Viral Video: ವೇದಿಕೆಯಲ್ಲಿ ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದ ಕಲಾವಿದ; ವಿಡಿಯೋ ವೈರಲ್ | Stage Artiste Collapses On Stage While Performing Dies Due To Heart Attack In Jammu Kannada News


ಕಲಾವಿದ ಯೋಗೇಶ್ ಮಹಿಳೆಯಂತೆ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದೆ.

Viral Video: ವೇದಿಕೆಯಲ್ಲಿ ನೃತ್ಯ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದ ಕಲಾವಿದ; ವಿಡಿಯೋ ವೈರಲ್

ವೇದಿಕೆಯಲ್ಲಿ ನೃತ್ಯ ಮಾಡುವಾಗಲೇ ಕುಸಿದು ಬಿದ್ದ ನರ್ತಕಿ

ಶ್ರೀನಗರ: ಜಮ್ಮುವಿನಲ್ಲಿ ಯೋಗೇಶ್ ಗುಪ್ತಾ (Yogesh Gupta) ಎಂಬ ರಂಗ ಕಲಾವಿದ ವೇದಿಕೆಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ಬುಧವಾರ ಜಮ್ಮುವಿನ ಬಿಷ್ನಾಹ್ ಪ್ರದೇಶದಲ್ಲಿ ಹೃದಯಾಘಾತದಿಂದ (Heart Attack) ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದಾಗ ಕಲಾವಿದ ಸಾವನ್ನಪ್ಪಿದ್ದಾರೆ. ಜಮ್ಮುವಿನ ಕೋಥೇ ಗ್ರಾಮದಲ್ಲಿ ಗಣೇಶ ಉತ್ಸವ ಕಾರ್ಯಕ್ರಮದ ವೇಳೆ ನೃತ್ಯ ಪ್ರದರ್ಶನ ನೀಡುತ್ತಿದ್ದ ವೇಳೆ 20 ವರ್ಷದ ಕಲಾವಿದ ಕುಸಿದು ಬಿದ್ದಿದ್ದಾರೆ.

ಈ ವಿಡಿಯೋ ಕ್ಲಿಪ್‌ನಲ್ಲಿ, ಕಲಾವಿದ ಯೋಗೇಶ್ ಮಹಿಳೆಯಂತೆ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮುಂದೆ ನೃತ್ಯ ಮಾಡುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಪ್ರದರ್ಶನ ಮಾಡುವಾಗ, ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅವರು ಆ ನಾಟಕದಲ್ಲಿ ತಮ್ಮ ಪಾತ್ರ ಮಾಡುತ್ತಾ ಕೆಳಗೆ ಬಿದ್ದಿರಬಹುದು ಎಂದು ಪ್ರೇಕ್ಷಕರು ಭಾವಿಸಿದ್ದರು. ಆದರೆ, ಕೆಳಗೆ ಬಿದ್ದ ಕಲಾವಿದ ಎಷ್ಟು ಹೊತ್ತಾದರೂ ಏಳದಿದ್ದಾಗ ಅವರು ಪ್ರಜ್ಞೆ ತಪ್ಪಿ ಬಿದ್ದಿರುವುದು ಗೊತ್ತಾಗಿದೆ.

TV9 Kannada


Leave a Reply

Your email address will not be published.