Virat Kohli: ನಾಯಕನಾಗಿ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡದಿರುವ ಅಸಲಿ ಕಾರಣ ತಿಳಿಸಿದ ಕೊಹ್ಲಿ | Virat Kohli Reveals Why He Did Not Get To Bat In His Last Game As T20 Captain


Virat Kohli: ನಾಯಕನಾಗಿ ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡದಿರುವ ಅಸಲಿ ಕಾರಣ ತಿಳಿಸಿದ ಕೊಹ್ಲಿ

ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್​ನಲ್ಲಿ (T20 World Cup 2021) ಕೊನೆಯ ಬಾರಿ ನಾಯಕನಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಮಾಡಿರಲಿಲ್ಲ ಎಂಬುದು ವಿಶೇಷ. ನಮೀಬಿಯಾ ನೀಡಿದ ಕಡಿಮೆ ಮೊತ್ತ ಟಾರ್ಗೆಟ್​ ಅನ್ನು ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭರ್ಜರಿಯಾಗಿ ಬೆನ್ನತ್ತಿದರು. ಮೊದಲ ವಿಕೆಟ್​ಗೆ 86 ರನ್ ಜೊತೆಯಾಟವಾಡಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಕೊನೆಯ ಬಾರಿ ನಾಯಕನಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು.

ಏಕೆಂದರೆ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಸೂರ್ಯ ಕುಮಾರ್ ಯಾದವ್ ಕಣಕ್ಕಿಳಿದಿದ್ದರು. ಅಂತಿಮವಾಗಿ ಟೀಮ್ ಇಂಡಿಯಾ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತ್ತು. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿಗೆ, ನೀವೇಕೆ ನಾಯಕನಾಗಿ ಕೊನೆಯ ಪಂದ್ಯವಾಡುತ್ತಿದ್ದರೂ ಬ್ಯಾಟಿಂಗ್​​ಗೆ ಬರಲಿಲ್ಲ ಕೇಳಲಾಗಿತ್ತು.

ಈ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನಾನು ನಾಯಕನಾಗುವ ಮೊದಲು ತಂಡದ ಆಟಗಾರ. ಯಾವಾಗಲೂ ಯಾವುದಾದರೂ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತೇನೆ. ಈ ಬಾರಿಯ ವಿಶ್ವಕಪ್​ನಲ್ಲಿ ಸೂರ್ಯ ಕುಮಾರ್ ಉತ್ತಮವಾಗಿ ಆಡುವ ಅವಕಾಶ ದೊರೆತಿರಲಿಲ್ಲ. ಇದು ಬೇರೆ ಕೊನೆಯ ಪಂದ್ಯ. ಹಾಗಾಗಿ ಸೂರ್ಯಕುಮಾರ್ ಯಾದವ್​ಗೆ ಇದು ಸ್ಮರಣೀಯ ಇನಿಂಗ್ಸ್​ ಆಗಲಿ ಎಂದು ಭಾವಿಸಿದೆ. ಹೀಗಾಗಿ ನಾನು ಸೂರ್ಯ ಕುಮಾರ್​ ಅವರನ್ನು ಬ್ಯಾಟಿಂಗ್​ಗೆ ಕಳುಹಿಸಿದೆ ಎಂದು ಕೊಹ್ಲಿ ತಿಳಿಸಿದರು. ಕೊಹ್ಲಿಯ ಈ ನಡೆಯ ಬಗ್ಗೆ ಇದೀಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ

(Virat Kohli Reveals Why He Did Not Get To Bat In His Last Game As T20 Captain)

TV9 Kannada


Leave a Reply

Your email address will not be published. Required fields are marked *