Virat Kohli: ಟೀಮ್ ಇಂಡಿಯಾ ಮುಂದಿನ ನಾಯಕ ಯಾರು? ಸುಳಿವು ನೀಡಿದ ವಿರಾಟ್ ಕೊಹ್ಲಿ | T20 World Cup 2021 Virat Kohli drops big hint on Team Indias next T20I captain


Virat Kohli: ಟೀಮ್ ಇಂಡಿಯಾ ಮುಂದಿನ ನಾಯಕ ಯಾರು? ಸುಳಿವು ನೀಡಿದ ವಿರಾಟ್ ಕೊಹ್ಲಿ

Team India

ನಮೀಬಿಯಾ ವಿರುದ್ದದ ಪಂದ್ಯದೊಂದಿಗೆ ಟೀಮ್ ಇಂಡಿಯಾದ (T20 World Cup 2021) ವಿಶ್ವಕಪ್ ಅಭಿಯಾನ ಅಂತ್ಯಗೊಳ್ಳಲಿದೆ. ಇತ್ತ ಈ ಪಂದ್ಯದ ಬಳಿಕ ಟೀಮ್ ಇಂಡಿಯಾ (Team India) ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ (Virat Kohli) ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರೆಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಖುದ್ದು ಕೊಹ್ಲಿಯೇ ಸಣ್ಣ ಸುಳಿವು ನೀಡಿದ್ದಾರೆ. ನಮೀಬಿಯಾ ವಿರುದ್ದದ ಟಾಸ್​ ಬಳಿಕ ಮಾತನಾಡಿದ ಕೊಹ್ಲಿ ತಂಡವನ್ನು ಇಷ್ಟು ದಿನಗಳ ಕಾಲ ಮುನ್ನಡೆಸಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಈ ಅವಕಾಶದಲ್ಲಿ ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಆದರೆ ಈಗ ನಾಯಕತ್ವದಿಂದ ಕೆಳಗಿಳಿಯಬೇಕಾದ ಸಮಯ ಬಂದಿದೆ. ನನ್ನ ನಾಯಕತ್ವದಲ್ಲಿ ತಂಡ ಹೇಗೆ ಆಡಿದೆ ಎಂಬುದರ ಬಗ್ಗೆ ನನಗೆ ಅಪಾರವಾದ ಹೆಮ್ಮೆ ಇದೆ. ಈಗ ಮುಂದಿನವರ ಸರದಿ ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ಇದೇ ವೇಳೆ ಟೀಮ್ ಇಂಡಿಯಾ ಟಿ20 ತಂಡವನ್ನು ಮುಂಬರುವ ದಿನಗಳಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ವಿರಾಟ್ ಕೊಹ್ಲಿ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ನಮ್ಮ ತಂಡದ ಪ್ರಸ್ತುತ ಉಪನಾಯಕ. ಕೆಲ ಸಮಯದಿಂದ ಅವರು ಕೂಡ ತಂಡವನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು. ಈ ಮೂಲಕ ಮುಂದಿನ ದಿನಗಳಲ್ಲಿ ಹಿಟ್​ಮ್ಯಾನ್ ಟೀಮ್ ಇಂಡಿಯಾ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವಿರಾಟ್ ಕೊಹ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಇನ್ನು ರೋಹಿತ್ ಶರ್ಮಾ ಟಿ20 ತಂಡದ ನಾಯಕರಾದರೆ, ಕೆಎಲ್ ರಾಹುಲ್ ಅವರು ಉಪನಾಯಕರಾಗುವ ಸಾಧ್ಯತೆ ಹೆಚ್ಚಿದೆ.

ರೋಹಿತ್ ಶರ್ಮಾ ನಾಯಕನಾಗಿ 19 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಸಾರಥ್ಯವಹಿಸಿದ್ದರು. ಇದರಲ್ಲಿ 15 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇನ್ನು 50* ಪಂದ್ಯಗಳಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ 29 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಹಾಗೆಯೇ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 16 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಮೂಡಿಬಂದಿರಲಿಲ್ಲ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(T20 World Cup 2021: Virat Kohli drops big hint on Team India’s next T20I captain)

TV9 Kannada


Leave a Reply

Your email address will not be published. Required fields are marked *