Money Heist : ಪೌರಾಣಿಕ ಪಾತ್ರಗಳು ಆಗಾಗ ಮನೆಯ ಮುಂದೆ ಪ್ರತ್ಯಕ್ಷವಾಗುವುದು ಸಹಜ. ಆದರೆ ಸಿನೆಮಾ, ವೆಬ್ ಸೀರೀಸ್ನ ಪಾತ್ರಗಳು ಮೆಟ್ರೋ ರೈಲಿನಲ್ಲಿ ಹೀಗೆ ಕಾಣಿಸಿಕೊಳ್ಳುತ್ತಿವೆಯೆಂದರೆ…

ಮೆಟ್ರೋ ರೈಲಿನಲ್ಲಿ ಮನಿ ಹೀಸ್ಟ್ ಪಾತ್ರಧಾರಿ
Viral Video : ನೀವು ತೆರೆಯ ಮೇಲೆ ನೋಡುವ ವ್ಯಕ್ತಿಗಳು ನಿಮ್ಮೆದುರು ಪ್ರತ್ಯಕ್ಷವಾದರೆ ಏನ್ನಿಸುತ್ತದೆ? ಕೆಲವರಿಗೆ ಅಚ್ಚರಿ, ಕೆಲವರಿಗೆ ಆತಂಕ ಕೆಲವರಿಗೆ ಖುಷಿ, ಇನ್ನೂ ಕೆಲವರಿಗೆ ಭಯ. ಇನ್ನೊಂದು ಪೋಸ್ಟ್ನಲ್ಲಿ ಮೆಟ್ರೋ ರೈಲಿನಲ್ಲಿ ಭೂಲ್ ಭುಲೈಯ್ಯಾದ ಮಂಜುಲಿಕಾಳಂತೆ ವೇಷ ಧರಿಸಿ ಬಂದ ಮಹಿಳೆಯ ವಿಡಿಯೋ ವೈರಲ್ ಆಗಿದ್ದನ್ನು ನೋಡಿದಿರಿ. ಇದೀಗ ಜನಪ್ರಿಯ ವೆಬ್ ಸೀರೀಸ್ ಮನಿ ಹೀಸ್ಟ್ ಪಾತ್ರದಂತೆ ಒಬ್ಬ ವ್ಯಕ್ತಿ ನೋಯ್ಡಾದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಎರಡು ಬ್ಯಾಗ್ಗಳನ್ನು ಹಿಡಿದುಕೊಂಡು ಬಂದ ಈ ವ್ಯಕ್ತಿ ಮನಿ ಹೀಸ್ಟ್ನ ಪಾತ್ರಧಾರಿಯಂತೆ ಆ ಚೀಲಗಳನ್ನು ನೆಲಕ್ಕೆ ಎಸೆಯುತ್ತಾನೆ.
ತಾಜಾ ಸುದ್ದಿ
ಈ ವಿಡಿಯೋ ಅನ್ನು ಈಗಾಗಲೇ ಸುಮಾರು 50,000 ಜನರು ನೋಡಿದ್ಧಾರೆ. 1,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ. ಈ ಮನಿ ಹೀಸ್ಟ್ ಮತ್ತು ಮಂಜುಲಿಕಾ ಮೆಟ್ರೋ ರೈಲಿನಲ್ಲಿ ಬಂದು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ದಾರೆ ಅನೇಕರು. ಸ್ಕ್ವಿಡ್ ಗೇಮ್ ಮತ್ತು ಮನಿ ಹೀಸ್ಟ್ ಒಟ್ಟಿಗೆ!? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಒಬ್ಬರು.