Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕಾಗಿ 2ನೇ ಟೆಸ್ಟ್​ನಿಂದ ಹೊರಗುಳಿಯಲಿದ್ದಾರೆ ಈ ಸ್ಟಾರ್ ಬ್ಯಾಟರ್: ಯಾರು ಗೊತ್ತಾ? | India vs New Zealand Test Mayank Agarwal is dropped for the 2nd Test as Virat Kohli returning to the side


Virat Kohli: ವಿರಾಟ್ ಕೊಹ್ಲಿ ಸ್ಥಾನಕ್ಕಾಗಿ 2ನೇ ಟೆಸ್ಟ್​ನಿಂದ ಹೊರಗುಳಿಯಲಿದ್ದಾರೆ ಈ ಸ್ಟಾರ್ ಬ್ಯಾಟರ್: ಯಾರು ಗೊತ್ತಾ?

Virat Kohli India vs New Zealand Test

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಅಂತಿಮ ಎರಡನೇ ಟೆಸ್ಟ್ (2nd Test) ಪಂದ್ಯ ಶುಕ್ರವಾರದಿಂದ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಕಾನ್ಪುರದಲ್ಲಿ ಜರುಗಿದ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯಕಂಡ ಪರಿಣಾಮ ಎರಡನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ವಿರಾಟ್ ಕೊಹ್ಲಿ (Virat Kohli) ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಇದರ ಜೊತೆಗೆ ತಂಡದಲ್ಲಿ ದೊಡ್ಡ ಸಮಸ್ಯೆ ಕೂಡ ಉದ್ಬವಿಸಿದೆ. ಕಿಂಗ್ ಕೊಹ್ಲಿ ತಂಡ ಸೇರಿರುವುದರಿಂದ ಒಬ್ಬ ಆಟಗಾರ ಆಡುವ ಬಳಗದಿಂದ ಹಿಂದೆ ಸರಿಯಬೇಕಾದ ಅನಿವಾರ್ಯ ಎದುರಾಗಿದೆ. ಮೊದಲ ಟೆಸ್ಟ್​ನಲ್ಲಿ ಕೊಹ್ಲಿ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಸ್ಥಾನ ಪಡೆದಿದ್ದರು. ಆದರೆ, ಅಯ್ಯರ್ ಪದಾರ್ಪಣೆ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಇವರನ್ನು ಕೈಬಿಡಲು ಸಾಧ್ಯವಿಲ್ಲ. ಹಾಗಾದ್ರೆ ಕೊಹ್ಲಿಗೆ ಯಾವ ಆಟಗಾರ ಜಾಗ ಮಾಡಿಕೊಡುತ್ತಾನೆ?.

ಮೊದಲ ಟೆಸ್ಟ್​ನಲ್ಲಿ ಕೊಹ್ಲಿ ಅಲಭ್ಯತೆಯಿಂದಾಗಿ ನಾಯಕತ್ವ ಅಜಿಂಕ್ಯಾ ರಹಾನೆ ವಹಿಸಿಕೊಂಡಿದ್ದರು. ಇದೀಗ ಟಿ20 ವಿಶ್ವಕಪ್ ಬಳಿಕ ದೀರ್ಘ ವಿರಾಮದಲ್ಲಿದ್ದ ವಿರಾಟ್ ನಾಯಕತ್ವ ವಹಿಸಿ ಕಮ್​ಬ್ಯಾಕ್ ಮಾಡಲು ತಯಾರಾಗಿದ್ದಾರೆ. ಹೀಗಾಗಿ ಕೊಹ್ಲಿಗಾಗಿ ಯಾರನ್ನು ಕೈಬಿಡಬೇಕು ಎಂಬುದು ತಲೆನೋವಾಗಿದೆ. ಈ ಹಿಂದೆ ರಹಾನೆ ಈ ಪ್ರಶ್ನೆಗೆ ಗೊಂದಲದ ಉತ್ತರ ನೀಡಿದ್ದರು. ಅದೇನಿದ್ದರು ಮ್ಯಾನೇಜ್ಮೆಂಟ್​ಗೆ ಬಿಟ್ಟ ನಿರ್ಧಾರ ಎಂದು ಹೇಳಿ ಕೈತೊಳೆದುಕೊಂಡಿದ್ದರು.

ಸದ್ಯ ಎರಡನೇ ಟೆಸ್ಟ್ ಆರಂಭಕ್ಕೆ ಒಂದು ದಿನ ಬಾಕಿಯಿರುವಾಗ ಕೊಹ್ಲಿಗಾಗಿ ಯಾರನ್ನು ಕೈಬಿಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮೂಲಗಳ ಪ್ರಕಾರ ಮಯಾಂಕ್ ಅಗರ್ವಾಲ್ ತಂಡದಿಂದ ಹೊರಗುಳಿಯಲಿದ್ದು, ವಿರಾಟ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾದಲ್ಲಿ ಶುಭ್ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆ ಕೂಡ ಎಳುತ್ತದೆ. ಹೀಗಾದಲ್ಲಿ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಬೇಕಾಗುತ್ತದೆ. ಇಂಜುರಿಯಿಂದ ಬಳಲುತ್ತಿದ್ದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಅವರಿಗೆ ವಿಶ್ರಾಂತಿ ನೀಡಿ ಕೆಎಸ್ ಭರತ್​ಗೆ ಅವಕಾಶ ನೀಡಬೇಕು. ಭರತ್​ ಹಾಗೂ ಗಿಲ್ ಓಪನರ್ ಆಗಿ ಕಣಕ್ಕಿಳಿದರೆ ತಂಡ ಬ್ಯಾಲೆನ್ಸ್ ಆಗಲಿದೆ.

ವಾಂಖೆಡೆಯಲ್ಲಿ ನಡೆಯಲಿರುವ ಇಂಡೋ-ಕಿವೀಸ್ ಎರಡನೇ ಟೆಸ್ಟ್ ಪಂದ್ಯ ಸಾಕಷ್ಟು ವಿಶೆಷತೆಯಿಂದ ಕೂಡಿರಲಿದೆ. ಈ ಪಂದ್ಯದ ಮೂಲಕ ಸರಿ ಸುಮಾರು ಐದು ವರ್ಷಗಳ ಬಳಿಕ ಈ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆದಂತಾಗುತ್ತದೆ. ಅಲ್ಲದೆ ಈ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿರುವ ಕೇವಲ ಮೂರನೇ ಪಂದ್ಯವಾಗಿದೆ. ವಾಂಖೆಡೆ ಸ್ಟೇಇಯಂನಲ್ಲಿ ಟೀಮ್ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದು 2016ರ ಡಿಸೆಂಬರ್‌ನಲ್ಲಿ. ಆ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 36 ರನ್‌ಗಳ ಅಂತರದಿಂದ ಗೆದ್ದು ಬೀಗಿತ್ತು.

ಇನ್ನು ನ್ಯೂಜಿಲೆಂಡ್ ತಂಡ ಈವರೆಗೆ ಭಾರತದಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಮಾತ್ರವೇ ಗೆದ್ದುಕೊಂಡಿದೆ. ಆದರೆ ಅದರಲ್ಲಿ ಒಂದು ಗೆಲುವು ಈ ವಾಂಖೆಡೆ ಕ್ರೀಡಾಂಗಣದಲ್ಲಿಯೇ ಬಂದಿದೆ ಎಂಬುದು ಗಮನಾರ್ಹ. ಆದರೆ, ಕಿವೀಸ್ ಒಂದೂ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಗೆದ್ದಿಲ್ಲ ಎಂಬುದು ನಿಜ. ಹೀಗಾಗಿ ಉಭಯ ತಂಡಗಳಿಗೆ ಈ ಟೆಸ್ಟ್ ಮುಖ್ಯವಾಗಿದ್ದು, ಮತ್ತೊಂದು ರೋಚಕ ಕದನವಾಗುವುದರಲ್ಲಿ ಅನುಮಾನವಿಲ್ಲ.

Virat Kohli: ವಿರಾಟ್ ಕೊಹ್ಲಿ ಏಕದಿನ ನಾಯಕತ್ವ: ಕೆಲವೇ ದಿನಗಳಲ್ಲಿ ಹೊರಬೀಳಲಿದೆಯಂತೆ ಶಾಕಿಂಗ್ ಸುದ್ದಿ

Dinesh Kartik: 2ನೇ ಟೆಸ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಆಡಬೇಕಾದರೆ ಈ ಆಟಗಾರ ಸ್ಥಾನ ಬಿಟ್ಟುಕೊಡಬೇಕು ಎಂದ ದಿನೇಶ್ ಕಾರ್ತಿಕ್

(India vs New Zealand Test Mayank Agarwal is dropped for the 2nd Test as Virat Kohli returning to the side)

TV9 Kannada


Leave a Reply

Your email address will not be published. Required fields are marked *