Viral Video : ವ್ಯಕ್ತಿಗೆ ವಿದ್ಯುತ್ ಟ್ರ್ಯಾಕ್‌ ಶಾಕ್, ಪ್ರಾಣ ಉಳಿಸಿದವನಿಗೆ ಸನ್ಮಾನ | Viral Video: Power Track Shock For Person, Saving Lives


Viral Video :  ವ್ಯಕ್ತಿಗೆ ವಿದ್ಯುತ್ ಟ್ರ್ಯಾಕ್‌ ಶಾಕ್, ಪ್ರಾಣ ಉಳಿಸಿದವನಿಗೆ ಸನ್ಮಾನ

ವಿದ್ಯುತ್ ಶಾಕ್ ಹೊಡೆದ ವ್ಯಕ್ತಿಯನ್ನು ಕಾಪಾಡಿದ ಪೆರ್ರಿ

ರೈಲು ಹಳಿಯ ಮೇಲೆ ವಿದ್ಯುತ್ ಶಾಕ್ ನಿಂದ  ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ.   ಪೆರ್ರಿ ಎಂಬ ವ್ಯಕ್ತಿ  ನಂತರ ಕೆಳಗೆ ಜಿಗಿದು ವ್ಯಕ್ತಿಯನ್ನು ಆ ವಿದ್ಯುತ್ ಶಾಕ್ ನಿಂದ ಕಾಪಾಡಿದ್ದಾರೆ. 

ದಿನಕ್ಕೊಂದು ವಿಡಿಯೋಗಳು ನಮ್ಮ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಅವುಗಳು ಚಿತ್ರ-ವಿಚಿತ್ರವಾಗಿರುತ್ತದೆ. ಆದರೆ ಅವುಗಳಲ್ಲಿ ಕೆಲವೊಂದು ನಮಗೆ ಸ್ಪೂರ್ತಿದಾಯಕವಾಗಿರುವುದು ನಿಜ, ಇದಕ್ಕೆ ಸಾಕ್ಷಿ ಎಂಬಂತೆ   ಚಿಕಾಗೋದಲ್ಲಿ ವ್ಯಕ್ತಿಯೊಬ್ಬ ರೈಲು ನಿಲ್ದಾಣದಲ್ಲಿ ವಿದ್ಯುತ್ ಟ್ರ್ಯಾಕ್‌ ಸ್ಪರ್ಶದಿಂದ ಶಾಕ್ ಹೊಡೆದಿದೆ.  ಆತನ ದೇಹಕ್ಕೆ  600 ವೋಲ್ಟ್ ಕರೆಂಟ್ ತಗುಲಿದ್ದು ವಿದ್ಯುತ್ ಟ್ರ್ಯಾಕ್‌ಗಳಲ್ಲಿ ಸಿಲುಕಿಕೊಂಡಿದ್ದ, ಆದರೆ ಆತನನ್ನು ಮತ್ತೊಬ್ಬ ವ್ಯಕ್ತಿ ಕಾಪಾಡಿರುವ ವಿಡಿಯೋ ಎಲ್ಲ ಕಡೆ  ವೈರಲ್ ಆಗಿದೆ.   ತನ್ನ ಪ್ರಾಣವನ್ನು ಲೆಕ್ಕಿಸದೆ ಆ ವ್ಯಕ್ತಿಯನ್ನು ರಕ್ಷಿಸಿರುವುದು ಎಲ್ಲರಿಂದ ಪ್ರಶಂಸೆಯನ್ನು ಪಡೆಯುತ್ತಿದ್ದಾರೆ.  ಕಾಪಾಡಿದ ವ್ಯಕ್ತಿ  ಟೋನಿ ಪೆರ್ರಿ ಎಂದು ಗುರುತಿಸಲಾಗಿದೆ, ಈ ಕಾರ್ಯವನ್ನು ಗೌರವಿಸಿ ರೈಲ್ವೆ  ಇಲಾಖೆ ಅವರಿಗೆ   ಸನ್ಮಾನ ಮಾಡಿದೆ.

ಇದೀಗ ಈ ವಿಡಿಯೋ ವೈರಲ್ ಆಗಿದ್ದು ರೈಲು ಹಳಿಯ ಮೇಲೆ ವಿದ್ಯುತ್ ಶಾಕ್ ನಿಂದ  ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ.   ಪೆರ್ರಿ ಎಂಬ ವ್ಯಕ್ತಿ  ನಂತರ ಕೆಳಗೆ ಜಿಗಿದು ವ್ಯಕ್ತಿಯನ್ನು ಆ ವಿದ್ಯುತ್ ಶಾಕ್ ನಿಂದ ಕಾಪಾಡಿದ್ದಾರೆ.  ಆದರೆ ಪೆರ್ರಿಯನ್ನು ಬಿಟ್ಟು ಮತ್ತೆ ಯಾರು ಕಾಪಾಡಲು ಮುಂದಾಗುವುದಿಲ್ಲ,  ಇದರ ಜೊತೆಗೆ  ಕೆಲವೊಂದು ವ್ಯಕ್ತಿಗಳು ಆತನಿಗೆ  ಜಾಗರೂಕರಾಗಿರಿ  ಎಂದು ಹೇಳುತ್ತಾರೆ. ನಂತರ ಅವನು ಶಾಕ್ ಗೆ ಒಳಗಾಗಿದ ವ್ಯಕ್ತಿಯನ್ನು  ಟ್ರ್ಯಾಕ್‌ಗಳಿಂದ ಹೊರಗೆ ತರುತ್ತಾನೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಸೈಕಲ್ ಸವಾರಿ ವೇಳೆ ಬಿದ್ದ ಗೋರಿಲ್ಲಾ, ನೆಟ್ಟಿಜನ್​ಗಳಿಗೆ ಸಖತ್ ಮನರಂಜನೆ

ಪೆರ್ರಿ CBS ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಹೇಳಿರುವಂತೆ  “ಆ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ತನ್ನ ದೇಹದ ಮೇಲೆ ನಿಯಂತ್ರಣ ಇರಲಿಲ್ಲ.  ನಾನು ಆ ದಾರಿಯಲ್ಲಿ ಬರುತ್ತಿರುವಾಗ ಯಾರೋ ಹೇಳುವುದನ್ನು ನಾನು ಕೇಳಿದೆ, ‘ಅವನನ್ನು ಮುಟ್ಟಬೇಡಿ!’… ನಾನು ಕೂಡ ಈ ನೋಡಿದೆ ಆದರೆ  ನನಗೆ ಯಾಕೋ ಮನಸ್ಸು ತಡೆಯಲಿಲ್ಲ ಏನಾದರೂ ಮಾಡಿ ಆತನನ್ನು ಕಾಪಾಡಲೇ ಬೇಕು ಎಂದು  ರಕ್ಷಣೆ ಮಾಡಿದೆ.  ಒಂದು ವೇಳೆ ನಾನು ಆ ಸ್ಥಿತಿಯಲ್ಲಿದ್ದಿದ್ದಾರೆ. ನನಗೂ ಯಾರಾದರೂ ಸಹಾಯ ಮಾಡುತ್ತಿದ್ದರು. ಆದರೆ ನನಗೆ ಈ ಬಗ್ಗೆ ತೃಪ್ತಿ ಇದೆ,  ಖಂಡಿತ ನಾನು ದೊಡ್ಡ ವ್ಯಕ್ತಿಯಾಗಬೇಕೆಂದು ಈ ಕಾರ್ಯವನ್ನು ಮಾಡಿಲ್ಲ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.