Viral Video: ಸಿಎಂ ಜಗನ್ ಮೋಹನ್ ರೆಡ್ಡಿ ಬಂಗಿ ಜಂಪ್ ಮಾಡಿದ ವಿಡಿಯೋ ವೈರಲ್ | Viral Video Andhra Pradesh CM Jagan Mohan Reddy Bungee Jumping in New Zealand Watch Trending Video


Viral Video: ಸಿಎಂ ಜಗನ್ ಮೋಹನ್ ರೆಡ್ಡಿ ಬಂಗಿ ಜಂಪ್ ಮಾಡಿದ ವಿಡಿಯೋ ವೈರಲ್

ಬಂಗಿ ಜಂಪ್ ಮಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ

ಹೈದರಾಬಾದ್: ರಾಜಕಾರಣಿ ಎಂದಕೂಡಲೆ ನಮ್ಮ ಮನಸಿನಲ್ಲಿ ಜುಬ್ಬಾ, ಪೈಜಾಮ ಧರಿಸಿ, ನೆಹರೂ ಜಾಕೆಟ್ ಹಾಕಿಕೊಂಡವರು ಕಣ್ಮುಂದೆ ಬರುತ್ತಾರೆ. ಅವರಿಗೆ ರಾಜಕೀಯವನ್ನು ಬಿಟ್ಟರೆ ಬೇರಾವ ಆಕರ್ಷಣೆಗಳೂ ಇರುವುದಿಲ್ಲ ಎಂಬುದು ಹಲವರ ನಂಬಿಕೆ. ಆದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರ ಹಳೆಯ ವಿಡಿಯೋವೊಂದು ಭಾರೀ ವೈರಲ್ (Vral Video) ಆಗುತ್ತಿದ್ದು, ಈ ವಿಡಿಯೋದಲ್ಲಿ ಅವರು ಬಂಗಿ ಜಂಪಿಂಗ್ ಮಾಡುವುದನ್ನು ನೋಡಬಹುದು. ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಸಾಹಸಮಯ ವಿಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ.

ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಈ ವಿಡಿಯೋದಲ್ಲಿ ಅವರು ಸಾಹಸ ಕ್ರೀಡೆಗಳನ್ನು ಆನಂದಿಸುತ್ತಿರುವುದನ್ನು ನೋಡಬಹುದು. ನ್ಯೂಜಿಲೆಂಡ್‌ನಲ್ಲಿ ನಗುತ್ತಲೇ ಬಂಗಿ ಜಂಪಿಂಗ್ ಮಾಡಿರುವ ಜಗನ್ ಮೋಹನ್ ರೆಡ್ಡಿ ವಿಡಿಯೋ ವೈರಲ್ ಆಗಿದೆ.

ಸಾಹಸಪ್ರಿಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಾಕಷ್ಟು ಎತ್ತರದಿಂದ ಕೆಳಗೆ ಜಿಗಿದು ಅಲ್ಲಿಯೇ ನೇತಾಡುತ್ತಾರೆ. ಜಗನ್ ಮೋಹನ್ ರೆಡ್ಡಿ ಅವರ ಈ ವಿಡಿಯೋವನ್ನು ತಮ್ಮ ವೈಎಸ್​ ಜಗನ್ ಹೋಲಿಕ್ ಎಂಬ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಇದು ಸಾಕಷ್ಟು ಪ್ರಶಂಸೆಗಳನ್ನು ಪಡೆದಿದೆ.

TV9 Kannada


Leave a Reply

Your email address will not be published.