Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ | Man Earns Money During Inconvenience Caused By Rain Internet Loves The Idea


Earning Sense : ಮಳೆ ಬರುತ್ತಿದೆ ಎಂದು ಎಲ್ಲೋ ಒಂದು ಕಡೆ ಕೈಕಟ್ಟಿ ನಿಲ್ಲಬಹುದಿತ್ತಿಲ್ಲವೆ? ಆದರೆ ಹಾಗೆ ಮಾಡದೆ ಆ ಸಮಯವನ್ನೂ ಹಣಗಳಿಕೆಯ ಉಪಾಯದಂತೆ ಪರಿವರ್ತಿಸಿಕೊಂಡಿದ್ದಾರೆ ಈ ವ್ಯಕ್ತಿ. ವಿಡಿಯೋ ನೋಡಿ.

Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ

ಹೇಗಿದೆ ಈ ಉಪಾಯ?

Viral Video : ಇತ್ತೀಚೆಗೆ ಬೆಂಗಳೂರು ಮಳೆಯಿಂದಾಗಿ ಜಲಾವೃತಗೊಂಡಾಗ ಜನರು ಬೀದಿಯಿಂದ ಬೀದಿಗೆ ಸಂಚರಿಸಲು ಟ್ರ್ಯಾಕ್ಟರ್, ಬುಲ್ಡೋಜರ್​ಗಳ ಮೊರೆ ಹೋಗಿರುವ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಮಳೆ ಎನ್ನವುದು ಏನೆಲ್ಲ ಅಪಾಯ, ಉಪಾಯಕ್ಕೆ ನಾಂದಿ ಹಾಡುತ್ತದೆ ಅಲ್ಲವೆ? ಈಗಿಲ್ಲಿ ಈ ವಿಡಿಯೋದಲ್ಲಿರುವ ವ್ಯಕ್ತಿ, ನಿಂತಲ್ಲೇ ಹೀಗೊಂದು ‘ಅರ್ಥ’ಪೂರ್ಣ ಉಪಾಯ ಕಂಡುಕೊಂಡಿದ್ದಾರೆ. ಪಾದಚಾರಿ ಮಹಿಳೆಯರಿಬ್ಬರು ರಸ್ತೆ ದಾಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆಗ ವ್ಯಕ್ತಿಯೊಬ್ಬರು ಮರದಗಾಡಿಯೊಂದನ್ನು ತರುತ್ತಾರೆ. ಆಗ ಅವರಿಬ್ಬರೂ ಅದರ ಮೇಲೆ ಏರಿ ನಿಲ್ಲುತ್ತಾರೆ. ಈ ವ್ಯಕ್ತಿ ಗಾಡಿಯನ್ನು ತಳ್ಳಿ ರಸ್ತೆ ದಾಟಿಸುತ್ತಾರೆ. ನಂತರ ಅವರಿಂದ ಹಣ ಪಡೆಯುತ್ತಾರೆ. ಇದನ್ನು ನೋಡಿದ ಉಳಿದ ಪಾದಚಾರಿಗಳೂ ಈ ವ್ಯಕ್ತಿಯ ಸಹಾಯ ಪಡೆಯುತ್ತಾ ಹೋಗುತ್ತಾರೆ; ಅನಿವಾರ್ಯತೆಗೆ ತಕ್ಕಂತೆ ಆಲೋಚಿಸುತ್ತಾ ಹೋದಾಗ ಇಂಥ ಕ್ರಿಯಾತ್ಮಕ ಉಪಾಯಗಳು ಖಂಡಿತ ಹೊಳೆಯುತ್ತವೆ ಎನ್ನುವುದಕ್ಕೆ ಮಾದರಿ ಈ ವಿಡಿಯೋ.

To earn money during inconvenience . from Damnthatsinteresting

ಗುರುವಾರದಂದು ಸಾಮಾಜಿಕ ಮಾಧ್ಯಮ, ರೆಡ್ಡಿಟ್‌ನಲ್ಲಿ BAlfonzo ಎಂಬ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹರಿಯುವ ನೀರಿನಲ್ಲಿ ಬರಿಗಾಲಿನಲ್ಲಿ ಓಡುತ್ತ ಪಾದಚಾರಿಗಳನ್ನು ಆ ಬದಿಗೆ ತಲುಪಿಸುತ್ತಾರೆ ಈ ವ್ಯಕ್ತಿ. ಪಡೆದ ಹಣವನ್ನಿಟ್ಟುಕೊಳ್ಳಲು ಈತ ಮಾಡಿದ ಉಪಾಯ ಗಮನಿಸಿದಿರಾ?; ಪ್ಲಾಸ್ಟಿಕ್ ಬಾಟಲಿ!

ಈ ವಿಡಿಯೋ ಒಂದು ದಿನದಲ್ಲಿ 55,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. 800 ಕ್ಕೂ ಹೆಚ್ಚು ರೆಡ್ಡಿಟ್ ಖಾತೆದಾರರು ಈ ವಿಡಿಯೋ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಾರೆ.

‘ವ್ಯವಹಾರದ ಮೊದಲ ನಿಯಮ; ಅಗತ್ಯವನ್ನು ಕಂಡುಕೊಂಡು ಅದರಲ್ಲಿ ತೊಡಗಿಕೊಳ್ಳಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು, ‘ವ್ಯಾಪಾರದ ಎರಡನೇ ನಿಯಮ; ಸಮಸ್ಯೆಯನ್ನು ಸೃಷ್ಟಿಸಿ, ಪರಿಹಾರವನ್ನು ಮಾರಾಟರೂಪಕ್ಕೆ ತಿರುಗಿಸಿಕೊಳ್ಳಿ (ಈ ಪರಿಸ್ಥಿತಿಗೆ ಇದು ಅನ್ವಯಿಸುವುದಿಲ್ಲ)’ ಎಂದಿದ್ದಾರೆ. ಹೀಗೆ ಅನೇಕರು ವ್ಯವಹಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರತಿಕ್ರಿಯೆಯಲ್ಲಿ ಪ್ರಸ್ತಾಪಿಸುತ್ತಾ ಚರ್ಚಿಸಿರುವುದು ಆಸಕ್ತಿಕರವಾಗಿದೆ.

ಮೈಚಳಿಬಿಟ್ಟರೆ ಬದುಕಲು ನೂರೆಂಟು ಉಪಾಯಗಳು!

TV9 Kannada


Leave a Reply

Your email address will not be published.