Virat Kohli: 2 ವರ್ಷಗಳೇ ಕಳೆದಿವೆ ಕೊಹ್ಲಿ ಬ್ಯಾಟ್​ನಿಂದ ಶತಕ ಬಂದು: ಎರಡನೇ ಟೆಸ್ಟ್​ನಲ್ಲಿ ಬರುತ್ತಾ ಸೆಂಚುರಿ? | Virat Kohli IND vs NZ 2nd Test More than two years since Virat Kohli scored his last international century


Virat Kohli: 2 ವರ್ಷಗಳೇ ಕಳೆದಿವೆ ಕೊಹ್ಲಿ ಬ್ಯಾಟ್​ನಿಂದ ಶತಕ ಬಂದು: ಎರಡನೇ ಟೆಸ್ಟ್​ನಲ್ಲಿ ಬರುತ್ತಾ ಸೆಂಚುರಿ?

Virat Kohli IND vs NZ

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ಮುಂಬೈಯ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಈ ಕುತೂಹಲಕಾರಿ ಕದನಕ್ಕೆ ಸಾಕ್ಷಿಯಾಗಲಿದೆ. ನಾಯಕ ವಿರಾಟ್ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿತ್ತು. ಸದ್ಯ ಕಿಂಗ್ ಕೊಹ್ಲಿ ಕಮ್​ಬ್ಯಾಕ್ ಮಾಡಿದ್ದು ತಂಡದ ಬ್ಯಾಟಿಂಗ್ ಬಲ ವೃದ್ದಿಸಿದೆ. ಆದರೆ, ಹಿರಿಯ ಅನುಭವಿ ಬ್ಯಾಟರ್​ಗಳೇ ಫಾರ್ಮ್​ ಕಳೆದುಕೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ರಹಾನೆ ಮತ್ತು ಪೂಜಾರ (Rahane and Pujara) ಒಂದುಕಡೆಯಿದ್ದರೆ ಇತ್ತ ವಿರಾಟ್ ಕೊಹ್ಲಿ ಬ್ಯಾಟ್ ಕೂಡ ಕಳೆದ ಕೆಲವು ಸಮಯದಿಂದ ಸದ್ದು ಮಾಡುತ್ತಿಲ್ಲ. ಹೀಗಾಗಿ ಇದು ಕೆಲ ಆಟಗಾರರಿಗೆ ಮಹತ್ವದ ಪಂದ್ಯವಾಗಿದೆ. ಅದರಲ್ಲೂ ಶತಕದ ಬರ ಎದುರಿಸುತ್ತಿರುವ ಕೊಹ್ಲಿಗೆ (Virat Kohli Century) ಒಂದು ಉತ್ತಮ ಅವಕಾಶವಾಗಿದೆ.

ಹೌದು, ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಶತಕ ಬಾರಿಸಿ 2 ವರ್ಷಗಳೇ ಕಳೆದಿವೆ. ಇವರು ಕೊನೇ ಸಾರಿ ಶತಕ ಬಾರಿಸಿದ್ದು ಯಾವಾಗ ಗೊತ್ತಾ? 2019ರ ನವೆಂಬರ್‌ನಲ್ಲಿ. ಭಾರತಕ್ಕೆ ಪ್ರವಾಸ ಬಂದಿದ್ದ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಬಾರಿಸಿದ್ದರು. ಅಸಲಿಗೆ ಬಾಂಗ್ಲಾ ತಂಡ ಭಾರತದ ವಿರುದ್ಧ ಆವತ್ತು ಎರಡು ಟೆಸ್ಟ್ ಪಂದ್ಯಗಳನ್ನಾಡಿತ್ತು. ಇದರಲ್ಲಿ ಕೊಹ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ 136 ರನ್ ಗಳಿಸಿದ್ದರು. ಅದೇ ಕೊನೆ, ನಂತರ ಇಂದಿನ ವರೆಗೆ ಕೊಹ್ಲಿ ಮೂರಂಕಿ ಗಡಿ ದಾಟಿಲ್ಲ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನಲ್ಲಾದರು ಶತಕ ಬಾರಿಸುತ್ತಾರ ಎಂಬುದು ನೋಡಬೇಕಿದೆ.

ಪಾಂಟಿಂಗ್ ದಾಖಲೆ ಮುರಿಯವರೇ ಕೊಹ್ಲಿ?:

ವಿರಾಟ್ ಕೊಹ್ಲಿ ಪ್ರಸ್ತುತ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ನಲ್ಲಿ 70 ಶತಕ ಸಿಡಿಸಿದ್ದಾರೆ. ಇದರಲ್ಲಿ 41 ನಾಯಕನಾಗಿ ಶತಕ ಗಳಿಸಿದ್ದಾರೆ. ಕೊಹ್ಲಿ ಒಂದು ಶತಕ ಸಿಡಿಸಿದರೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ರಿಕಿ ಪಾಂಟಿಂಗ್ ನಾಯಕನಾಗಿ ಗಳಿಸಿದ್ದ 41 ಶತಕಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ಫಾರ್ಮ್​ನಲ್ಲಿ ಇಲ್ಲದೇ ಇರುವುದರಿಂದ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವಿದ್ದು ದೊಡ್ಡ ಜವಾಬ್ದಾರಿ ಕೂಡ ಇದೆ.

ಸಾಹ ಫಿಟ್:

ವಿಕೆಟ್‌ ಕೀಪರ್‌ ಬ್ಯಾಟರ್ ವೃದ್ದಿಮಾನ್‌ ಸಹಾ ಕತ್ತು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ನ್ಯೂಜಿಲೆಂಡ್‌ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಫಿಟ್‌ ಆಗಿದ್ದಾರೆಂದು ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದ ನಿಮಿತ್ತ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, “ವೃದ್ದಿಮಾನ್‌ ಸಹಾ ಸಂಪೂರ್ಣ ಫಿಟ್‌ ಆಗಿದ್ದಾರೆ ಹಾಗೂ ಕತ್ತು ನೋವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇಲ್ಲಿನ ಪರಿಸ್ಥಿತಿ ಹಾಗೂ ವಾತಾವರಣದ ಆಧಾರದ ಮೇಲೆ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ.

India vs New Zealand: ಇಂದಿನಿಂದ ಭಾರತ- ನ್ಯೂಜಿಲೆಂಡ್ ಎರಡನೇ ಟೆಸ್ಟ್: ನಿರ್ಣಾಯಕ ಕದನಕ್ಕೆ ವಾಂಖೆಡೆ ಸಜ್ಜು

(Virat Kohli IND vs NZ 2nd Test More than two years since Virat Kohli scored his last international century)

TV9 Kannada


Leave a Reply

Your email address will not be published. Required fields are marked *