Viral Video: ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ ತಲೈವಾ ಅವರನ್ನು ಹೋಲುವ ವ್ಯಕ್ತಿಯ ವಿಡಿಯೋ – Megastar’s Pakistani doppelganger also mimicks the megastar and tries to imitate his unique style of acting


ನಟ ರಜನಿ ಕಾಂತ್ ಅವರಂತೆಯೇ ಸ್ಟೈಲ್, ಅವರಂತೆಯೇ ಲುಕ್, ಅವರಂತೆಯೇ ವಿಶಿಷ್ಟ ಶೈಲಿಯ ನಟನೆಯ ಮೂಲಕ ಸಾಕಷ್ಟು ಮಟ್ಟಕ್ಕೆ ಸುದ್ದಿಯಾಗಿದ್ದಾರೆ.

Viral Video: ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ ತಲೈವಾ ಅವರನ್ನು ಹೋಲುವ ವ್ಯಕ್ತಿಯ ವಿಡಿಯೋ

Pakistani Rajinikanth

Image Credit source: Zee News

ನೀವು ಸಾಮಾನ್ಯವಾಗಿ ನಿಮ್ಮ ನೆಚ್ಚಿನ ನಟ ನಟಿಯರನ್ನು ಭೇಟಿಯಾಗಬೇಕು, ಅವರೊಂದಿಗೆ ಸೆಲ್ಫಿ ತೆಗೆದು ಕೊಳ್ಳಬೇಕು ಎನ್ನುವ ಸಾಕಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತೀರಿ. ಅದೇ ರೀತಿ ನಟ ನಟಿಯರನ್ನು ಹೋಲುವ ಸಾಕಷ್ಟು ಜನರು ಇಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಟ್ಟದ ಫಾಲೋರ್ವಸ್ಗಳನ್ನು ಪಡೆದು ಅವರೂ ಕೂಡ ಸೆಲೆಬ್ರಿಟಿಗಳಾಗಿದ್ದಾರೆ. ಇಲ್ಲೊಬ್ಬ ಅದೇ ರೀತಿ ಫೇಮಸ್ ನಟನ ಹೋಲಿಕೆಯನ್ನು ಹೊಂದಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಹವಾ ಸೃಷ್ಟಿಸಿದ್ದಾನೆ.

ನಟ ರಜನಿ ಕಾಂತ್ ಅವರಂತೆಯೇ ಸ್ಟೈಲ್, ಅವರಂತೆಯೇ ಲುಕ್, ಅವರಂತೆಯೇ ವಿಶಿಷ್ಟ ಶೈಲಿಯ ನಟನೆಯ ಮೂಲಕ ಸಾಕಷ್ಟು ಮಟ್ಟಕ್ಕೆ ಸುದ್ದಿಯಾಗಿದ್ದಾರೆ.

ಹೌದು ಇವರು ಪಾಕಿಸ್ತಾನ ಮೂಲದ 62 ವರ್ಷದ ನಿವೃತ್ತ ಸರ್ಕಾರಿ ನೌಕರ ರೆಹಮತ್ ಗಶ್ಕೋರಿ. ಇವರು ನಟ ರಜನಿ ಕಾಂತ್ ಅವರ ಹೋಲಿಕೆಯನ್ನು ಹೊಂದಿದ್ದು ಇವರ ನಟನೆಯ ಕೆಲವೊಂದಿಷ್ಟು ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್ ಫೇಮಸ್ ಆಗಿದ್ದಾರೆ.

ಸಿಬಿಯಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ, ನಾನು ನನ್ನ ಲುಕ್ ಒಬ್ಬ ಮಹಾನ್ ನಟನನ್ನು ಹೋಲುತ್ತಿದೆ ಎಂಬುದರ ಬಗ್ಗೆ ನಾನು ಅಷ್ಟೋಂದು ತಲೆ ಕೆಡಿಸಿಕೊಂಡಿರಲ್ಲಿಲ್ಲ. ಆದರೆ ನನ್ನ ವೃತ್ತಿಯ ನಿವೃತ್ತಿಯ ನಂತರ ನನ್ನನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಂಡೆ. ನಂತರದ ದಿನಗಳಲ್ಲಿ ಜನರು ನನ್ನನ್ನು ಗುರುತಿಸತೊಡಗಿದರು. ಹೆಚ್ಚಾಗಿ ರಜನಿಕಾಂತ್ ಅಭಿಮಾನಿಗಳು ನನಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅರಬ್ ನ್ಯೂಸ್‌ನ ಸಂದರ್ಶನದಲ್ಲಿ ಇವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈಗ ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸುತ್ತೇನೆ, ಒಬ್ಬ ಭಾರತೀಯ ರಜನಿಕಾಂತ್ ಮತ್ತು ಒಬ್ಬರು ಪಾಕಿಸ್ತಾನಿ ರಜನಿಕಾಂತ್ ಎಂದು ಜನರಿಗೆ ತೋರಿಸಲು ಬಯಸುತ್ತೇನೆ ಎಂದು ಗಷ್ಕೋರಿ ಅವರು ನ್ಯೂಸ್ ಪೋರ್ಟಲ್‌ನಲ್ಲಿ ತಮ್ಮ ಆಸೆಯನ್ನು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.