Dementia : ಇದು ಒಳ್ಳೆಯ ಅವಕಾಶ, ಹೀಗೆ ಈ ಮಗುವಿನ ಒಡನಾಟದೊಂದಿಗೆ, ಹಾಡುತ್ತ ಹಾಡುತ್ತ ಅಜ್ಜಿಯ ಸ್ಮರಣಶಕ್ತಿ ವಾಪಾಸು ಬಂದರೂ ಬರಬಹುದೇನೋ ಎನ್ನುತ್ತಿದ್ದಾರೆ ನೆಟ್ಟಿಗರು.

ಮೊಮ್ಮಗುವಿಗೆ ಲಾಲಿ ಹಾಡುತ್ತಿರುವ ಮುತ್ತಜ್ಜಿ
Viral Video : ಸ್ಮೃತಿಯ ತಂತುಗಳನ್ನು ಸ್ಪರ್ಶಿಸಿ ಅರಳಿಸುವ ಅಗಾಧ ಚೈತನ್ಯ ಸಂಗೀತಕ್ಕಿದೆ ಮತ್ತು ಎಳೆಯ ಮಗುವಿಗಿದೆ. ಕಳೆದುದನ್ನು ಮರಳಿಸುವ ಶಕ್ತಿ ಈ ಎರಡಕ್ಕೂ ಇದೆ. ಡಿಮೆನ್ಷಿಯಾ ರೋಗದಿಂದ ಬಳಲುತ್ತಿರುವ ಮುತ್ತಜ್ಜಿಯೊಬ್ಬಳಿಗೆ ಮರಿಮೊಮ್ಮಗನಿಗಾಗಿ ಲಾಲಿ ಹಾಡಿದ್ದಾಳೆ. ಅವಳ ತೋಳೊಳಗೆ ಬೆಚ್ಚಗೆ ಮಲಗಿರುವ ಮಗು ಅಜ್ಜಿ ಹಾಡು ಮತ್ತು ಸ್ಪರ್ಶದಿಂದ ನಿದ್ದೆ ಜಾರುತ್ತಿದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ.
ಅಜ್ಜಿಯ ಮೆದುಳು ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದರೂ ಈ ಹಾಡನ್ನು ಮಾತ್ರ ಹಾಗೇ ಹಿಡಿದಿಟ್ಟುಕೊಂಡಿದೆ. ಮೊಮ್ಮಗುವಿನ ಮುಖ ಆಕೆಯ ನೆನಪಿನ ಶಕ್ತಿಯನ್ನು ಹೀಗೆ ಕ್ಷಣಗಳ ಕಾಲದವರೆಗಾದರೂ ಮರಳಿಸಿದೆ. ಎಂಥ ಆಪ್ತವಾದ ವಿಡಿಯೋ ಅಲ್ವಾ ಇದು? ಈತನಕ ಈ ವಿಡಿಯೋ ಅನ್ನು ಸುಮಾರು 7,000 ಜನರು ನೋಡಿದ್ದಾರೆ. 500ಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ಗ್ರೇಟ್ ಗ್ರ್ಯಾಂಡ್ಮಾ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.