Rohit Sharma: ಸಾಮಾಜಿಕ ಜಾಲತಾಣಗಳಲ್ಲಂತು ಕೊಹ್ಲಿ-ರೋಹಿತ್ ನಡುವೆ ಯಾರು ಶ್ರೇಷ್ಠರು ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಬಿಸಿಸಿಐ ಕೋಶಾಧಿಕಾರಿ ಅರುಣ್ ಧುಮಾಲ್ ಈ ವಿಚಾರವಾಗಿ ಮಾತನಾಡಿದ್ದಾರೆ.

Rohit Sharma and Virat Kohli
ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದ ದೊಡ್ಡ ಆಸ್ತಿ. ಕೊಹ್ಲಿ ನಾಯಕನಾಗಿ ತಂಡಕ್ಕೆ ಅದೆಷ್ಟೊ ಬಾರಿ ಗೆಲುವು ತಂದುಕೊಟ್ಟಿದ್ದಾರೆ. ರೋಹಿತ್ (Rohit Sharma) ನಾಯಕತ್ವದ ಆಟ ಈಗ ಶುರುವಾಗಿದೆ. ಇಬ್ಬರೂ ವಿಶ್ವಶ್ರೇಷ್ಠ ಆಟಗಾರರು ಎಂಬುದರಲ್ಲಿ ಅನುಮಾನವಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಟೀಮ್ ಇಂಡಿಯಾಕ್ಕೆ ಏಕಾಂಗಿಯಾಗಿ ನಿಂತು ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅನೇಕ ದಾಖಲೆ ಬರೆದಿದ್ದಾರೆ. ಇವರಿಬ್ಬರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸಾಮಾಜಿಕ ಜಾಲತಾಣಗಳಲ್ಲಂತು ಕೊಹ್ಲಿ–ರೋಹಿತ್ ನಡುವೆ ಯಾರು ಶ್ರೇಷ್ಠರು ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಬಿಸಿಸಿಐ ಕೋಶಾಧಿಕಾರಿ ಅರುಣ್ ಧುಮಾಲ್ (Arun Dhumal) ಈ ವಿಚಾರವಾಗಿ ಮಾತನಾಡಿದ್ದಾರೆ.
”ನಾವು ಕೊಹ್ಲಿ ಅಥವಾ ರೋಹಿತ್ ಯಾರು ಶ್ರೇಷ್ಠರು ಎಂಬ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಅದು ಅಭಿಮಾನಿಗಳ ಫ್ಯಾಶನ್. ಈ ರೀತಿಯ ಚರ್ಚೆ ನಡೆಯುತ್ತಲೇ ಇರುತ್ತದೆ. ನೀವು ಒಬ್ಬ ಆಟಗಾರನನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೀರಿ ಎಂದಾದರೆ ಇದು ಸಾಮಾನ್ಯವಾಗಿ ನಡೆಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು. ಈ ಹಿಂದೆ ಕೂಡ ಸುನಿಲ್ ಗವಾಸ್ಕರ್–ಕಪಿಲ್ ದೇವ್, ಸೌರವ್ ಗಂಗೂಲಿ–ಸಚಿನ್ ತೆಂಡೂಲ್ಕರ್ ನಡುಬೆಯೂ ಇದೇ ರೀತಿಯ ಚರ್ಚೆ ನಡೆದಿದೆ,” ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ದಾಖಲೆ ಹೊಂದಿದ್ದಾರೆ. ಇವರಿಬ್ಬರು ಇದುವರೆಗೆ 82 ಇನ್ನಿಂಗ್ಸ್ಗಳಲ್ಲಿ ಜೊತೆಯಾಗಿ ಆಡಿದ್ದಾರೆ. ಒಟ್ಟಾಗಿ 4917 ರನ್ ಗಳಿಸಿದ್ದು 63.81 ಸರಾಸರಿ ಇದೆ. 15 ಅರ್ಧಶತಕ ಮತ್ತು 18 ಶತಕದ ಜೊತೆಯಾಟ ಆಡಿದ್ದಾರೆ. ಇವರಿಬ್ಬರ ಅತ್ಯುತ್ತಮ ಜೊತೆಯಾಟ 246 ರನ್ ಆಗಿವೆ.