ವಿಮಾನದೊಳಗೆ ಸಿಗರೇಟ್ ಸೇದಿ ಈಗಾಗಲೇ ಒಂದು ಪ್ರಕರಣವನ್ನು ಮೈಮೇಲೆ ಎಳೆದುಕೊಂಡ ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಬಾಬಿ ಕಟಾರಿಯಾ ಇದೀಗ ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ರಸ್ತೆ ಮಧ್ಯೆ ಮದ್ಯ ಸೇವನೆ ಮಾಡಿದ್ದಕ್ಕೆ ಉತ್ತರಾಖಂಡ ಪೊಲೀಸರು ಕಟಾರಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಬಾಬಿ ಕಟಾರಿಯಾ
ಡೆಹ್ರಾಡೂನ್ನ ಜನನಿಬಿಡ ರಸ್ತೆಯಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋವೊಂದು ವೈರಲ್ ಆದ ನಂತರ ಉತ್ತರಾಖಂಡ್ ಪೊಲೀಸರು ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಬಾಬಿ ಕಟಾರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಮಾನದೊಳಗೆ ಸಿಗರೇಟ್ ಸೇದಿ ಈಗಾಗಲೇ ಪ್ರಕರಣವನ್ನು ಮೈಮೇಲೆ ಎಳೆದುಕೊಂಡ ಬೆನ್ನಲ್ಲೆ ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದಾರೆ. ಜುಲೈ 28 ರಂದು ಕಟಾರಿಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ರಸ್ತೆಗಳಲ್ಲಿ ಆನಂದಿಸಲು ಇದು ಸಮಯ” ಎಂಬ ಶೀರ್ಷಿಕೆಯನ್ನು ನೀಡಿ ರಸ್ತೆಯಲ್ಲಿ ಮದ್ಯ ಸೇವನೆ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಮಾಡಿದ್ದಲ್ಲದೆ ಭಾರೀ ಟೀಕೆಗೆ ಗುರಿಯಾಗಿತ್ತು.
ಡೆಹ್ರಾಡೂನ್ನ ವೀಡಿಯೊದಲ್ಲಿ, ಇನ್ಸ್ಟಾಗ್ರಾಮ್ನಲ್ಲಿ 6.3 ಲಕ್ಷ ಅನುಯಾಯಿಗಳನ್ನು ಹೊಂದಿರುವ ಕಟಾರಿಯಾ ರಸ್ತೆಯ ಮಧ್ಯೆ ಕುರ್ಚಿ, ಟೇಬಲ್ ಹಾಕಿ ಮದ್ಯ ಸೇವಿಸುತ್ತಿರುವುದನ್ನು ಕಾಣಬಹುದು. ಇದನ್ನು ಕಟಾರಿಯಾ ಅವರ ಸಹಾಯಕರು ಚಿತ್ರೀಕರಿಸಿದ್ದಾರೆ. ನಂತರ ಈ ವೀಡಿಯೊವನ್ನು “ರೋಡ್ ಅಪ್ನೆ ಬಾಪ್ ಕಿ” (ರಸ್ತೆ ನನ್ನ ತಂದೆಗೆ ಸೇರಿದೆ) ಎಂಬ ಹಾಡಿನೊಂದಿಗೆ ಅಪ್ಲೋಡ್ ಮಾಡಲಾಗಿದೆ.
ಈ ವಿಡಿಯೋ ವೈರಲ್ ಪಡೆಯುತ್ತಿದ್ದಂತೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಅವರು ಕಟಾರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಬಗ್ಗೆ ಉತ್ತರಾಖಂಡ್ ಪೊಲೀಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ.
सोशल मीडिया पर बॉबी कटारिया नामक युवक द्वारा सड़क पर अतिक्रमण कर खुले में शराब पीने संबंधी वायरल वीडियो का श्री Ashok Kumar IPS, DGP Sir द्वारा संज्ञान लेने के बाद #UttarakhandPolice ने बॉबी कटारिया के विरुद्ध 290/510/336/342 IPC व 67 IT Act के अंतर्गत मुकदमा पंजीकृत किया है। pic.twitter.com/DJ4xOadw6q
— Uttarakhand Police (@uttarakhandcops) August 11, 2022
ಪೊಲೀಸರ ಟ್ವೀಟ್ಗೆ ಪ್ರತ್ಯುತ್ತರ ನೀಡುತ್ತಾ ಅನೇಕ ಬಳಕೆದಾರರು ಗೌರವ್ ಖಂಡೇಲ್ವಾಲ್ ಎಂದು ಗುರುತಿಸಿದ ವ್ಯಕ್ತಿಯೊಂದಿಗೆ ಕಟಾರಿಯಾ ಅವರ ಅನೇಕ ಇತರ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಖಂಡೇಲ್ವಾಲ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಹೆಚ್ಚಿನ ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ