Viral video of noodles making after watching this video do you eat noodles | ಈ ವಿಡಿಯೋ ನೋಡಿದ ಬಳಿಕವೂ ನೂಡಲ್ಸ್​ ತಿನ್ನುತ್ತೀರಾ? ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ


Noodles Making : ನೂಡಲ್ಸ್​ ಅಷ್ಟೇ ಯಾಕೆ, ಸಣ್ಣ ಹೋಟೆಲ್​ಗಳ ಅಡುಗೆ ಮನೆ ಹೊಕ್ಕು ನೋಡಿ. ಕುಲ್ಚಾ, ಪರೋಟಾ, ಚಪಾತಿ, ಪೂರಿಗಳನ್ನೂ ಹೀಗೇ ತಯಾರಿಸುತ್ತಾರೆ ಎನ್ನುತ್ತಿದ್ಧಾರೆ ನೆಟ್ಟಿಗರು.

ಈ ವಿಡಿಯೋ ನೋಡಿದ ಬಳಿಕವೂ ನೂಡಲ್ಸ್​ ತಿನ್ನುತ್ತೀರಾ? ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ನೂಡಲ್ಸ್​ ಫ್ಯಾಕ್ಟರಿ

Viral Video : ನೂಡಲ್ಸ್​ ಯಾರಿಗೆ ಇಷ್ಟವಿಲ್ಲ? ಮುಪ್ಪಾನು ಮುದಕರಿಂದ ಹಿಡಿದು ಎಳೇ ಮಕ್ಕಳವರೆಗೂ ಬಾಯಲ್ಲಿ ನೀರೂರುತ್ತದೆ. ಅದರಲ್ಲಿಯೂ ಹದಿಹರೆಯದವರಿಗೆ, ಯುವಕ ಯುವತಿಯರಿಗೆ ಮತ್ತು ಮಕ್ಕಳಿಗಂತೂ ಎರಡು ಹೊಟ್ಟೆಯಾಗುತ್ತದೆ. ವಿದೇಶದಲ್ಲಿಯಂತೂ ಇದು ಊಟಕ್ಕೂ ತಿಂಡಿಗೂ ಸಾಮಾನ್ಯವಾಗಿರುಂಥ ಖಾದ್ಯ. ಇಟಲಿ, ಚೀನಾದ ಮೂಲದಿಂದ ಬಂದಿರುವ ಈ ನೂಡಲ್ಸ್​ ಜಗತ್ತಿನಾದ್ಯಂತ ಜನಪ್ರಿಯ. ಅದರಲ್ಲೂ ರಸ್ತೆಬದಿಯ ನೂಡಲ್ಸ್​​ನ ರುಚಿ! ಆದರೆ ಈ ವಿಡಿಯೋದಲ್ಲಿ ನೂಡಲ್ಸ್​ ಮಾಡುತ್ತಿರುವ ಬಗೆಯನ್ನು ಒಮ್ಮೆ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೂಡಲ್ಸ್​ ತಯಾರಿಸುವವರು ಟೀಶರ್ಟ್​, ಬನಿಯನ್​, ಶಾರ್ಟ್ಸ್​ ಮಾತ್ರ ಧರಿಸಿದ್ದಾರೆ. ಕೈಗವಸು, ಕ್ಯಾಪ್​, ಮಾಸ್ಕ್​ ಏನನ್ನೂ ಧರಿಸಿಲ್ಲ. ಬಳಸುತ್ತಿರುವ ಯಂತ್ರಗಳೂ ಶುಚಿಯಾಗಿಲ್ಲ. ಹಿಟ್ಟನ್ನು ನೆಲದ ಮೇಲೆ ಇಡುತ್ತಿದ್ದಾರೆ. ಮತ್ತದನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾರೆ. ನೆಲದ ಮೇಲೆ ನೂಡಲ್ಸ್ ಹರವುತ್ತಿದ್ಧಾರೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ಅವನ್ನು ಪ್ಯಾಕ್ ಮಾಡುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *