Paw Print : ಆಗಷ್ಟೇ ಹುಟ್ಟಿದ ನಾಯಿಮರಿಯೊಂದು ತನ್ನ ಜನನ ಪ್ರಮಾಣ ಪತ್ರಕ್ಕೆ ಪಂಜ ಒತ್ತಿ ಸಹಿ ಮಾಡಿದೆ. ಆಹ್ ಎಂಥ ಮುದ್ದು ಎಂದು ಕೆಲವರು. ನಿಮ್ಮ ಆಸೆಗಳನ್ನು ಮುಗ್ಧ ಪ್ರಾಣಿಗಳ ಮೇಲೆ ಯಾಕೆ ಹೇರುತ್ತೀರಿ ಎಂದು ಹಲವರು.

ಜನನ ಪ್ರಮಾಣ ಪತ್ರದ ಮೇಲೆ ಮರಿನಾಯಿಯ ಕಾಲುಬೆರಳುಗಳಿಂದ ಮುದ್ರೆಯೊತ್ತಿಸುತ್ತಿರುವುದು
Viral Video : ನಿಮ್ಮ ಜನನ ಪ್ರಮಾಣ ಪತ್ರಕ್ಕೆ ನೀವು ಎಂದಾದರೂ ಸಹಿ ಹಾಕುವ ಅವಕಾಶ ಸಿಕ್ಕಿತ್ತಾ? ನೋಡಿ ಎಳೆಯ ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಪಂಜ ಒತ್ತಿ ಸಹಿ ಮಾಡಿದೆ. ಈ ವಿಡಿಯೋ ಅನ್ನು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಮುದ್ದಾದ ವಿಡಿಯೋ ನಮ್ಮಿಡೀ ದಣಿವನ್ನು ಕಳೆಯುವಂತೆ ಮಾಡಿದೆ ಎನ್ನುತ್ತಿದ್ದಾರೆ ಕೆಲವರು. ಯಾಕೋ ಇದು ನನ್ನ ಮೂಡ್ ಆಫ್ ಮಾಡಿತು ಎನ್ನುತ್ತಿದ್ದಾರೆ ಇನ್ನೂ ಕೆಲವರು. ನೀವೇನಂತೀರಿ?
ಈ ವಿಡಿಯೋ ಈಗಾಗಲೇ 5.5 ಮಿಲಿಯನ್ ಜನರನ್ನು ತಲುಪಿದೆ. ಗ್ರೇಹೌಂಡ್ ತಳಿಯ ಈ ಮರಿ ಹೆಣ್ಣು. ಇದರ ಹೆಸರು ಅಲೆಕ್ಸ್. ನೆಟ್ಟಿಗರಂತೂ ಈ ಮುದ್ದಾದ ವಿಡಿಯೋ ನೋಡಿ ಇದು ನನಗೆ ಬೇಕು ಎಂದು ಕೇಳುತ್ತಿದ್ದಾರೆ. ಇಂಥ ಐಡಿಯಾ ಹೇಗೆ ಹೊಳೆಯಿತು ಎಂದು ಕೇಳುತ್ತಿದ್ದಾರೆ.