Vishwa Deenadayalan: 18 ವರ್ಷದ ಭರವಸೆಯ ಟೇಬಲ್ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು | Vishwa Deenadayalan an 18 year old table tennis player from Tamil Nadu died in a road accident


Vishwa Deenadayalan: 18 ವರ್ಷದ ಭರವಸೆಯ ಟೇಬಲ್ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು

Vishwa Deenadayalan

ತಮಿಳುನಾಡಿನ ವಿಶ್ವ ದೀನದಯಾಳನ್ (Vishwa Deenadayalan) ಎಂಬ 18 ವರ್ಷದ ಟೇಬಲ್ ಟೆನಿಸ್ (Table Tennis) ಆಟಗಾರ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ. ಗುವಾಹಟಿಯಿಂದ ಶಿಲ್ಲಾಂಗ್​ಗೆ ಟ್ಯಾಕ್ಸಿ ಮೂಲಕ ತೆರಳುವ ವೇಲೆ ಅಪಘಾತ ಸಂಭವಿಸಿದೆ. ಅವರು ತಮ್ಮ ಮೂವರು ಸಹ ಆಟಗಾರರೊಂದಿಗೆ ಸೋಮವಾರದಿಂದ ಆರಂಭವಾಗಬೇಕಿದ್ದ 83ನೇ ಸೀನಿಯರ್ ನ್ಯಾಷನಲ್​ ಅಂಡ್​ ಇಂಟರ್​ ಸ್ಟೇಟ್​ ಟೇಬಲ್ ಟೆನ್ನಿಸ್‌​ ಚಾಂಪಿಯನ್​ಶಿಪ್​ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ರಮೇಶ್​ ಸಂತೋಷ್​ ಕುಮಾರ್, ಅಭಿನಾಶ್ ಪ್ರಸನ್ನಾಜಿ ಶ್ರೀನಿವಾಸನ್​ ಮತ್ತು ಕಿಶೋರ್ ಕುಮಾರ್​ ಎಂಬುವವರು ವಿಶ್ವ ದೀನದಯಾಳನ್​ ಜೊತೆಗೆ ಪ್ರಯಾಣಿಸುತ್ತಿದ್ದ ಆಟಗಾರರಾಗಿದ್ದಾರೆ.

ಪ್ರಯಾಣ ನಡೆಸುತ್ತಿದ್ದ ಸಂದರ್ಭದಲ್ಲಿ ಮುಂಭಾಗದಿಂದ ಬಂದ 12 ಚಕ್ರಗಳ ಟ್ರೇಲರ್, ರಸ್ತೆ ವಿಭಜಕ್ಕೆ ಗುದ್ದಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಶ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರಮೇಶ್ ಸಂತೋಷ್ ಕುಮಾರ್, ಅವಿನಾಶ್ ಪ್ರಸನ್ನಜಿ ಮತ್ತು ಕಿಶೋರ್ ಕುಮಾರ್ ಗಂಭೀರ ಗಾಯಗೊಂಡಿದ್ದಾರೆ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ ತಿಳಿಸಿದೆ.

ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ಈ ಮಾಹಿತಿ ಹಂಚಿಕೊಂಡಿದೆ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ದೀನದಯಾಳನ್ ಕೂಡ ಮೃತಪಟ್ಟಿರುವು ದನ್ನು ನಾಂಗ್‌ಪೋಹ್ ಸಿವಿಲ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಸಹ ಆಟಗಾರರಾದ ರಮೇಶ್ ಸಂತೋಷ್ ಕುಮಾರ್, ಅಭಿನಾಶ್ ಪ್ರಸನ್ನಜಿ ಶ್ರೀನಿವಾಸನ್ ಮತ್ತು ಕಿಶೋರ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ದೀನದಯಾಳನ್ ಅವರ ತಂದೆ ಮತ್ತು ಅವರ ಇಬ್ಬರು ಕುಟುಂಬ ಸದಸ್ಯರು ಗುವಾಹಟಿಗೆ ಆಗಮಿಸಲಿದ್ದು, ಅವರ ಶವವನ್ನು ಸೋಮವಾರ ಚೆನ್ನೈಗೆ ಕೊಂಡೊಯ್ಯಲಾಗುವುದು. ದೀನದಯಾಳನ್, ಹಲವಾರು ರಾಷ್ಟ್ರೀಯ ಶ್ರೇಯಾಂಕದ ಪ್ರಶಸ್ತಿಗಳು ಮತ್ತು ಅಂತರರಾಷ್ಟ್ರೀಯ ಪದಕಗಳನ್ನು ಹೊಂದಿರುವ ಭರವಸೆಯ ಆಟಗಾರರಾಗಿದ್ದರು, ಏಪ್ರಿಲ್ 27 ರಿಂದ ಆಸ್ಟ್ರಿಯಾದ ಲಿಂಜ್‌ನಲ್ಲಿ ನಡೆದ WTT ಯುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಬೇಕಾಗಿತ್ತು. ಅಣ್ಣಾನಗರದಲ್ಲಿರುವ ಕೃಷ್ಣಸ್ವಾಮಿ ಟಿಟಿ ಕ್ಲಬ್‌ನಳ್ಳಿ ತರಬೇತು ಪಡೆದ ಕೆಡೆಟ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು.

ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ ಸಂತಾಪ ಸೂಚಿಸಿದ್ದಾರೆ. ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಸಂತಾಪ ಸೂಚಿಸಿದ್ದು, ವಿಶ್ವ ಕುಟಂಬಕ್ಕೆ ಪರಿಹಾರವಾಗಿ 5 ಲಕ್ಷ ರೂಪಾಯಿನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

IPL 2022 Points Table: ಅಗ್ರಸ್ಥಾನದಲ್ಲಿ ಗುಜರಾತ್ ಭದ್ರ: ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿ ಮುಂಬೈ-ಚೆನ್ನೈ

Ravindra Jadeja: ಐದನೇ ಸೋಲು: ಪಂದ್ಯ ಮುಗಿದ ಬಳಿಕ ರವೀಂದ್ರ ಜಡೇಜಾ ಹೇಳಿದ್ದೇನು ನೋಡಿ

TV9 Kannada


Leave a Reply

Your email address will not be published.