Viral Video: ವಧುವಿನ ವೇಷದಲ್ಲಿ ಕಚಾ ಬಾದಮ್ ಹಾಡು ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್ | Viral Video: Internet Sensation Ranu Mandal sings Kacha Badam song dressed as a bride


Viral Video: ವಧುವಿನ ವೇಷದಲ್ಲಿ ಕಚಾ ಬಾದಮ್ ಹಾಡು ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್

ರಾಣು ಮಂಡಲ್

ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್ (Ranu Mandal) ವಧುವಿನಂತೆ ಬಟ್ಟೆ ಧರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ರಾನು ಮಂಡಲ್ ಅವರು ಕೆಂಪು ಸೀರೆ ಮತ್ತು ಆಭರಣದ ತೊಟ್ಟು ಬಂಗಾಳಿ ವಧುವಿನಂತೆ ಅಲಂಕಾರಗೊಂಡಿರುವುದನ್ನು ನೋಡಬಹುದು. ಅಲ್ಲದೆ, ಅವರು ವೈರಲ್ ಬೆಂಗಾಲಿ ಹಾಡು ಕಚಾ ಬದಾಮ್​ ಹಾಡನ್ನು ಹಾಡಿದ್ದಾರೆ. ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ಹಾಡು ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ತೀವ್ರವಾಗಿ ಟ್ರೆಂಡಿಂಗ್ ಆಗಿತ್ತು. ಫೇಸ್‌ಬುಕ್‌ನಲ್ಲಿನ ವಿಡಿಯೋ 9,000 ಕ್ಕೂ ಹೆಚ್ಚು ಲೈಕ್​ಗಳನ್ನು ಹೊಂದಿದ್ದು, 13 ಸಾವಿರಕ್ಕೂ ಹೆಚ್ಚು ಶೇರ್‌ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ ರಾನು ಮಂಡಲ್ ವಧುವಿನ ವೇಷದಲ್ಲಿ ಕಚಾ ಬಾದಮ್ ಹಾಡಿದ್ದಾರೆ. ಈ ವಿಡಿಯೋವನ್ನು ಯಾರು ರೆಕಾರ್ಡ್ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಇದು ಆನ್‌ಲೈನ್‌ನಲ್ಲಿ ಹೆಚ್ಚಿನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಜನವರಿಯಲ್ಲಿ, ರಾನು ಮಂಡಲ್ ಕಚಾ ಬಾದಮ್ ಹಾಡುವ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ರಾನು ಮಂಡಲ್ ಯಾರು ಎಂದು ನೀವು ಕೇಳಿದರೆ, 1972 ರ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನು ಹಾಡುವ ವಿಡಿಯೋ ಆಗಸ್ಟ್ 2019ರಲ್ಲಿ ಹೆಚ್ಚು ಹೆಚ್ಚು ವೈರಲ್ ಆದ ನಂತರ ರಾತ್ರೋರಾತ್ರಿ ಸ್ಟಾರ್ ಆದ ಅದೇ ಮಹಿಳೆ ಇವರು. ಪಶ್ಚಿಮದ ರಾಣಾಘಾಟ್ ರೈಲು ನಿಲ್ದಾಣದಲ್ಲಿ ಯುವ ಇಂಜಿನಿಯರ್ ಆಗಿರುವ ಅತೀಂದ್ರ ಚಕ್ರವರ್ತಿ ಅವರನ್ನು ಗುರುತಿಸಿದರು. ರಾನು ಅವರು ತ್ವರಿತ ಖ್ಯಾತಿಯನ್ನು ಗಳಿಸಿದರು. ಮತ್ತು ಹಿಮೇಶ್ ರೇಶಮಿಯಾ ಅವರ ಚಲನಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್‌ಗಾಗಿ ಒಂದೆರಡು ಹಾಡುಗಳನ್ನು ಹಾಡಿದ್ದಾರೆ.

TV9 Kannada


Leave a Reply

Your email address will not be published.