಾಡಿದೆ. ಸೀಟ್ ಮೇಲೆ ಕುಳಿತಿದ್ದ ಇತರ ಪ್ರಯಾಣಿಕರು ಆತನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ತಮಾಷೆ ಮಾಡಿ ನಕ್ಕಿದ್ದಾರೆ. ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ತಮಾಷೆ ವಿಡಿಯೊಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Viral Video: ಬೀದಿ ವ್ಯಾಪಾರಿಯ ಈ ಕೌಶಲ್ಯ ನೋಡಿದ್ರೆ ನೀವೂ ಬೆರಗಾಗ್ತೀರಾ; ವಿಡಿಯೊ ನೋಡಿ

Viral Video: ಮೊಬೈಲ್​ನಲ್ಲಿ ವಿಡಿಯೊ ನೋಡ್ತಾ ಕುಳಿತಿದ್ದ ಮೂರು ಕೋತಿಗಳ ರಿಯಾಕ್ಷನ್ ವೈರಲ್; ವಿಡಿಯೊ ಮಜವಾಗಿದೆ ನೋಡಿ

TV9 Kannada

Leave a comment

Your email address will not be published. Required fields are marked *