Viral Video: ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಪಾಠ ಮಾಡಿದ ಪ್ರೊಪೆಸರ್​: ವಾವ್​​ ಎಂದ ನೆಟ್ಟಿಗರು | Professor holds the student child during the class video goes viral


Viral Video: ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಪಾಠ ಮಾಡಿದ ಪ್ರೊಪೆಸರ್​: ವಾವ್​​ ಎಂದ ನೆಟ್ಟಿಗರು

ಮಗುವನ್ನು ಎತ್ತಿಕೊಂಡಿರುವ ಪ್ರೊಪೆಸರ್​

ಕೆಲವು ದಿನಗಳ ಹಿಂದೆ ಟಿವಿ ಆ್ಯಂಕರ್ (Anchor)​ ಒಬ್ಬರು ತಮ್ಮ 3 ತಿಂಗಳ ಮಗುವನ್ನು ಎತ್ತಿಕೊಂಡು ನೇರಪ್ರಸಾರ ಕಾರ್ಯಕ್ರಮದಲ್ಲಿ ಹವಾಮಾನ ವರದಿ ನೀಡಿದ ಘಟನೆಯ ವಿಡಿಯೋ ವೈರಲ್​ ಆಗಿತ್ತು. ಅದರ ಬಳಿಕ ಈಗ ಕಾಲೇಜಿನ ಪ್ರೊಪೆಸರ್ (Professor)​ ಒಬ್ಬರು ತಮ್ಮ ವಿದ್ಯಾರ್ಥಿನಿಯ ಪುಟ್ಟ ಮಗುವನ್ನು ಎತ್ತಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ ಸದ್ಯ ವಿಡಿಯೋವನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ (Instagram) ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಪ್ರೊಪೆಸರ್​ ಒಬ್ಬರು ತಮ್ಮ ವಿದ್ಯಾರ್ಥಿನಿಯ ಪುಟ್ಟ ಮಗುವನ್ನು ಎತ್ತಿಕೊಂಡು ಬೋರ್ಡ್​ ನೋಡುತ್ತಾ ವಿವರಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ವಿದ್ಯಾರ್ಥಿನಿ ಆರಾಮವಾಗಿ ಕುಳಿತು ನೋಟ್ಸ್​ ಬರೆದುಕೊಳ್ಳುತ್ತಿದ್ದಳು ಎನ್ನಲಾಗಿದೆ. ಮಗು ಕೂಡ ಪ್ರೊಪೆಸರ್​ ಮುಖವನ್ನು ಪುಟ್ಟ ಕೈಗಳಿಂದ ಮುಟ್ಟುತ್ತಿರುವುದನ್ನು ಕಾಣಬಹುದು. ಇನ್ನು ಹಿಂದೂಸ್ತಾನ್​ ಟೈಮ್ಸ್​ ವರದಿಯ ಪ್ರಕಾರ, ಪ್ರೊಪೆಸರ್​ ಮಗುವನ್ನು ಸಂಬಾಳಿಸಿಕೊಂಡು, ವಿದ್ಯಾರ್ಥಿಗಳನ್ನು ತಮ್ಮ ಪಾಠದೆಡೆಗೆ ಸೆಳೆದುಕೊಂಡು, ವಿದ್ಯಾರ್ಥಿನಿ ಪಾಠದೆಡೆಗೆ ಗಮನ ನೀಡುವಂತೆ ತರಗತಿಯನ್ನು ಮುಂದುವರೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಡಿಯೋವನ್ನು ಹಂಚಿಕೊಂಡು ಕೆಲವು ದಿನಗಳಾಗಿದ್ದು 5 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದೆ. ವಿಡಿಯೋ ನೋಡಿ ನೆಟ್ಟಿಗರು  ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ನಂಬಲಸಾಧ್ಯ ಎಂದು ಕಾಮೆಂಟ್​ ಮಾಡಿದರೆ ಇನ್ನು ಕೆಲವರು,  ಪ್ರೊಪೆಸೆರ್​ ಅವರು ವಿದ್ಯಾರ್ಥಿನಿಯ ಮಗುವನ್ನು ಎತ್ತಿಕೊಂಡು ಗಡಿಬಿಡಿಯಿಲ್ಲದೆ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಮಾಡುತ್ತಿರುವುದಕ್ಕೆ ಅಭಿನಂದಿಸಿದ್ದಾರೆ.

TV9 Kannada


Leave a Reply

Your email address will not be published.