Viral Video: ಸಿಸಿ ಕ್ಯಾಮರಾ ಮುಂದೆ ಕಳ್ಳನ ಬ್ರೇಕ್ ಡಾನ್ಸ್! ವಿಡಿಯೊ ಮಜವಾಗಿದೆ ನೀವೇ ನೋಡಿ | Man doing break dance after theft in front of camera video goes viral in social media


Viral Video: ಸಿಸಿ ಕ್ಯಾಮರಾ ಮುಂದೆ ಕಳ್ಳನ ಬ್ರೇಕ್ ಡಾನ್ಸ್! ವಿಡಿಯೊ ಮಜವಾಗಿದೆ ನೀವೇ ನೋಡಿ

ಕ್ಯಾಮರಾ ಮುಂದೆ ಕಳ್ಳನ ಬ್ರೇಕ್​ ಡಾನ್ಸ್​

ಕಳ್ಳತನ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಸಿಕ್ಕಿಹಾಕಿಕೊಂಡ ಅದೆಷ್ಟೋ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿ ಕಳ್ಳತನಕ್ಕೆ ಮುಂದಾಗಿದ್ದಾನೆ. ಆದರೆ ಎದುರಿಗಿದ್ದ ಸಿಸಿಟಿವಿ ಕಂಡಿದ್ದೇ ಬ್ರೇಕ್ ಡಾನ್ಸ್ ಮಾಡುತ್ತಾ ಹಿಂದೆ ಸರಿದಿದ್ದಾನೆ. ತಮಾಷೆಯ ವಿಡಿಯೊ ಇದೀಗ ಸಕತ್ ವೈರಲ್ ಆಗಿದೆ.

ಇಂಟರ್​ನೆಟ್​ನಲ್ಲಿ ಫುಲ್ ತಮಾಷೆಯ ವಿಡಿಯೊಗಳೇ ಹೆಚ್ಚು ವೈರಲ್ ಆಗುತ್ತವೆ. ಕೆಲವೊಂದಿಷ್ಟು ವಿಡಿಯೊಗಳು ಬಿದ್ದು ಬಿದ್ದು ನಗುವಷ್ಟು ಮಜವಾಗಿರುತ್ತವೆ. ವಿಡಿಯೊದಲ್ಲಿ ಗಮನಿಸುವಂತೆ ಕಳ್ಳ ಶಾಪಿಂಗ್ ಮಾಲ್​ಗೆ ಹೋಗಿದ್ದಾನೆ. ಅಲ್ಲೇ ಇದ್ದ ತಿಂಡಿಯ ಪ್ಯಾಕೆಟ್ಅನ್ನು ಯಾರಿಗೂ ಕಾಣದಂತೆ ಕದಿಯಲು ಮುಂದಾಗಿದ್ದಾನೆ. ಆದರೆ ಎದುರಿದ್ದ ಕ್ಯಾಮರಾ ಕಂಡಿದ್ದೇ ಭಯವಾಗಿ ಬ್ರೇಕ್ ಡಾನ್ಸ್ ಮಾಡಲು ಪ್ರಾರಂಭಿಸಿದ್ದಾನೆ. ತಿಂಡಿಯ ಪ್ಯಾಕೆಟ್ಅನ್ನು ಮೊದಲಿದ್ದ ಜಾಗಕ್ಕೆ ಇಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಈ ತಮಾಷೆಯ ವಿಡಿಯೊ ಸಕತ್ ವೈರಲ್ ಆಗಿದೆ.

ತಿಂಡಿಯ ಪ್ಯಾಕೆಟ್ಅನ್ನು ತನ್ನ ಶರ್ಟ್ ಒಳಗೆ ಬಚ್ಚಿಟ್ಟುಕೊಳ್ಳುತ್ತಿದ್ದಂತೆಯೇ ಸಿಸಿಟಿವಿ ಕ್ಯಾಮರಾ ಕಂಡಿದೆ. ತಾನೇನು ಮಾಡಿಯೇ ಇಲ್ಲ ಅನ್ನುವ ರೀತಿ ಡಾನ್ಸ್ ಮಾಡುತ್ತಾ ತಿಂಡಿಯ ಪ್ಯಾಕೆಟ್​ಅನ್ನು ಅಲ್ಲೇ ಇಟ್ಟು ಹಿಂದೆ ಸರಿದಿದ್ದಾನೆ. 16 ಸೆಕೆಂಡುಗಳಿರುವ ಈ ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಸುಮಾರು 6 ಲಕ್ಷ 58 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡುತ್ತಾ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಬಲೂನ್ ಆಟವಾಡುತ್ತಿದ್ದ ಕೋತಿ; ಮುಂದೇನಾಯ್ತು? ತಮಾಷೆ ವಿಡಿಯೊ ನೋಡಿ

Viral Video: ಮುದ್ದಾದ ಪುಟ್ಟ ನಾಯಿ ಮರಿಯೊಂದಿಗೆ ನೃತ್ಯ ಮಾಡಿದ ಯುವಕ! ಕ್ಯೂಟ್ ವಿಡಿಯೊ ನೀವೂ ನೋಡಿ

TV9 Kannada


Leave a Reply

Your email address will not be published. Required fields are marked *