Viral Video: 126 ಪ್ರಯಾಣಿಕರಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನ; ಮೂವರ ಸ್ಥಿತಿ ಗಂಭೀರ | Viral Video: Airplane Catches Fire At US Airport After Landing Gear Collapses Passengers admitted to Hospital


Viral Video: 126 ಪ್ರಯಾಣಿಕರಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನ; ಮೂವರ ಸ್ಥಿತಿ ಗಂಭೀರ

ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನವಾದ ದೃಶ್ಯ

Image Credit source: NDTV

ಬೆಂಕಿ ಹೊತ್ತಿಕೊಂಡು ರನ್‌ವೇಯಿಂದ ಕೆಳಗಿಳಿದ ನಂತರ ವಿಮಾನವು ಕ್ರೇನ್ ಟವರ್ ಮತ್ತು ಆ ಪ್ರದೇಶದಲ್ಲಿನ ಸಣ್ಣ ಕಟ್ಟಡ ಸೇರಿದಂತೆ ಹಲವಾರು ಕಡೆ ಡಿಕ್ಕಿ ಹೊಡೆದಿದೆ.

ವಾಷಿಂಗ್ಟನ್: ಅಮೆರಿಕಾದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Miami International Airport) 126 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ರನ್‌ವೇಯಲ್ಲಿ ಹಾನಿಗೀಡಾದ ಹಿನ್ನೆಲೆಯಲ್ಲಿ ಬೆಂಕಿ (Fire Accident) ಹೊತ್ತಿಕೊಂಡಿದೆ. ಮಂಗಳವಾರ ಸಂಜೆ ಡೊಮಿನಿಕನ್ ರಿಪಬ್ಲಿಕ್‌ನ ಸ್ಯಾಂಟೋ ಡೊಮಿಂಗೊದಿಂದ ರೆಡ್ ಏರ್ ಫ್ಲೈಟ್ ಆಗಮಿಸಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂವರು ಗಾಯಗೊಂಡಿದ್ದಾರೆ.

ಈ ಘಟನೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಗ್ನಿಶಾಮಕ ದಳದವರು ವಿಮಾನವನ್ನು ಬಿಳಿ ರಾಸಾಯನಿಕ ನೊರೆ ಸಿಂಪಡಿಸಿ, ಬೆಂಕಿ ಆರಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದ ಕೂಡಲೆ ಪ್ರಯಾಣಿಕರು ಬೆಂಕಿಯಿಂದ ತಪ್ಪಿಸಿಕೊಂಡು ಹೊರಗೆ ಓಡಿಹೋಗುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ನಿನ್ನೆ ಸಂಜೆ 5.30ಕ್ಕೆ (ಸ್ಥಳೀಯ ಕಾಲಮಾನ) ಸ್ಯಾಂಟೋ ಡೊಮಿಂಗೊದಿಂದ ವಿಮಾನ ವಾಪಾಸ್ ಆಗಮಿಸುತ್ತಿತ್ತು. ಬೆಂಕಿ ಹೊತ್ತಿಕೊಂಡು ರನ್‌ವೇಯಿಂದ ಕೆಳಗಿಳಿದ ನಂತರ ವಿಮಾನವು ಕ್ರೇನ್ ಟವರ್ ಮತ್ತು ಆ ಪ್ರದೇಶದಲ್ಲಿನ ಸಣ್ಣ ಕಟ್ಟಡ ಸೇರಿದಂತೆ ಹಲವಾರು ಕಡೆ ಡಿಕ್ಕಿ ಹೊಡೆದಿದೆ.

TV9 Kannada


Leave a Reply

Your email address will not be published.