Virat Kohli: ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿ ಸಂಭ್ರಮಿಸಿದ್ದು ಹೇಗೆ ನೋಡಿ | RCB vs RR IPL 2022 2022 Qualifier 2 Pitch invader runs up to Virat Kohli celebrates as he runs back


RR vs RCB: ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (Virat Kohli) ಇನ್ನಿಂಗ್ಸ್ ಆರಂಭಿಸಿದರು. ಈ ಸಂದರ್ಭ ವಿಶೇಷ ಘಟನೆಯೊಂದು ನಡೆಯಿತು.

ಐಪಿಎಲ್​ 2022 (IPL 2022) ರಲ್ಲಿ ಶುಕ್ರವಾರ ನಡೆದ ಕ್ವಾಲಿಫೈಯರ್ – 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ ಸೋಲು ಕಾಣುವ ಮೂಲಕ ಕಪ್ ಗೆಲ್ಲುವ ಆಸೆಯೂ ನುಚ್ಚು ನೂರಾಯಿತು. ಹೊಸ ನಾಯಕ, ಹೊಸ ತಂಡದೊಂದಿಗೆ ಕಣಕ್ಕಿಳಿದ ಆರ್​ಸಿಬಿ ಕ್ವಾಲಿಫೈಯರ್ ಹಂತಕ್ಕೆ ಬಂತಲ್ಲ ಎಂಬ ಸಮಾಧಾನ ಒಂದುಕಡೆ ಇದ್ದರೆ ಮತ್ತೊಂದೆಡೆ ಇಷ್ಟು ಹತ್ತಿರ ಬಂದು ಫೈನಲ್ ತಲುಪಿಲ್ಲವಲ್ಲ ಎಂಬ ನೋವು ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (Virat Kohli) ಇನ್ನಿಂಗ್ಸ್ ಆರಂಭಿಸಿದರು. ಈ ಸಂದರ್ಭ ವಿಶೇಷ ಘಟನೆಯೊಂದು ನಡೆಯಿತು.

ಪಂದ್ಯ ಆರಂಭವಾದ ಕೆಲಹೊತ್ತಲ್ಲಿ ಇದಕ್ಕಿದಂತೆ ಒಬ್ಬ ವ್ಯಕ್ತಿ ಮೈದಾನವನ್ನು ಪ್ರವೇಶಿಸಿದರು. ಈತ ವಿರಾಟ್ ಕೊಹ್ಲಿ ಅಭಿಮಾನಿ ಆಗಿದ್ದು ಬೌಂಡರಿ ಲೈನ್ ನಿಂದ ಓಡಿ ಪಿಚ್ ಬಳಿ ಬಂದು ಕೊಹ್ಲಿಯ ಪಾದ ಸ್ಪರ್ಷ ಮಾಡಿದ್ದಾರೆ. ಹೀಗೆ ಮಾಡಿದ ತಕ್ಷಣ ಖುಷಿ ತಾಳಲಾರದೆ ಮೈದಾನದಲ್ಲೇ ಕುಣಿದು ನಂತರ ಪ್ಲೇಕ್ಷಕ ಗ್ಯಾಲರಿ ಕಡೆ ಓಡಿದ್ದಾರೆ. ಆದರೆ, ಈ ಸಂದರ್ಭ ಅಹ್ಮದಾಬಾದ್ ಪೊಲೀಸರು ಅವರನ್ನು ಮೈದಾನದಲ್ಲೇ ತಮ್ಮ ವಶಕ್ಕೆ ಪಡೆದುಕೊಂಡರು.

ಕಳೆದ ಲಖನೌ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೂ ಇದೇರೀತಿ ನಡೆದಿತ್ತು. ಬೌಂಡರಿ ಲೈನ್ ನಲ್ಲಿದ್ದ ವಿರಾಟ್ ಅವರನ್ನು ನೋಡಲು ಮೈದಾನದ ಒಳಗೆ ಪ್ರವೇಶಿಸಿದರು. ಆದರೆ ಇವರು ಮೈದಾನ ಪ್ರವೇಶಿಸಿ ವಿರಾಟ್ ಹತ್ತಿರ ಬರುತ್ತಿದಂತೆ ಅಲ್ಲೇ ಇದ್ದ ಕೋಲ್ಕತ್ತಾ ಪೊಲೀಸರು ಆತನನ್ನು ತಡೆದು ಎತ್ತುಕೊಂಡು ಹೋಗಿದ್ದರು.

Sanju Samson: ನಾವು ಆತನಿಗೋಸ್ಕರ ಕಪ್ ಗೆದ್ದೇ ಗೆಲ್ಲುತ್ತೇವೆ ಎಂದ ರಾಜಸ್ಥಾನ್ ರಾಯಲ್ಸ್

ಎಲಿಮಿನೇಟರ್ – 2 ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ(7) ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ನಂತರ ಜೊತೆಯಾದ ನಾಯಕ ಫಾಫ್‌ ಡುಪ್ಲೆಸ್ಸಿ(25) ಹಾಗೂ ರಜತ್‌ ಪಟಿದಾರ್‌(58) 2ನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌(24) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ ಪಟಿದಾರ್‌ ವಿಕೆಟ್‌ ಪತನದ ಬಳಿಕ ಬಂದ ಯಾವುದೇ‌ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡಲಿಲ್ಲ. ಆರ್‌ಸಿಬಿ 8 ವಿಕೆಟಿಗೆ ಕೇವಲ 157 ರನ್‌ ಗಳಿಸಿತು.

ಇದಕ್ಕುತ್ತರವಾಗಿ ರಾಜಸ್ಥಾನ ತಂಡವು 18.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 161 ರನ್ ಗಳಿಸಿ ಗೆದ್ದಿತು. ಜೋಸ್ ಬಟ್ಲರ್ (ಅಜೇಯ 106; 60ಎ, 4X10, 6X6) ಈ ಬಾರಿಯ ಟೂರ್ನಿಯಲ್ಲಿ ನಾಲ್ಕನೇ ಶತಕ ಪೂರೈಸಿದರು. ಯಶಸ್ವಿ ಜೈಸ್ವಾಲ್ (21 ರನ್) ಮತ್ತು ಬಟ್ಲರ್ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದರು. ಕೇವಲ ಐದು ಓವರ್‌ಗಳಲ್ಲಿ 61 ರನ್‌ಗಳು ಸೇರಿದವು. ಸಂಜು 23 ರನ್ ಗಳಿಸಿ ಹಸರಂಗಾ ಬೌಲಿಂಗ್‌ನಲ್ಲಿ ಔಟಾದರು. ದೇವದತ್ ಪಡಿಕ್ಕಲ್ ಕೂಡ 9 ರನ್ ಗಳಿಸಿ ನಿರ್ಗಮಿಸಿದರು. ಬಟ್ಲರ್ ತಾವೆದುರಿಸಿದ 59ನೇ ಎಸೆತದಲ್ಲಿ ಶತಕ ಪೂರೈಸಿದರು. ನಂತರದ ಎಸೆತದಲ್ಲಿ ಸಿಕ್ಸರ್ ಗಳಿಸಿ, ತಂಡವನ್ನು ಗೆಲುವಿನ ಗೆರೆ ದಾಟಿಸಿ ಫೈನಲ್​ ಪ್ರವೇಶಿಸುವಂತೆ ಮಾಡಿದರು.

TV9 Kannada


Leave a Reply

Your email address will not be published. Required fields are marked *