ಐಸ್ಕ್ರೀಮ್ ರೋಲರ್
ಸಾಮಾನ್ಯವಾಗಿ ಎಲ್ಲರೂ ಸ್ಟ್ರೀಟ್ ಫುಡ್ (Street Food) ಗಳ ಪ್ರಿಯರೇ ಆಗಿರುತ್ತಾರೆ. ಬೀದಿ ಬದಿಯಲ್ಲಿ ಸಿಗುವ ಪಾನಿ ಪುರಿ, ಗೋಲಗಪ್ಪಗಳನ್ನು ಎಲ್ಲರೂ ತಿಂದಿರುತ್ತಾರೆ. ಆದರೆ ಎಂದಾದರೂ ರೋಲರ್ನಲ್ಲಿನ ಐಸ್ ಕ್ರೀಮ್ ಅನ್ನು ಎಂದಾದರೂ ತಿಂದಿದ್ದೀರಾ? ಹೌದು ಬರೋಬ್ಬರಿ 90 ಕೆಜಿ ತೂಕವುಳ್ಳ ಐಸ್ಕ್ರೀಮ್ ರೋಲರ್ (Ice cream Roler) ಅನ್ನು ತಯಾರಿಸಿ ಸರ್ವ್ ಮಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಕಮಲಾ ನಗರ್ ಎನ್ನುವಲ್ಲಿ ತಯಾರಿಸಿದ ಈ ಐಸ್ಕ್ರೀಮ್ ಅನ್ನು ಫುಡ್ ಬ್ಲಾಗರ್ (food Blogger) ಒಬ್ಬರು ಟೇಸ್ಟ್ ಮಾಡಿದ್ದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಮೊದಲು ಐಸ್ಕ್ಯೂಬ್ ಒಂದನ್ನು ರೋಲರ್ ಒಳಗೆ ಹಾಕಿ ನಂತರ ಅದರ ಮೇಲೆ ವಿವಿಧ ಪ್ಲೇವರ್ಗಳ ದ್ರವವನ್ನು ಹಾಕುವುದನ್ನು ಕಾಣಬಹುದು. ನಂತರ ಅದನ್ನು ಒಂದು ಪಲ್ಏಠ್ಗೆ ಹಾಕಿ ನೀಡುತ್ತಾರೆ. ಲಕ್ಷಯ್ ತರ್ಲೇಜಾ ಎನ್ನುವ ಫುಡ್ ಬ್ಲಾಗರ್ ಇದರ ವಿಡಿಯೋವನ್ನು ಹಂಚಿಕೊಂಡಿದ್ದು ವಿಭಿನ್ನ ರುಚಿಯ ತಿನಿಸು ಎಂದಿದ್ದಾರೆ. ವಿಡಿಯೋದಲ್ಲಿ ಒಂದು ಪ್ಲೇಟ್ ಐಸ್ ಕ್ರೀಮ್ ಬೆಲೆ ಕೇವಲ 60 ರೂ. ಅವಶ್ಯವಾಗಿ ತಿನ್ನಬಹುದಾದ ತಿನಿಸು ಎಂದು ಫುಡ್ ಬ್ಲಾಗರ್ ಮಾಹಿತಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ನೆಟ್ಟಿಗರು ಹೊಸ ತಿನಿಸನ್ನು ಮೆಚ್ಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಐಸ್ಕ್ರೀಮ್ ಮಸಾಲಾ ದೋಸೆಯ ವಿಡಿಯೋವನ್ನು ಫುಡ್ ಬ್ಲಾಗರ್ ಒಬ್ಬರು ಹಂಚಿಕೊಂಡಿದ್ದರು. ಅದನ್ನು ನೋಡಿ ನೆಟ್ಟಿಗರು ಇದೆಂತಹ ತಿನಿಸು ಎಂದು ಮೂಗು ಮುರಿದಿದ್ದರು. ಇದೀಗ ಐಸ್ ಕ್ರೀಮ್ ರೋಲರ್ ನೋಡಿ ಮೆಚ್ಚಿಕೊಂಡಿದ್ದು, ಒಂದು ಬಾರಿಯಾದರೂ ಟೇಸ್ಟ್ ನೋಡಬೇಕು ಎನ್ನುತ್ತಿದ್ದಾರೆ.