Viral Video: ‘ಸೆರಗನ್ನು ಮೇಲೇರಿಸಿಕೊಳ್ಳಿ!’ ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ | Attention to All Moral Teachers Hindustani Classical Vocalist Akanksha Grover reel went viral


Moral Teachers : ‘ನೀವೇಷ್ಟೇ ಟ್ರೋಲ್ ಮಾಡಿ, ನಾ ಮಗದಷ್ಟು ಚಿಗಿಯುತ್ತೇನೆ. ನನ್ನ ಎಡೆಯಲ್ಲಿ ಏನಿದೆ ಎನ್ನುವುದಕ್ಕಿಂತ ನಿಮ್ಮ ಎಡೆಯಲ್ಲಿ ಏನು ಬಿದ್ದಿದೆ ನೋಡಿ’ ಎನ್ನುವ ಆಕಾಂಕ್ಷಾ ಗ್ರೋವರ್ ಬೈಠಕ್ ಸಂಸ್ಕೃತಿಯನ್ನು ಮತ್ತೆ ಚಾಲ್ತಿಗೆ ತರಲು ಪ್ರಯತ್ನಿಸುತ್ತಿದ್ದಾರೆ.

Viral Video: 'ಸೆರಗನ್ನು ಮೇಲೇರಿಸಿಕೊಳ್ಳಿ!' ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಹಿಂದೂಸ್ತಾನಿ ಗಾಯಕಿ ಆಕಾಂಕ್ಷಾ ಗ್ರೋವರ್

Hindustani Classical Artist : ನಿಮ್ಮ ಸೆರಗನ್ನು ಸ್ವಲ್ಪ ಮೇಲೇರಿಸಿಕೊಳ್ಳಬಹುದೆ? ನಿಮ್ಮ ಪಾದಗಳು ಮುಚ್ಚುವಂತೆ ಉಡಬಹುದೆ? ಮೈಪೂರ್ತಿ ಮುಚ್ಚುವಂಥ ಬಟ್ಟೆ ಧರಿಸಬಹುದೆ? ಎಂದು ಕೇಳುತ್ತೀರಲ್ಲ, ನಾನೇನು ಧರಿಸುತ್ತೇನೋ ಬಿಡುತ್ತೇನೋ ಅದೆಲ್ಲ ನಿಮಗೆ ಏಕೆ? ನನ್ನಿಚ್ಛೆಯಂತೆ ಉಡುತ್ತೇನೆ, ನೀವೇನು ನನ್ನ ಉಡುಪಿನ ವಿನ್ಯಾಸಕರೆ?, ನನ್ನ ಗಂಡನಾಗುವವರೆ? ಎಂದು ಸಂಸ್ಕೃತಿ ರಕ್ಷಕರಿಗೆ ಖಡಕ್ಕಾಗಿ ಆವಾಝ್ ಹಾಕಿದ್ದಾರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ಆಕಾಂಕ್ಷಾ ಗ್ರೋವರ್ (Akanksha Grover). ಈ ಕೆಳಗಿನ ವಿಡಿಯೋ ನೋಡಿ.

ಹಿಂದೂಸ್ತಾನಿ ಶಾಸ್ತ್ರೀಯ ಮತ್ತ ಲಘು ಸಂಗೀತ ಕಲಾವಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಪದವಿ ಪಡೆದ ಈಕೆ ತಾನೊಬ್ಬ ‘ಸ್ವತಂತ್ರ ಕಲಾವಿದೆ’ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಕಲಾವಿದರು ಮೂಲತಃ ಸ್ವತಂತ್ರ ಮನಸ್ಥಿತಿಯವರು, ಮತ್ತೇನದರಲ್ಲಿ ಸ್ವತಂತ್ರ ಎಂದು ಹೇಳುವ ಅವಶ್ಯಕತೆ ಇದೆ? ಎಂದು ನಿಮಗನ್ನಿಸಬಹುದು. ಈಕೆ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬೈಠಕ್​ಗಳ ಝಲಕ್​ಗಳನ್ನು ಹಾಕಿದಾಗೆಲ್ಲಾ ಅನೇಕರು ಈಕೆಯ ಭಾವಪೂರ್ಣ ಗಾಯನಕ್ಕೆ ಮಾರುಹೋಗಿ ತುಂಬುಹೃದಯದಿಂದ ಪ್ರತಿಕ್ರಿಯಿಸುತ್ತಾರೆ. ಆದರೆ ನೈತಿಕ ಬೋಧಕರು ಅಲ್ಲಿಯೂ ನುಸುಳಿ ಸಂಸ್ಕೃತಿ ಪಾಠ ಶುರುಮಾಡಿಬಿಡುತ್ತಾರೆ! ಅಂಥವರಿಗಾಗಿ ಈಕೆ ಈ ಮೇಲಿನ ವಿಡಿಯೋ ಮಾಡಿರುವುದು.

ಆಕಾಂಕ್ಷಾ ಸಂಗೀತವೊಂದೇ ತನ್ನ ಬದುಕು ಎಂದು ಬದುಕುತ್ತಿರುವಾಕೆ. ಹಿರಿಯ ಹಿಂದೂಸ್ತಾನಿ ಕಲಾವಿದೆ ಶಾಶ್ವತಿ ಮಂಡಲ್​ (Shasvati Mandal) ಅವರ ಶಿಷ್ಯೆ. ಕೊರೊನಾದಿಂದಾಗಿ ಅನೇಕ ಕಲಾವಿದರಿಗೆ ಡಿಜಿಟಲ್ ಮಾಧ್ಯಮವೇ ಆಸರೆ ಎನ್ನಿಸುವ ಸಂದರ್ಭದಲ್ಲಿಯೇ ಈಕೆ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮೂಲಕ ಸಂಗೀತಾಸಕ್ತರ ಗಮನ ಸೆಳೆದಾಕೆ. ಬೈಠಕ್​ ಸಂಸ್ಕೃತಿಯನ್ನು ಮತ್ತೆ ಚಾಲ್ತಿಗೆ ತರುವಲ್ಲಿ ಆಸ್ಥೆ ವಹಿಸುತ್ತಿರುವಾಕೆ. ಗಝಲ್​, ಹಳೆಯ ಹಿಂದಿ ಚಿತ್ರಗೀತೆಗಳಿಗೆ ದನಿಯಾಗುತ್ತಿರುವಾಕೆ.

ಸಂಗೀತ ಜಗತ್ತಿನ ಭಾಷೆಯಾಗಬೇಕು ಎನ್ನುವ ಈಕೆ ಸಮಾನತೆಯಲ್ಲಿ ನಂಬಿಕೆ ಉಳ್ಳಾಕೆ. ಹುಟ್ಟಿದ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎನ್ನುವುದನ್ನು ಆಕೆ ತನ್ನ ಸಂಗೀತ, ಜೀವನಶೈಲಿ ಮತ್ತು ವಿಚಾರಗಳೊಂದಿಗೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಹೆಜ್ಜೆ ಇಡುತ್ತಿರುವಾಕೆ. ‘ಸೀಕ್ರೇಟ್​ ಬೈಠಕ್’​ ಎಂಬ ಪರಿಕಲ್ಪನೆಯಡಿ ಲತಾ ಮಂಗೇಶ್ಕರ್​, ಆಶಾ ಭೋಸ್ಲೆ ಹಾಡುಗಳೊಂದಿಗೆ ಗಝಲ್​ಗಳನ್ನು ಈಕೆ ಹಾಡುತ್ತಿರುತ್ತಾರೆ.

TV9 Kannada


Leave a Reply

Your email address will not be published. Required fields are marked *