ಹೂವಿನ ಟೋಪಿ ಧರಿಸಿ ನಿದ್ರಿಸುತ್ತಿರುವ ಮುದ್ದಾದ ಬಾತುಕೋಳಿ
ದಿನಪೂರ್ತಿ ಕೆಲಸ, ಒತ್ತಡ, ಚಿಂತೆ, ಗಡಿಬಿಡಿ ಇವೆಲ್ಲಾ ಹೊಂದಿರುವ ಜೀವನ ಶೈಲಿಯಲ್ಲಿ ಬಿಡುವು ಮಾಡಿಕೊಳ್ಳುವುದೇ ಕಷ್ಟ. ಸಿಕ್ಕ ಬಿಡುವಿನಲ್ಲಿ ಮನಸ್ಸಿಗೆ ಹಿತ ಅನಿಸುವ ದೃಶ್ಯಗಳು ಬಹುಬೇಗ ಇಷ್ಟವಾಗುತ್ತವೆ. ಅದರಲ್ಲಿಯೂ ನಿಸರ್ಗ, ಪರಿಸರ, ಪ್ರಾಣಿ- ಪಕ್ಷಿಗಳ ಕಲರವ ಇಂತಹ ದೃಶ್ಯಗಳು ನಮ್ಮ ಎಲ್ಲಾ ಆಯಾಸ ನೋವು ಒತ್ತಡವನ್ನು ಕ್ಷಣ ಮಾತ್ರದಲ್ಲಿ ದೂರ ತಳ್ಳುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿಯೂ ಮುದ್ದಾದ ಬಾತುಕೋಳಿಯು ನಿದ್ರಿಸುತ್ತಿದೆ. ಮರಿ ಬಾತುಕೋಳಿಯು ನೋಡಲು ತುಂಬಾ ಸುಂದರವಾಗಿದೆ. ಹೂವಿನ ಟೋಪಿ ಧರಿಸಿಕೊಂಡಿದೆ. ಕಣ್ಮಚ್ಚಿಕೊಂಡು ಆರಾಮವಾಗಿ ನಿದ್ರಿಸುತ್ತಿದೆ. ಕ್ಯೂಟ್ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಹೆಚ್ಚು ಇಷ್ಟ ಪಟ್ಟಿದ್ದಾರೆ.
ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆಯೇ ವಿಡಿಯೊ ಪೋಸ್ಟ್ ಮಾಡಲಾಗಿದ್ದು ಸೋಮವಾರದ ಮನಸ್ಥಿತಿ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ. ಬಾತುಕೋಳಿ ಮರಿಯು ಮುದ್ದಾಗಿದ್ದು, ಸುತ್ತಲೂ ಹಸಿರು ಎಲೆಗಳು ಜೊತೆಗೆ ಹೂವಿನ ಟೋಪಿ ಧರಿಸಿ ನಿದ್ರಿಸುತ್ತಿದೆ. ಆಳವಾದ ನಿದ್ರೆಗೆ ಜಾರುತ್ತಿದ್ದಂತೆಯೇ ಹೂವಿನ ಟೋಪಿ ಕೆಳಗೆ ಬೀಳುತ್ತದೆ. ಮನಮೆಚ್ಚುವಂತಿರುವ ದೃಶ್ಯ ಇದೀಗ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.