Viral Video: ಲಾಲಿಪಾಪ್ ಕೊಟ್ಟಿದ್ದಕ್ಕೆ ಥ್ಯಾಂಕ್​ ಯೂ ಡ್ರೈವರ್ ಅಂಕಲ್ ಎಂದ ಹುಲಿಪುಟ್ಟ! | Where the bus driver stops his vehicle and opens the window to call the tiger.


Tiger : ಹುಲಿಯ ಬದಲಾಗಿ ಬೆಕ್ಕಾಗಿದ್ದರೆ ಇಷ್ಟೊತ್ತಿಗೆ ಏನು ಮಾಡುತ್ತಿತ್ತು? ಈ ವಿಡಿಯೋ ನೋಡಿ ಆದರೆ ನೀವೆಂದೂ ಇದನ್ನು ಅನುಕರಿಸಲು ಹೋಗಬೇಡಿ.

Viral Video: ಲಾಲಿಪಾಪ್ ಕೊಟ್ಟಿದ್ದಕ್ಕೆ ಥ್ಯಾಂಕ್​ ಯೂ ಡ್ರೈವರ್ ಅಂಕಲ್ ಎಂದ ಹುಲಿಪುಟ್ಟ!

ಹುಲಿಗೆ ಮಾಂಸದ ತುಂಡು ಕೊಡುತ್ತಿರುವ ಡ್ರೈವರ್

Viral : ‘ದಿ ಅಮೇಜಿಂಗ್ ಟೈಗರ್ಸ್’ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್​ ನೆಟ್ಟಿಗರಲ್ಲಿ ಅಚ್ಚರಿಯೊಂದಿಗೆ ಗಾಬರಿಯನ್ನೂ ಹುಟ್ಟಿಸಿದೆ. ಇಲ್ಲಿ ಬಸ್ ಚಾಲಕ ವಾಹನವನ್ನು ನಿಲ್ಲಿಸಿ ಹುಲಿಯನ್ನು ಕರೆದು ಕಿಟಕಿ ತೆರೆದು ಮಾಂಸದ ತುಂಡೊಂದನ್ನು ಕೊಡುತ್ತಾನೆ. ಅದು ಸಹಜವಾಗಿ ಒಂದೇ ನೆಗೆತಕ್ಕೆ ಆ ತುಂಡನ್ನು ಗಬಕ್ಕನೆ ನುಂಗಿ ಬಾಯೊರೆಸಿಕೊಂಡಂತೆ ಮಾಡುತ್ತದೆ. ಇಷ್ಟೇ ಸಾಕು ಈಗ ಹೋಗು ಎಂಬಂತೆ ಕಿಟಕಿ ಗಾಜನ್ನು ಎಳೆಯುತ್ತಾನೆ ಡ್ರೈವರ್. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 33,000 ಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ. ವಿಡಿಯೋಗೆ ಪ್ರತಿಕ್ರಿಯಿಸಿದವರು ಆಹಾ ಧೈರ್ಯವೇ ಎಂದು ಮೆಚ್ಚಿದ್ದಾರೆ. ಇನ್ನೂ ಕೆಲವರು ಅನೇಕ ಪ್ರಶ್ನೆಗಳನ್ನು ಡ್ರೈವರ್ ಗೆ ಕೇಳಿದ್ದಾರೆ. ಹೀಗೆಲ್ಲ ಮಾಡಿ ಕಾಡುಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿದರೆ ಇದೊಂದು ಪರಿಚಿತ ಸಂಬಂಧವೆನ್ನಿಸುತ್ತದೆ ಅಥವಾ ಅರಣ್ಯ ಸಿಬ್ಬಂದಿಯೂ ಆಗಿರಬಹುದು. ಆದರೂ ಕಾಡುಪ್ರಾಣಿಗಳು ಪ್ರಾಣಿಗಳೇ. ಯಾವಾಗ ಹೇಗೆ ವರ್ತಿಸುತ್ತವೇ ಎಂದು ಹೇಳಲಾಗದು. ಈ ಕುರಿತು ಸಾಕಷ್ಟು ಪ್ರಕರಣಗಳನ್ನು ನೀವೆಲ್ಲ ನೋಡಿದ್ದೀರಿ, ಓದಿದ್ದೀರಿ. ಆದ್ದರಿಂದ ಈ ವಿಡಿಯೋದಲ್ಲಿ ತೋರಿಸಿದಂತೆ ಎಂದೂ ಅನುಕರಿಸಲು ಹೋಗಬೇಡಿ.

TV9 Kannada


Leave a Reply

Your email address will not be published. Required fields are marked *