Viral Video Sambar Deer rushed into a house in Madhya Pradesh rescued by forest staff | ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ


Madhya Pradesh : ಕಾಡಿನ ಪ್ರಾಣಿಗಳೆಲ್ಲ ಮಧ್ಯಪ್ರದೇಶದ ಈ ಊರಿಗೆ ನುಗ್ಗಿವೆಯೆ ಎಂಬಂತೆ ಜನಜನ ಜಾತ್ರೆ. ಪಾಪದ್ದು ಇದು, ಫೋಟೋ ನೋಡಿದರೆ ಗೊತ್ತಾಗುವುದಿಲ್ಲವೆ ಇದು ಎಷ್ಟೊಂದು ಸಾಧು ಪ್ರಾಣಿಯೆಂದು.

ಇಂಥ ಮೋಹಕ ಪ್ರಾಣಿಯ ಬಂಧನಕ್ಕೆ ಇಷ್ಟೊಂದು ನಾಟಕದ ಅಗತ್ಯವಿತ್ತೇ? ನೋಡಿ ವಿಡಿಯೋ

ಮಧ್ಯಪ್ರದೇಶದ ಮನೆಯೊಳಗೆ ಬಂದ ಸಾಂಬಾರ್ ಜಿಂಕೆ

Viral News : ಯಾಕೆ ಬಂದೆ ನೀನು ನಮ್ಮ ಮನೆಗೆ, ಏನಾದರೂ ತಿಂಡಿ ಬೇಕಿತ್ತಾ? ಕಾಡು ಬೇಸರವಾಗಿತ್ತಾ, ಸ್ವಲ್ಪ ದಿನ ಇಲ್ಲೇ ಇದ್ದು ಹೋಗಲು ಬಂದಿದ್ದೀಯಾ? ಯಾರಾದರೂ ಬೇಸರ ಉಂಟು ಮಾಡಿದರಾ? ಇನ್ನು ಮೇಲೆ ನಮ್ಮೊಂದಿಗೇ ಇರುತ್ತೀಯಾ? ಈಗ ಈ ಫೋಟೋದಲ್ಲಿ ಈ ಸಾಂಬಾರ್ ಜಿಂಕೆ ಹೀಗೆ ಮನೆಯೊಳಗೆ ಬಂದು ನಿಂತಿರುವುದನ್ನು ನೋಡಿದರೆ ಹೀಗೆಯೇ ಮೈದಡವುತ್ತ ಮಾತನಾಡಿಸಬೇಕು ಅನ್ನಿಸುತ್ತದೆ ಅಲ್ಲವಾ? ಮಧ್ಯಪ್ರದೇಶದ ಕಟ್ನಿಯಲ್ಲಿರುವ ಮನೆಯೊಂದಕ್ಕೆ ಬಂದ ಇದು ಹೀಗೆ ಫೋಟೋ ತೆಗೆಯುವ ತನಕವಂತೂ ಸುಮ್ಮನೇ ನಿಂತಿದೆ. ಆಮೇಲೆ?

ಆಮೇಲೆ ಗದ್ದಲ ಮಾಡಿದ್ದು ಖಂಡಿತ ಇದಲ್ಲ. ಈ ಊರಿನ ಜನರು. ಈ ಪಾಪದ ಪ್ರಾಣಿಯ ಬಂಧನಕ್ಕೆ ಈ ಊರಿನ ಸುಮಾರು 1000 ಜನರು ಸಾಕ್ಷಿಯಾಗಿದ್ದಾರೆ. ಐಎಫ್​ಎಸ್​ ಆಫೀಸರ್ ಗೌರವ ಶರ್ಮಾ ಟ್ವೀಟ್ ಮಾಡಿದ ಈ ಫೋಟೋ, ವಿಡಿಯೋ ಗಮನಿಸಿ. ಜನಜನ ಜಾತ್ರೆ. ಅದನ್ನು ಬಲೆಯಲ್ಲಿ ಬಿಗಿದು ಕಟ್ಟಿರುವ ರೀತಿ ನೋಡಿ. ಪಾಪ ಪುಣ್ಯ ಎಲ್ಲವೂ ಸೇರಬೇಕಿರುವುದು ಅರಣ್ಯ ಇಲಾಖೆಯ ವಿವೇಕ ಜೈನ್​ ಮತ್ತು ತಂಡದವರಿಗೆ.

ಜನವರಿ 21 ರಂದು ವಿಡಿಯೋ ಟ್ವೀಟ್​ ಮಾಡಲಾಗಿದೆ. ಈತನಕ 21,000 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 200ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *