Viral Video: ಸುರಿದ ಧಾರಾಕಾರ ಮಳೆಗೆ ರಸ್ತೆಗೆ ಬಂದ ಮೀನುಗಳು! ಎಲ್ಲಿ ಇದು ಗೊತ್ತಾ? | Viral Video Fishes on the road with torrential rain video gone viral, its true or Fake


Viral Video: ಸುರಿದ ಧಾರಾಕಾರ ಮಳೆಗೆ ರಸ್ತೆಗೆ ಬಂದ ಮೀನುಗಳು! ಎಲ್ಲಿ ಇದು ಗೊತ್ತಾ?

ರಸ್ತೆಯಲ್ಲಿ ಈಜಾಡುತ್ತಿರುವ ಮೀನುಗಳು

ಅಸ್ಸಾಂನಲ್ಲಿ ಸುರಿದ ಭಾರಿ ಮಳೆಗೆ ಗುವಾಹಟಿಯ ರಸ್ತೆಯಲ್ಲಿ ತುಂಬಿದ ನೀರಿನಲ್ಲಿ ಮೀನುಗಳು ಈಜುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗುವ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ದೃಶ್ಯಾವಳಿ ಎಲ್ಲಿದ್ದು? ವಿಡಿಯೋದ ಅಸಲಿಯತ್ತೇನು ಎಂಬುದು ಈ ಸುದ್ದಿಯಲ್ಲಿದೆ ನೋಡಿ.

ಗುವಾಹಟಿ: ಅಸ್ಸಾಂನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ನಡುವೆ ಗುವಾಹಟಿಯ ರಸ್ತೆಯಲ್ಲಿ ತುಂಬಿದ ಮಳೆ ನೀರಿನಲ್ಲಿ ಮೀನುಗಳು ಈಜುತ್ತಿರುವುದು ಕಂಡುಬಂದಿದೆ ಎಂದು ಹೇಳುವ ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚಿನ ಅಸ್ಸಾಂ ಪ್ರವಾಹದಲ್ಲಿ ‘ಗುವಾಹಟಿಯಲ್ಲಿ ಮೀನುಗಳು ರಸ್ತೆಯಲ್ಲಿ ಈಜುತ್ತಿವೆ’ ಎಂದು ಟ್ವಿಟರ್ ವಿಡಿಯೋದಲ್ಲಿ ಶೀರ್ಷಿಕೆ ನೀಡಲಾಗಿದೆ. ಅಷ್ಟಕ್ಕೂ ಅಸ್ಸಾಂನ ಗುವಾಹಟಿಯದ್ದು ಎನ್ನಲಾಗಿರುವ ಈ ವಿಡಿಯೋ ಸುಳ್ಳು. ಹಲವಾರು ಟ್ವಿಟ್ಟರ್ ಬಳಕೆದಾರರು ನಕಲಿ ವೀಡಿಯೊವನ್ನು ಗುವಾಹಟಿಯದ್ದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

TV9 Kannada


Leave a Reply

Your email address will not be published.