1/5
ಕಾಲಚಕ್ರ ತಿರುಗಿದಾಗ ಎಲ್ಲವೂ ಬದಲಾಗುತ್ತದೆ. ವಿರಾಟ್ ಕೊಹ್ಲಿ ವಿಷಯದಲ್ಲೂ ಅದೇ ಆಗುತ್ತಿದೆ. ಭಾರತ ತಂಡದ ಎಲ್ಲಾ ಫಾರ್ಮಾಟ್ಗಳ ನಾಯಕತ್ವವನ್ನು ತೊರೆದ ಬಳಿಕ, ಇದೀಗ ಕಳೆದ 4 ಬಾರಿ ನಿರಂತರವಾಗಿ ಅವರ ಕೈಯಲ್ಲಿದ್ದ ಐಸಿಸಿ ತಂಡದ ಸಾರಥ್ಯವನ್ನು ಸಹ ಕೈತಪ್ಪಿದೆ. ಹೌದು, 2021 ರ ಐಸಿಸಿ ಏಕದಿನ ತಂಡದಲ್ಲಿ ಕೊಹ್ಲಿಗೆ ಸ್ಥಾನವಿಲ್ಲ.
2/5
ವಿರಾಟ್ ಕೊಹ್ಲಿ ಕಳೆದ 4 ವರ್ಷಗಳಿಂದ ಪ್ರತಿ ವರ್ಷ ICC ODI ವರ್ಷದ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ತಂಡದ ನಾಯಕನಾಗಿ ಆಯ್ಕೆಯಾಗಿಲ್ಲ. ಜೊತೆಗೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿಲ್ಲ.
3/5
2016 ರಿಂದ 2019 ರವರೆಗೆ ಪ್ರತಿ ವರ್ಷ, ವಿರಾಟ್ ಕೊಹ್ಲಿ ICC ODI ತಂಡದ ನಾಯಕರಾಗಿದ್ದರು. 2020 ರಲ್ಲಿ ಐಸಿಸಿ ತಂಡವನ್ನು ಆಯ್ಕೆ ಮಾಡಿರಲಿಲ್ಲ. ಆದರೆ, 2021 ರಲ್ಲಿ, ಕ್ರಿಕೆಟ್ನ ಉನ್ನತ ಸಂಸ್ಥೆ ತಂಡವನ್ನು ಆಯ್ಕೆ ಮಾಡಿದಾಗ, 4 ವರ್ಷಗಳ ಬಳಿಕ ನಾಯಕತ್ವದಲ್ಲಿ ಬದಲಾವಣೆಯಾಯಿತು.
4/5
2021ರ ಐಸಿಸಿ ಏಕದಿನ ತಂಡದ ನಾಯಕನಾಗಿ ಈ ಬಾರಿ ವಿರಾಟ್ ಕೊಹ್ಲಿ ಬದಲಿಗೆ ಬಾಬರ್ ಆಜಮ್ ಅವರನ್ನು ಆಯ್ಕೆ ಮಾಡಿದೆ. ಬಾಬರ್ ಅವರನ್ನು ಐಸಿಸಿ ವರ್ಷದ ಟಿ20 ತಂಡದ ಸಾರಥಿಯಾಗಿ ಆಯ್ಕೆ ಮಾಡಲಾಗಿದೆ.
5/5
ಐಸಿಸಿ ವರ್ಷದ ಏಕದಿನ ತಂಡದ ನಾಯಕರಲ್ಲಿ ಇದುವರೆಗೆ ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ 13 ವರ್ಷಗಳಲ್ಲಿ, ಈ ತಂಡವನ್ನು ಐಸಿಸಿ 12 ಬಾರಿ ಆಯ್ಕೆ ಮಾಡಿದೆ. ಇದರಲ್ಲಿ 9 ಬಾರಿ ಭಾರತೀಯ ನಾಯಕರನ್ನು ಆಯ್ಕೆ ಮಾಡಲಾಗಿದೆ. ಇನ್ನು ಇದುವರೆಗೆ ಐಸಿಸಿ ವರ್ಷದ ಏಕದಿನ ತಂಡದ ನಾಯಕನಾಗಿ 5 ಬಾರಿ ದಾಖಲೆ ಬರೆದಿರುವ ದಾಖಲೆ ಭಾರತದ ಎಂಎಸ್ ಧೋನಿ ಹೆಸರಿನಲ್ಲಿದೆ. ಹಾಗೆಯೇ ವಿರಾಟ್ ಕೊಹ್ಲಿ 4 ಬಾರಿ ನಾಯಕರಾಗುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಲ್ಲದೆ, ರಿಕಿ ಪಾಂಟಿಂಗ್ (2010), ಎಬಿ ಡಿವಿಲಿಯರ್ಸ್ (2015) ಮತ್ತು ಬಾಬರ್ ಅಜಮ್ (2021) ತಲಾ ಒಂದು ಬಾರಿ ನಾಯಕರಾಗಿದ್ದಾರೆ.