Vivo T1 5G: T ಸರಣಿಯಲ್ಲಿ ಹೊಸ ಫೋನ್ ಪರಿಚಯಿಸಿದ ವಿವೋ: ಬಜೆಟ್ ಪ್ರಿಯರು ಫುಲ್ ಫಿದಾ | Vivo has introduced The first smartphone in the new series is the Vivo T1 5G


Vivo T1 5G: T ಸರಣಿಯಲ್ಲಿ ಹೊಸ ಫೋನ್ ಪರಿಚಯಿಸಿದ ವಿವೋ: ಬಜೆಟ್ ಪ್ರಿಯರು ಫುಲ್ ಫಿದಾ

Vivo T1 5G

ಕಳೆದ ತಿಂಗಳು ಜನವರಿಯಲ್ಲಿ ಭಾರತದಲ್ಲಿ ಬರೋಬ್ಬರು ಐದು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಪ್ರಸಿದ್ಧ ವಿವೋ (Vivo) ಕಂಪನಿ ಇದೀಗ ಮತ್ತೊಂದು ಹೊಸ ಫೋನನ್ನು ಲಾಂಚ್ ಮಾಡಿದೆ. ಬಜೆಟ್ ಪ್ರಿಯರಿಗೆಂದೇ ತನ್ನ ಹೊಸ ವಿವೋ ಟಿ1 5ಜಿ (Vivo T1 5G) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಇದು ಕಡಿಮೆ ಬೆಲೆಗೆ ಲಭ್ಯವಿರುವ ಮತ್ತೊಂದು 5G ಫೋನ್ ಎಂಬುದು ವಿಶೇಷ. ಅಲ್ಲದೆ ವಿವೋ T ಸರಣಿಯಲ್ಲಿ ಬಿಡುಗಡೆ ಆದ ಮೊದಲ ಫೋನ್ ಇದಾಗಿದೆ. ಈ ಸ್ಮಾರ್ಟ್‌ಫೋನ್‌ (Smartphone) ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಸೆಟಪ್ ನೀಡಲಾಗಿದೆ. ಜೊತೆಗೆ 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಕೂಡ ಇದೆ.

ಬೆಲೆ ಎಷ್ಟು?:

ಭಾರತದಲ್ಲಿ ವಿವೋ T1 5G ಸ್ಮಾರ್ಟ್‌ಫೋನ್‌ ಒಟ್ಟು ಮಾದರಿಯಲ್ಲಿ ರಿಲೀಸ್ ಆಗಿದೆ. ಇದರ 4GB RAM ಮತ್ತು 128GB ಸ್ಟೋರೇಜ್ ಮಾದರಿಗೆ 15,990 ರೂ.ಗೆ ನಿಗದಿಪಡಿಸಲಾಗಿದೆ. 6GB RAM ಮತ್ತು 128GB 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 16,990 ರೂ. ಹಾಗೆಯೇ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 19,990 ರೂ. ಆಗಿದೆ. ಇದೇ ಫೆಬ್ರವರಿ 14 ರಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾಟ್ಟ್​​ನಲ್ಲಿ ಈ ಸ್ಮಾರ್ಟ್​ಫೋನ್ ಸೇಲ್ ಕಾಣಲಿದೆ.

ವಿವೋ T1 5G ಸ್ಮಾರ್ಟ್‌ಫೋನ್‌ 1,080×2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇದು IPS LCD ಡಿಸ್‌ಪ್ಲೇ ಆಗಿದ್ದು, 120Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 695 5G SoC ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ಫನ್‌ ಟಚ್‌ OS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ f/2.4 ಲೆನ್ಸ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ ಸೂಪರ್ ನೈಟ್ ಮೋಡ್ ಮತ್ತು ಮಲ್ಟಿ ಸ್ಟೈಲ್ ಪೋರ್ಟ್ರೇಟ್ ಮೋಡ್ ಅನ್ನು ಒಳಗೊಂಡಿದೆ.

ದೀರ್ಘ ಬಾಳಿಕೆಯ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂಕವಾಗಿ 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.1, USB ಟೈಪ್-C, ಮತ್ತು USB OTG ಸೇರಿವೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಯನ್ನು ನೀಡಲಾಗಿದೆ.

Redmi Note 11: ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ ರೆಡ್ಮಿ ನೋಟ್ 11 ಸರಣಿಯ ಹೊಸ ಸ್ಮಾರ್ಟ್​ಫೋನ್

Samsung Galaxy S22 Series: ಸ್ಯಾಮ್​ಸಂಗ್ ಗ್ಯಾಲಕ್ಸಿ S22, S22+ ಮತ್ತು S22 ಆಲ್ಟ್ರಾ: ಇದರಲ್ಲಿ ಯಾವುದು ಖರೀದಿಗೆ ಬೆಸ್ಟ್?

TV9 Kannada


Leave a Reply

Your email address will not be published.