
ವೈರಲ್ ಆದ ನಾಯಿ
ಈಜುಕೊಳದ ಬಳಿ ನಾಯಿಯೊಂದು ಕುಳಿತುಕೊಳ್ಳುವ ಹಾಸನದ ಮೇಲೆ ಮನುಷ್ಯರಂತೆ ಕುಳಿತುಕೊಂಡ ವಿಡಿಯೋ ವೈರಲ್ ಆಗುತ್ತಿದ್ದು, ನಾಯಿಯ ತುಂಟಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಪ್ರೀತಿಯಿಂದ ಸಾಕಿರುವ ಬೆಕ್ಕು ಮತ್ತು ನಾಯಿಗಳು (Cat and Dog) ಮಾಡುವ ತುಂಟಾಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಇವುಗಳು ಮನುಷ್ಯರಂತೆ ನಡೆದುಕೊಳ್ಳುತ್ತವೆ. ಇದಕ್ಕೆ ನಿದರ್ಶನವೆಂಬಂತೆ, ಈಜು ಕೊಳ (Swimming Pool)ದ ಬಳಿ ನಾಯಿಯೊಂದು ಮನುಷ್ಯರಂತೆ ಕುಳಿತು ಸಮಯ ಕಳೆಯುವ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮನಸೋತಿದ್ದಾರೆ. ವೈರಲ್ ವಿಡಿಯೋ (Viral video)ದಲ್ಲಿರುವಂತೆ, ಸ್ವಿಮ್ಮಿಂಗ್ ಪೂಲ್ ಬಳಿ ಕುಳಿತುಕೊಳ್ಳುವ ಹಾಸನದ ವ್ಯವಸ್ಥೆ ಇದೆ. ಇದರ ಮೇಲೆ ನಾಯಿ (Dog)ಯೊಂದು ಕನ್ನಡಕವನ್ನು ಹಾಕಿ ಹಾಯಾಗಿ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತಿದೆ. ಅಲ್ಲದೆ ಪಕ್ಕದಲ್ಲಿ ದಿಂಬನ್ನೂ ಇಟ್ಟುಕೊಂಡಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ನಾಯಿ ವಿಶ್ರಮಿಸುತ್ತಿದ್ದ ಸ್ಥಳವನ್ನು ನಾಯಿಯಿಂದ ಹುಷಾರಾಗಿರಿ ಎಂಬ ಸೂಚನಾ ಫಲಕವನ್ನು ಹಾಕಲಾಗಿದೆ. ಇದರ ವಿಡಿಯೋವನ್ನು AGuyandAGolden ಎಂಬ ಟ್ವಿಟರ್ ಖಾತೆಯಲ್ಲಿ ”ಕಾವಲು ನಾಯಿ ಕರ್ತವ್ಯ” ಎಂಬ ಶೀರ್ಷಿಕೆ ಬರೆದು ಹಂಚಿಕೊಳ್ಳಲಾಗಿದೆ.