Viral Video: ಶಾಲೆ ಪುನರಾರಂಭ; ಬ್ಯಾಂಡ್ ಬೀಟ್​ಗೆ ಹೆಜ್ಜೆ ಹಾಕುತ್ತಾ ಶಾಲೆಯ ಒಳಗೆ ಸಾಗಿದ ಮಕ್ಕಳು; ವಿಡಿಯೋ ನೋಡಿ | Delhi family hires band to celebrate reopening school viral video


Viral Video: ಶಾಲೆ ಪುನರಾರಂಭ; ಬ್ಯಾಂಡ್ ಬೀಟ್​ಗೆ ಹೆಜ್ಜೆ ಹಾಕುತ್ತಾ ಶಾಲೆಯ ಒಳಗೆ ಸಾಗಿದ ಮಕ್ಕಳು; ವಿಡಿಯೋ ನೋಡಿ

ಬ್ಯಾಂಡ್​ ಬೀಟ್​ಗೆ ನೃತ್ಯ ಮಾಡಿದ ಪೋಷಕರು, ಮಕ್ಕಳು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಲೆಯ ಬಾಗಿಲುಗಳು ತೆರೆಯುತ್ತಿದ್ದಂತೆಯೇ ಪೋಷಕರು ಖುಷಿಯಿಂದ ಮಕ್ಕಳನ್ನು ಶಾಲೆಗೆ ಬಿಡಲು ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ. ಇದೀಗ ವೈರಲ್ ಆದ ವಿಡಿಯೊವೊಂದರಲ್ಲಿ (Viral video) ಪೋಷಕರು ಮಗುವನ್ನು ಶಾಲೆಗೆ (School) ಬಿಡಲು ಬ್ಯಾಂಡ್ಅನ್ನು (Band) ಬಾಡಿಗೆಗೆ ತೆಗೆದುಕೊಂಡಿದ್ದಾರೆ. ಬ್ಯಾಂಡ್ ಬೀಟ್​ಗೆ ನೃತ್ಯ ಮಾಡುತ್ತಾ ಖುಷಿಯಿಂದ ಮಗುವನ್ನು ಶಾಲೆಗೆ ಕಳುಹಿಸಿಕೊಡುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ತಮ್ಮ ಕ್ಕಳನ್ನು ಶಾಲೆಗೆ ಬಿಡಲು ಬಂದಿದ್ದ ಪೋಷಕರು ಈ ಸಂತಸದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್ ಪ್ರದೇಶದ ಸ್ಪ್ರಿಂಗ್​ಡಲ್ಸ್​ ಶಾಲೆಯ ಹೊರಗೆ ಈ ದೃಶ್ಯವನ್ನು ರೆಕಾರ್ಡ್ ಮಾಡಲಾಗಿದೆ ಎಂಬುದು ವಿಡಿಯೊ ಶೀರ್ಷಿಕೆಯಿಂದ ತಿಳಿದು ಬಂದಿದೆ. ದೆಹಲಿಯಲ್ಲಿ ನವೆಂಬರ್ 1ರಿಂದ ಶಾಲೆಯಲ್ಲಿ ಎಲ್ಲಾ ತರಗತಿಗಳು ಪ್ರಾರಂಭಗೊಂಡಿವೆ. ನಗರದಲ್ಲಿ ಕೊವಿಡ್ 19 ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ:

Viral Video: ಸಫಾರಿಗೆ ಹೋದಾಗ ಸಿಂಹವನ್ನು ಕೆಣಕಿದ ವ್ಯಕ್ತಿ; ಆಮೇಲೇನಾಯ್ತು? ವಿಡಿಯೋ ನೋಡಿ

Viral Video: ಬಲೂನ್ ಆಟವಾಡುತ್ತಿದ್ದ ಕೋತಿ; ಮುಂದೇನಾಯ್ತು? ತಮಾಷೆ ವಿಡಿಯೊ ನೋಡಿ

TV9 Kannada


Leave a Reply

Your email address will not be published. Required fields are marked *