Kal Ho Na Ho : ಕಂಟೆಂಟ್ ಕ್ರಿಯೇಟರ್, ಗಾಯಕ ವಿಶ್ ಲಂಡನ್ನ ಬೀದಿಯಲ್ಲಿ ಈ ಹಾಡುಹಾಡಿದಾಗ…

ಲಂಡನ್ ಬೀದಿಯಲ್ಲಿ ಗಾಯ ವಿಶ್
Viral Video : ಲಂಡನ್, ಟೋಕ್ಯೋ, ನ್ಯೂಯಾರ್ಕ್ ಹೀಗೆ ಜಗತ್ತಿನ ಅನೇಕ ರಾಷ್ಟ್ರಗಳ ಮೂಲೆಮೂಲೆಯಲ್ಲಿಯೂ ಭಾರತೀಯರು ವಾಸಿಸುತ್ತಿದ್ದಾರೆ. ಎಲ್ಲೆಡೆಯಾದರೂ ಭಾರತೀಯ ಸಿನೆಮಾ ಹಾಡು ಕಿವಿಗೆ ಬಿದ್ದರೆ ಭಾವಪರವಶರಾಗಿಬಿಡುತ್ತಾರೆ. ಈಗಿಲ್ಲಿ ಲಂಡನ್ನ ಬೀದಿಯಲ್ಲಿ ವಿಶ್ ಎಂಬ ಗಾಯಕ ಶಾಹರುಖ್ ಖಾನ್ ಅಭಿನಯದ ಸೋನು ನಿಗಮ್ ಹಾಡಿರುವ ‘ಕಲ್ ಹೋ ನಾ ಹೋ’ ಹಾಡನ್ನು ಭಾವತುಂಬಿ ಹಾಡಿದ್ದಾನೆ. ದಾರಿಹೋಕರು ಇವನ ಹಾಡನ್ನು ಕೇಳುತ್ತ ನಿಂತಿದ್ದಾರೆ. ಕಂಟೆಂಟ್ ಕ್ರಿಯೇಟರ್ ಮತ್ತು ಗಾಯಕ ವಿಶ್ ತಮ್ಮ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸುಮಾರು 3.8 ಮಿಲಿಯನ್ ವೀಕ್ಷಣೆ, 4 ಲಕ್ಷ ಲೈಕ್ಸ್, 4ಸಾವಿರ ಕಮೆಂಟ್ ಮತ್ತು 377 ಪ್ರತಿಕ್ರಿಯೆಗಳನ್ನು ಹೊಂದಿದೆ.
ಸೋನು ನಿಗಮ್ ಅವರ ಈ ಐಕಾನಿಕ್ ಹಾಡು ಸಾಕಷ್ಟು ವಿದೇಶಿಯರನ್ನೂ ಮೋಡಿ ಮಾಡಿದೆ. ಅವರ ಅಭಿಮಾನಿಗಳು ದೇಶವಿದೇಶಗಳಲ್ಲೆಲ್ಲ ಇದ್ದು ಈ ಹಾಡು ಕೇಳಿದ ತಕ್ಷಣ ಪರವಶರಾಗಿಬಿಡುತ್ತಾರೆ. ಬಹಳ ಚೆಂದದ ಹಾಡು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಹಲವರು ನಿಮ್ಮ ಧ್ವನಿ ನಿಜವಾಗಿಯೂ ಅದ್ಭುತ ಎಂದಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ