Viral Video Instagram influencer shooting reel in the middle of highway police fined rs 17,000 | ಹೆದ್ಧಾರಿಯಲ್ಲಿ ಕಾರು ನಿಲ್ಲಿಸಿ ರೀಲ್​ಗಾಗಿ ವಿಡಿಯೋ ಮಾಡುತ್ತಿದ್ದ ಯುವತಿಗೆ ರೂ. 17,000 ದಂಡ


Social Media Influencer : ಇನ್​ಸ್ಟಾಗ್ರಾಂನಲ್ಲಿ ವೈಶಾಲಿ ಚೌಧರಿ ಈ ವಿಷಯವನ್ನು ಅಪ್​ಡೇಟ್ ಮಾಡಿದ್ದರಿಂದ, ಫಾಲೋವರ್​ಗಳಲ್ಲಿ ಕುತೂಹಲ ಹೆಚ್ಚಿದೆ. ಇಂದು ಸಂಜೆ ಲೈವ್​ನಲ್ಲಿ ಪೂರ್ತಿ ವಿಷಯ ತಿಳಿಸುತ್ತೇನೆ ಎಂದಿದ್ದಾಳೆ ಈಕೆ.

ಹೆದ್ಧಾರಿಯಲ್ಲಿ ಕಾರು ನಿಲ್ಲಿಸಿ ರೀಲ್​ಗಾಗಿ ವಿಡಿಯೋ ಮಾಡುತ್ತಿದ್ದ ಯುವತಿಗೆ ರೂ. 17,000 ದಂಡ

ಹೆದ್ದಾರಿಯ ಮಧ್ಯೆ ಕಾರ್ ಇಲ್ಲಿಸಿ ರೀಲ್​ಗಾಗಿ ವಿಡಿಯೋ ಮಾಡುತ್ತಿದ್ದ ವೈಶಾಲಿ ಚೌಧರಿ

Viral News : ರೀಲ್​ಗಾಗಿ ಕಂಟೆಂಟ್​ ಹುಡುಕಾಟದೊಂದಿಗೆ ಅದಕ್ಕೆ ಪೂರಕವಾದ ಜಾಗಗಳ ಹುಡುಕಾಟದಲ್ಲಿಯೂ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಸದಾ ತೊಡಗಿಕೊಂಡಿರುತ್ತಾರೆ. ಇಂಥ ಹುಡುಕಾಟದ ಮಧ್ಯೆಯೇ ಏನಾದರೂ ಒಂದು ಯಡವಟ್ಟುಗಳು ಸಂಭವಿಸುವುದುಂಟು. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈಕೆ ವೈಶಾಲಿ ಚೌಧರಿ ಎಂಬ ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್​. ತನ್ನ ಕಾರನ್ನು ಹೆದ್ದಾರಿಯ ಮಧ್ಯದಲ್ಲಿ ನಿಲ್ಲಿಸಿ ವಿಡಿಯೋ ಚಿತ್ರೀಕರಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.  ಪರಿಣಾಮವಾಗಿ ರೂ. 17,000 ದಂಡವನ್ನೂ ಆಕೆ ತೆರಬೇಕಾಗಿ ಬಂದಿದೆ.

ಲಕ್ಷಾಂತರ ಜನರು ಇಂದು ರೀಲ್ಸ್​ಗಳ ಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಬರೀ ಲೈಕ್ಸ್​, ಶೇರ್​ಗಳಷ್ಟೇ ಸಿಗದೆ ನಿಯಮ ಮುರಿದಲ್ಲಿ ಕೆಲವೊಮ್ಮೆ ದಂಡವೂ ಸಿಗುತ್ತದೆ ಎನ್ನುವುದನ್ನು ಮಾತ್ರ ಮರೆಯಬಾರದು. ಇತ್ತೀಚೆಗೆ ಉತ್ತರ ಪ್ರದೇಶದ ಗಾಝಿಯಾಬಾದ್​ನ ಇನ್​ಸ್ಟಾಗ್ರಾಂನ ಪ್ರಭಾವಿ ವೈಶಾಲಿ ಚೌಧರಿ ರೀಲು ಮಾಡಿ ದಂಡ ತೆರಬೇಕಾದ ಅವಸ್ಥೆಗೆ ಸಿಲುಕಿಕೊಂಡಿದ್ದಾಳೆ. ರಸ್ತೆ ಸುರಕ್ಷತೆ ನಿಯಮಗಳ ಉಲ್ಲಂಘನೆಗಾಗಿ ಈಕೆಗೆ ಗಾಝಿಯಾಬಾದ್​ ಪೊಲೀಸರು ದಂಡ ವಿಧಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ 6.5 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದ ವೈಶಾಲಿ ಚೌಧರಿ ಹೆದ್ದಾರಿಯ ಮಧ್ಯೆ ಕಾರು ನಿಲ್ಲಿಸಿಕೊಂಡು ವಿವಿಧ ಭಂಗಿಗಳಲ್ಲಿ ವಿಡಿಯೋ ಶೂಟ್ ಮಾಡಿ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದ್ದಾಳೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ಧಾರೆ. ಈ ಘಟನೆ ಸಾಹಿಬಾಬಾದ್​ನಲ್ಲಿ ನಡೆದಿದೆ.

ಒಳ್ಳೆಯದು ಮಾಡಿದರೂ ಇಡೀ ಜಗತ್ತಿಗೆ ಗೊತ್ತಾಗುತ್ತದೆ. ಎಡವಟ್ಟು ಮಾಡಿದರೂ ಇಡೀ ಜಗತ್ತಿಗೆ ಗೊತ್ತಾಗುತ್ತದೆ. ಏಕೆಂದರೆ ಸಾಮಾಜಿಕ ಜಾಲತಾಣಕ್ಕೆ ಇರುವುದು ಒಂದೇ ಬಾಗಿಲು!

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

TV9 Kannada


Leave a Reply

Your email address will not be published. Required fields are marked *