Virat Kohli: ಆರ್​ಸಿಬಿ ಹೊಸ ನಾಯಕನ ಸ್ಥಾನಕ್ಕೆ ಇಬ್ಬರು ಆಟಗಾರರ ಶಾರ್ಟ್​ ಲಿಸ್ಟ್ ರೆಡಿ: ಸದ್ಯದಲ್ಲೇ ಘೋಷಣೆ | KL Rahul or Shreyas Iyer are the hot contenders to Replace Virat Kohli as RCB Captain in IPL 2022


Virat Kohli: ಆರ್​ಸಿಬಿ ಹೊಸ ನಾಯಕನ ಸ್ಥಾನಕ್ಕೆ ಇಬ್ಬರು ಆಟಗಾರರ ಶಾರ್ಟ್​ ಲಿಸ್ಟ್ ರೆಡಿ: ಸದ್ಯದಲ್ಲೇ ಘೋಷಣೆ

RCB Captain IPL 2022

ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಮಧ್ಯೆ ವಿರಾಟ್ ಕೊಹ್ಲಿ (Virat Kohli) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕನಾಗಿ ಇದೇ ನನ್ನ ಕೊನೇ ಟೂರ್ನಿ ಎಂದಾಗ ಎಲ್ಲರಿಗೂ ಆಘಾತವಾಗಿತ್ತು. ಇದರ ಬೆನ್ನಲ್ಲೇ ಕೊಹ್ಲಿ ನಂತರದ ಆರ್​ಸಿಬಿ ನಾಯಕನ (RCB Captain) ಪಟ್ಟ ಯಾರಿಗೆ ಎಂಬ ಬಗ್ಗೆಯೂ ಜೋರಾಗಿ ಚರ್ಚೆ ಶುರುವಾಗಿತ್ತು. ಎಬಿ ಡಿವಿಲಿಯರ್ಸ್​ (AB De Villiers), ಗ್ಲೆನ್ ಮ್ಯಾಕ್ಸ್ (Glenn Maxwell)​ವೆಲ್, ಡೇವಿಡ್ ವಾರ್ನರ್ (David Warner) ಹೀಗೆ ಕೆಲವು ಆಟಗಾರರ ಹೆಸರು ಕೇಳಿ ಬಂದಿದ್ದವು. ಇದರ ನಡುವೆ ಕನ್ನಡಿಗರಾದ ಕೆಎಲ್ ರಾಹುಲ್ ಆರ್​ಸಿಬಿ (KL Rahul RCB Captain) ಸೇರಿ ನಾಯಕನಾಗಲಿದ್ದಾರೆ ಎಂಬ ಮಾತು ಕೂಡ ಹರಿದಾಡಿದ್ದವು. ಸದ್ಯ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಆರ್​ಸಿಬಿ (RCB) ಫ್ರಾಂಚೈಸಿ ತಯಾರಾಗಿದೆ.

ಹೌದು, ವರದಿಯ ಪ್ರಕಾರ ಸದ್ಯದಲ್ಲೇ ಆರ್​ಸಿಬಿ ಫ್ರಾಂಚೈಸಿ ಹೊಸ ನಾಯಕನ ಹೆಸರು ಘೋಷಣೆ ಮಾಡಲಿದೆಯಂತೆ. ಇದಕ್ಕಾಗಿ ಇಬ್ಬರು ಆಟಗಾರರ ಹೆಸರನ್ನು ಕೂಡ ಶಾರ್ಟ್​ ಲಿಸ್ಟ್ ಮಾಡಿದೆಯಂತೆ. ಅವರೇ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಈಗಾಗಲೇ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದಾರೆ. ರಾಹುಲ್ ಕೂಡ ಪಂಜಾಬ್ ತಂಡ ಬಿಟ್ಟು ಮೆಗಾ ಆಕ್ಷನ್​ಗೆ ಲಭ್ಯರಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವಾಗ ಆರ್​ಸಿಬಿ ಇವರಿಬ್ಬರ ಪೈಕಿ ಒಬ್ಬರನ್ನು ಖರೀದಿಸಿ ನಾಯಕನ ಪಟ್ಟ ನೀಡಲಿದೆಯಂತೆ.

ಅಯ್ಯರ್ ಐಪಿಎಲ್ 2021ರ ಮೊದಲನೇ ಚರಣಕ್ಕೆ ಲಭ್ಯರಿರಲಿಲ್ಲ. ಇಂಜುರಿಯಿಂದ ಬಳಲುತ್ತಿದ್ದ ಕಾರಣ ಭಾರತದಲ್ಲಿ ನಡೆದ ಐಪಿಎಲ್​ನಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ನಂತರ ಯುಎಇ ಚರಣಕ್ಕೆ ಕಮ್​ಬ್ಯಾಕ್ ಮಾಡಿದರೂ ನಾಯಕ ಜವಾಬ್ದಾರಿ ಫ್ರಾಂಚೈಸಿ ಇವರಿಗೆ ನೀಡಲಿಲ್ಲ. ಪ್ಲೇ ಆಫ್ಸ್‌ವರೆಗೂ ಡೆಲ್ಲಿ ತಂಡವನ್ನು ನಾಯಕ ರಿಷಬ್‌ ಪಂತ್‌ ಯಶಸ್ವಿಯಾಗಿ ಮುನ್ನಡೆಸಿದ್ದರು. ಹೀಗಾಗಿ ಮುಂದಿನ ಸೀಸನ್​ನಲ್ಲಿ ಡೆಲ್ಲಿಯ ಮಾಜಿ ನಾಯಕ ಅಯ್ಯರ್​ಗೆ ಕ್ಯಾಪ್ಟನ್ ಪಟ್ಟವಿಲ್ಲ. ನಾಯಕತ್ವದ ನಿರಿಕ್ಷೆಯಲ್ಲಿರುವ ಶ್ರೇಯಸ್‌ ಅಯ್ಯರ್‌ ಅವರನ್ನು ಆರ್​ಸಿಬಿ ಸಂಪರ್ಕಿಸಿದೆಯಂತೆ.

ಇತ್ತ ರಾಹುಲ್ ಕೂಡ ಪಂಜಾಬ್ ಬಿಡುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗಷ್ಟೆ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿಯ ಸಹ ಮಾಲೀಕ ನೆಸ್ ವಾಡಿಯಾ ಅಚ್ಚರಿಕಯ ಹೇಳಿಕೆ ನೀಡಿದ್ದರು. ‘ಓರ್ವ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿರುವುದಿಲ್ಲ. ತಂಡದಲ್ಲಿ ಕೆ. ಎಲ್ ರಾಹುಲ್ ಹೊರತುಪಡಿಸಿ ಹಲವಾರು ಆಟಗಾರರಿದ್ದಾರೆ’ ಎಂದು ಹೇಳಿಕೆ ನೀಡುವುದರ ಮೂಲಕ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿಯೇ ಉಳಿದುಕೊಳ್ಳುವುದು ಅನುಮಾನ ಎಂಬ ರೀತಿ ಹೇಳಿಕೆ ನೀಡಿದ್ದಾರೆ.

ನಿಮಗೆಲ್ಲ ತಿಳಿದಿರುವಂತೆ ಮುಂದಿನ ವರ್ಷಕ್ಕೆ ಮೆಗ ಆಕ್ಷನ್ ನಡೆಯಲಿದೆ. ಇದರಲ್ಲಿ ಕೆ. ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಹೆಸರಿಗೂ ಬಿಡ್ ನಡೆಯಲಿದೆ. ಅದುದೊಡ್ಡ ಮೊತ್ತ ಆಗುವುದು ಖಚಿತ. ಒಟ್ಟಾರೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದಿರುವುದರಿಂದ ಕನ್ನಡಿಗನೇ ಆಗಿರುವ ರಾಹುಲ್ ಆರ್​ಸಿಬಿಯ ನೂತನ ನಾಯಕನಾಗಲಿದ್ದಾರೆ ಎಂಬ ಮಾತು ಜೋರಾಗಿದೆ.

India vs Namibia: ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಪ್ರಮುಖರಿಗೆ ವಿಶ್ರಾಂತಿ: ಭಾರತದ ಪ್ಲೇಯಿಂಗ್ XIನಲ್ಲಿ 4 ಬದಲಾವಣೆ?

Devon Conway: ನ್ಯೂಜಿಲೆಂಡ್​ನಿಂದ ನಡೆಯಿತಾ ಮೋಸದಾಟ?: ಔಟ್ ಆದರೂ ಕ್ರೀಸ್​ನಿಂದ ಕದಲದ ಡೆವೋನ್‌ ಕಾನ್ವೇ

(KL Rahul or Shreyas Iyer are the hot contenders to Replace Virat Kohli as RCB Captain in IPL 2022)

TV9 Kannada


Leave a Reply

Your email address will not be published.