
ಮಹಿಳೆ, ನಾಯಿ ಮತ್ತು ಕುದುರೆ
ಸ್ಕೇಟಿಂಗ್ ಮಾಡುತ್ತಿರುವ ಮಹಿಳೆಯೊಂದಿಗೆ ಸಾಕು ನಾಯಿ ಮತ್ತು ಕುದುರೆ ಓಡುತ್ತಿರುವ ಮನಮೋಹಕ ವಿಡಿಯೋ ವೈರಲ್ ಆಗುತ್ತಿದೆ. ಅದರ ವಿಡಿಯೋ ಇಲ್ಲಿದೆ ನೋಡಿ.
ಸಾಮಾಜಿಕ ಜಾಲತಾಣಗಳಲ್ಲಿ ಆಗೊಂದು, ಈಗೊಂದು ವೈರಲ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ತನ್ನ ಸಾಕು ನಾಯಿ (Dog) ಮತ್ತು ಕುದುರೆ (Horse)ಯೊಂದಿಗೆ ಮಹಿಳೆಯೊಬ್ಬಳು ಸ್ಕೇಟಿಂಗ್ (Skating) ಮಾಡುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಪ್ರಶಾಂತವಾದ ಪ್ರದೇಶದಲ್ಲಿನ ಮಹಿಳೆಯ ಸ್ಕೇಟಿಂಗ್ ಜೊತೆ ನಾಯಿ ಮತ್ತು ಕುದುರೆ ಓಡುತ್ತಿರುವ ಮನಮೋಹಕ ವಿಡಿಯೋ ನೆಟ್ಟಿಗರ ಕಣ್ಮನ ಸೆಳೆದಿದ್ದು, 7.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 3.60 ಲಕ್ಷಕ್ಕೂ ಅಧಿಕ ಲೈಕ್ಸ್ಗಳು ಬಂದಿವೆ.