Virat Kohli: ಓರೆ ಕಣ್ಣಿನಲ್ಲಿ ಪಾಕಿಸ್ತಾನ ವಿಕೆಟ್ ಕೀಪರ್​ನ ಕುತಂತ್ರ ಅರಿತ ವಿರಾಟ್ ಕೊಹ್ಲಿ: ಏನು ಮಾಡಿದರು ಗೊತ್ತೇ? | Virat Kohli gave a side eye to check when Rizwan made a changes in field in IND vs PAK Asia Cup


Asia Cup 2022, IND vs PAK: ವಿರಾಟ್ ಕೊಹ್ಲಿಯ ವಿಕೆಟ್ ಉರುಳಿಸಲು ಪಾಕ್ ಆಟಗಾರರು ಮಾಡಿದ ರಣತಂತ್ರ ಅಷ್ಟಿಟ್ಟಲ್ಲ. ಮೊಹಮ್ಮದ್ ನವಾಜ್ ಕೊಹ್ಲಿಯನ್ನು ಪೆವಿಲಿಯನ್​ಗೆ ಅಟ್ಟಲು ಕೆಲ ಟ್ರಿಕ್ಸ್ ಉಪಯೋಗಿಸಿದರು. ಇದಕ್ಕೆ ಮೊಹಮ್ಮದ್ ರಿಜ್ವಾನ್ ಕೂಡ ಸಾಥ್ ನೀಡಿದರು.

Virat Kohli: ಓರೆ ಕಣ್ಣಿನಲ್ಲಿ ಪಾಕಿಸ್ತಾನ ವಿಕೆಟ್ ಕೀಪರ್​ನ ಕುತಂತ್ರ ಅರಿತ ವಿರಾಟ್ ಕೊಹ್ಲಿ: ಏನು ಮಾಡಿದರು ಗೊತ್ತೇ?

Virat Kohli IND vs PAK Asia Cup 2022

ಏಷ್ಯಾಕಪ್ 2022ರ (Asia Cup 2022) ಲೀಗ್ ಹಂತದ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್ 4ಗೆ ಲಗ್ಗೆಯಿಟ್ಟಿದ್ದ ಭಾರತಕ್ಕೆ ಮೊದಲ ಮ್ಯಾಚ್​ನಲ್ಲೇ ಶಾಕ್ ಆಗಿದೆ. ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ (India vs Pakistan) ಕೆಲ ತಪ್ಪುಗಳನ್ನು ಎಸಗಿ ಅಂತಿಮ ಹಂತದಲ್ಲಿ ಸೋಲು ಕಾಣಬೇಕಾಯಿತು. ಇದೀಗ ರೋಹಿತ್ ಪಡೆಯ ಫೈನಲ್ ಹಾದಿ ಕಠಿಣವಾಗಿದ್ದು, ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲ ಬೇಕಾದ ಒತ್ತಡದಲ್ಲಿದೆ. ಪಾಕ್ ಪರ ವಿರಾಟ್ ಕೊಹ್ಲಿ (Virat Kohli) ಮಾತ್ರ ಕೊನೆಯ ವರೆಗೂ ನಿಂತು ತಂಡದ ಮೊತ್ತ ಹೆಚ್ಚಿಸಲು ನೆರವಾದರು. ರೋಹಿತ್ರಾಹುಲ್ ನಿರ್ಗಮನದ ಬಳಿಕ ಕುಸಿತ ಕಂಡ ಭಾರತಕ್ಕೆ ಕೊಹ್ಲಿ ಬೆನ್ನೆಲುಬಾಗಿ ನಿಂತರು. 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್​ಗಳ ಕೊಡುಗೆ ನೀಡಿದರು.

ವಿರಾಟ್ ಕೊಹ್ಲಿಯ ವಿಕೆಟ್ ಉರುಳಿಸಲು ಪಾಕ್ ಆಟಗಾರರು ಮಾಡಿದ ರಣತಂತ್ರ ಅಷ್ಟಿಟ್ಟಲ್ಲ. ಆದರೆ, ಅದು ಯಾವುದೂ ಯಶಸ್ಸಿಯಾಗಲಿಲ್ಲ. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಕೊಹ್ಲಿ ಒಂದು ಕ್ಷಣ ಕೂಡ ಮೈಮರೆಯಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನ ಆಟಗಾರರು ಕುತಂತ್ರ ರೂಪಿಸಿದರೂ ಅದನ್ನು ಅರಿತ ಕೊಹ್ಲಿ ಎದುರಾಳಿಗೆ ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದರು.

ಭಾರತ ಬ್ಯಾಟಿಂಗ್ ಇನ್ನಿಂಗ್ಸ್​ನ 8ನೇ ಓವರ್ ಬೌಲಿಂಗ್ ಮಾಡಲು ಬಂದ ಮೊಹಮ್ಮದ್ ನವಾಜ್ ಕೊಹ್ಲಿಯನ್ನು ಹೇಗಾದರು ಮಾಡಿ ಪೆವಿಲಿಯನ್​ಗೆ ಅಟ್ಟಬೇಕೆಂದು ಕೆಲ ಟ್ರಿಕ್ಸ್ ಉಪಯೋಗಿಸಿದರು. ಇದಕ್ಕೆ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೂಡ ಸಾಥ್ ನೀಡಿದರು. 8ನೇ ಓವರ್​ನಲ್ಲಿ ಕೊಹ್ಲಿ ಫೀಲ್ಡ್ ನೋಡಿ ಬ್ಯಾಟ್ ಬೀಸಲು ಸಿದ್ಧರಾದರು. ಅತ್ತ ನವಾಜ್ ಬೌಲಿಂಗ್​ಗೆ ಎಂದು ಓಡಿ ಬರಲು ಶುರು ಮಾಡಿದರು. ಕೊಹ್ಲಿ ಸಂಪೂರ್ಣವಾಗಿ ತನ್ನ ಏಕಾಗ್ರತೆಯನ್ನು ಚೆಂಡನ್ನು ನೋಡುವುದರಲ್ಲಿದ್ದರು.

ಕೊಹ್ಲಿ ಚೆಂಡನ್ನು ಎದುರಿಸಲು ಸಿದ್ಧರಾದರು ಎಂಬುವ ಹೊತ್ತಿಗೆ ವಿಕೆಟ್ ಹಿಂಭಾಗದಲ್ಲಿದ್ದ ಕೀಪರ್ ರಿಜ್ವಾನ್ ಯಾರಿಗೂ ತಿಳಿಯದಂತೆ ಫೀಲ್ಡ್​ನಲ್ಲಿ ಕೊಂಚ ಬದಲಾವಣೆ ಮಾಡಿದರು. ಆದರೆ, ಈ ಕುತಂತ್ರವನ್ನು ಅರಿತ ಕೊಹ್ಲಿ ಚೆಂಡನ್ನು ನೋಡುವ ಜೊತೆಗೆ ಓರೆ ಕಣ್ಣಿನಲ್ಲಿ ಫೀಲ್ಡ್​ನಲ್ಲಿ ಬದಲಾವಣೆ ಮಾಡಿರುವುದನ್ನೂ ಗಮನಿಸಿದ್ದಾರೆ. ಕೊಹ್ಲಿ ಅವರು ಈರೀತಿ ಓರೆ ಕಣ್ಣಿನಲ್ಲಿ ನೋಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳಂತು ಪಂದ್ಯದ ಮಧ್ಯೆ ಕೊಹ್ಲಿಯ ಏಕಾಗ್ರತೆ ಕಂಡು ದಂಗಾಗಿದ್ದಾರೆ.

TV9 Kannada


Leave a Reply

Your email address will not be published.