Vivo: ವಿವೋದ ಹೊಸ ಸ್ಮಾರ್ಟ್​​ಫೋನ್ ಫೀಚರ್ ಕಂಡು ಬೆರಗಾದ ಟೆಕ್ ಮಾರುಕಟ್ಟೆ: ಅಂಥದ್ದೇನಿದೆ ನೋಡಿ | Vivo will have support for a whopping 200W fast charging tech


Vivo: ವಿವೋದ ಹೊಸ ಸ್ಮಾರ್ಟ್​​ಫೋನ್ ಫೀಚರ್ ಕಂಡು ಬೆರಗಾದ ಟೆಕ್ ಮಾರುಕಟ್ಟೆ: ಅಂಥದ್ದೇನಿದೆ ನೋಡಿ

Vivo 200W Fast Charging Phone

200W Fast Charging Phone: ವಿವೋ ಹೊಸ ಸ್ಮಾರ್ಟ್​​ಫೋನ್​ವೊಂದನ್ನು ತಯಾರು ಮಾಡುತ್ತಿದ್ದು ಇದರಲ್ಲಿ ಅತ್ಯಂತ ವೇಗದ ಚಾರ್ಜರ್​ ಇರಲಿದೆಯಂತೆ. ಹೌದು, ವಿವೋ ಮುಂದಿನ ಫೋನ್ ಬರೋಬ್ಬರಿ 200W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿರಲಿದೆಯಂತೆ.

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್, ಒನ್​ಪ್ಲಸ್ ನಡುವೆ ಸೈಲೆಂಟ್ ಆಗಿ ನೆಲೆಯೂರಿರುವ ಪ್ರಸಿದ್ಧ ವಿವೋ ಕಂಪನಿ ಈ ವರ್ಷ ಅನೇಕ ಮೊಬೈಲ್​ಗಳನ್ನು ಬಿಡುಗಡೆ ಮಾಡಿದೆ. ಬೆಲೆಗೆ ತಕ್ಕಂತೆ ಫೀಚರ್​ಗಳನ್ನು ನೀಡುವುದರಲ್ಲಿ ವಿವೋ ಎತ್ತಿದ ಕೈ. ಇತ್ತೀಚೆಗಷ್ಟೆ ವಿವೋ ತನ್ನ X ಸರಣಿಯಲ್ಲಿ ಆಕರ್ಷಕ ಕ್ಯಾಮೆರಾ ಹೊಂದಿರುವ X80 ಮತ್ತು X80 ಪ್ರೊ (Vivo X80, X80 Pro) ಫೋನನ್ನು ಅನಾವರಣ ಮಾಡಿ ಸುದ್ದಿಯಾಗಿತ್ತು. ಇದೀಗ ಟೆಕ್ ಮಾರುಕಟ್ಟೆಯೇ ಬೆರಗಾಗುವಂತಹ ಸುದ್ದಿಯೊಂದು ವಿವೋ ಮೂಲಗಳಿಂದ ಬಂದಿದೆ. ಅದುವೆ ವಿವೋ ಹೊಸ ಸ್ಮಾರ್ಟ್​​ಫೋನ್​ವೊಂದನ್ನು ತಯಾರು ಮಾಡುತ್ತಿದ್ದು ಇದು ಅತ್ಯಂತ ವೇಗದ ಚಾರ್ಜರ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆಯಂತೆ.

ಹೌದು, ಶಾಕಿಂಗ್ ಎಂಬಂತೆ ವಿವೋ ಪರಿಚಯಿಸಲಿರುವ ಮುಂದಿನ ಫೋನ್ ಬರೋಬ್ಬರಿ 200W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿರಲಿದೆಯಂತೆ. ಮೊನ್ನೆಯಷ್ಟೆ ಬಿಡುಗಡೆ ಮಾಡಿದ X80 ಮತ್ತು X80 ಪ್ರೊ 80W ಫಾಸ್ಷ್ ಚಾರ್ಜಿಂಗ್ ಅನ್ನು ನೀಡಿದೆ. ಇದಕ್ಕಿಂತ ಮುಂದೆ ವಿವೋ ಹೋಗಿರಲಿಲ್ಲ. ಇದೀಗ 200W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಇರುವ ಫೋನ್ ಬಗ್ಗೆ ಕೆಲಸ ಶುರು ಮಾಡಿದೆ. ಈ ಸ್ಮಾರ್ಟ್​ಫೋನ್ ಹೆಸರು ಬಹಿರಂಗಗೊಂಡಿಲ್ಲ. ಸದ್ಯದ ಮಾರುಕಟ್ಟೆಯಲ್ಲಿ 30W ನಿಂದ ಹಿಡಿದು 150W ಫಾಸ್ಟ್ ಚಾರ್ಜಿಂಗ್ ಇರುವ ಫೋನ್​ಗಳಿವೆ. ಶವೋಮಿ ಕಂಪನಿ ಈ ಹಿಂದೆಯೆ 200W ಫಾಸ್ಟ್ ಚಾರ್ಜರ್​ನ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಅದಿನ್ನೂ ರಿಲೀಸ್ ಆಗಿಲ್ಲ.

WhatsApp: ಇನ್ನಾದರೂ ಎಚ್ಚೆತ್ತುಕೊಳ್ಳಿ: 16 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್

ಇತ್ತೀಚೆಗಷ್ಟೆ ಭಾರತದಲ್ಲಿ ಹೊಸ ವಿವೋ X80 ಪ್ರೊ ಮತ್ತು ವಿವೋ X80 ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿತ್ತು. ಇದರಲ್ಲಿ ವಿವೋ X80 ಪ್ರೊ ಸ್ಮಾರ್ಟ್‌ಫೋನ್‌ 1,440×3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.78-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್, ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಇನ್ನು ವಿವೋ X80 ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.78-ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX866 RGBW ಸೆನ್ಸಾರ್‌ ಹೊಂದಿದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 80W ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ.

TV9 Kannada


Leave a Reply

Your email address will not be published. Required fields are marked *