Viral Video: ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರು! ವಿಡಿಯೊ ಫುಲ್ ವೈರಲ್ | Thieves theft the scooter and crash into parked car video goes viral in social media


Viral Video: ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರು! ವಿಡಿಯೊ ಫುಲ್ ವೈರಲ್

ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರು

ಕಳ್ಳತನಕ್ಕೆ ಮುಂದಾದರೆ ಏನಾಲ್ಲಾ ಪಜೀತಿಗಳು ಉಂಟಾಗುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೊ ವೈರಲ್ ಆಗಿದೆ. ಇಲ್ಲಿಬ್ಬರು ಕಳ್ಳರು, ಸ್ಕೂಟರ್​ ಕದಿಯುವ ಅವಸರದಲ್ಲಿ ಎದುರಿಗಿದ್ದ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ಜನರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವೇಗವಾಗಿ ಸ್ಕೂಟರ್​ ಓಡಿಸಿ ಎದುರಿಗೆ ನಿಂತಿದ್ದ ಕಾರಿಗೆ ಗುದ್ದಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸೋಷಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದೆ.  ಘಟನೆ ಇಂಗ್ಲೆಂಡ್​ನ ಮ್ಯಾಂಚೆಸ್ಟರ್ ಎಂಬ ನಗರದಲ್ಲಿ ನಡೆದಿದೆ. ವಾಕಿಂಗ್​ ಮಾಡುತ್ತಿದ್ದ ಓರ್ವರು ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಕಳ್ಳರನ್ನು ಮಾತನಾಡಿಸುತ್ತಿದ್ದಂತೆಯೇ, ಈ ಸ್ಕೂಟರ್ ಕದ್ದಿದ್ದಲ್ಲ ಎನ್ನುತ್ತಾ ಇಬ್ಬರು ಕಳ್ಳರು ಸ್ಕೂಟರ್ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಾರೆ. ಸ್ಕೂಟರ್ ಸ್ಟಾರ್ಟ್ ಆಗಿದ್ದೇ ತಡ ಅವಸರದಲ್ಲಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ ಅವಸರದಲ್ಲಿ ಹೋಗಿ ಎದುರಿಗೆ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅಪಘಾತದ ಪರಿಣಾಮ ಓರ್ವರಿಗೆ ಗಾಯವಾಗಿದ್ದು ರಸ್ತೆಯಲ್ಲಿ ಕಿರುಚಾಡುತ್ತಿದ್ದರು. ಇನ್ನೋರ್ವರು ಬಿದ್ದ ಬೈಕ್ಅನ್ನು ಮೇಲೆತ್ತಿ ಪರಾರಿಯಾಗಿದ್ದಾರೆ ಎಂದು ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.

ಅಪಘಾತದ ಪರಿಣಾಮ ಓರ್ವರಿಗೆ ಗಾಯವಾಗಿದ್ದು ಕೈಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡು ಆ್ಯಂಬುಲೆನ್ಸ್​ಗೆ ಫೋನ್ ಮಾಡಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಾರೆ. ಆದರೆ ಜನರು ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆಯೇ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಈ ದೃಶ್ಯದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ರೈಲಿನಲ್ಲಿ ತಾತ್ಕಾಲಿಕ ಸೀಟ್ ತಯಾರಿಸಿಕೊಂಡು ಕುಳಿತ ಪ್ರಯಾಣಿಕ; ಹೇಗಂತೀರಾ? ವಿಡಿಯೊ ನೋಡಿ

Viral Video: ಗ್ಲಾಸಿನಲ್ಲಿದ್ದ ನೀರನ್ನು ಗಟಗಟನೇ ಕುಡಿದ ದೈತ್ಯ ನಾಗರ ಹಾವು!

TV9 Kannada


Leave a Reply

Your email address will not be published. Required fields are marked *