Vivo V23e: ಕ್ಯಾಮೆರಾವನ್ನೇ ಗುರಿಯಾಗಿಸಿಕೊಂಡಿರುವ ವಿವೋದಿಂದ ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಲಾಂಚ್ | Vivo V23e has debuted as the companys latest model in its V series


Vivo V23e: ಕ್ಯಾಮೆರಾವನ್ನೇ ಗುರಿಯಾಗಿಸಿಕೊಂಡಿರುವ ವಿವೋದಿಂದ ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಲಾಂಚ್

Vivo V23e

ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡಿ ತನ್ನದೆ ಆದ ವಿಶೇಷ ಸ್ಥಾನ ಸ್ಥಾಪಿಸಿರುವ ವಿವೋ (VIVO) ಕಂಪನಿ ಈಗ ಹೊಸ ಸ್ಮಾರ್ಟ್​ಫೋನ್ ಒಂದನ್ನು ಲಾಂಚ್ ಮಾಡಿದೆ. ಈಗೀಗ ಸ್ಮಾರ್ಟ್​ಫೋನ್​ನಲ್ಲಿನ ಕ್ಯಾಮೆರಾಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ವಿವೋ 64 ಮೆಗಾಫಿಕ್ಸೆಲ್ ಸಾಮರ್ಥ್ಯದ ಸೆನ್ಸಾರ್ ಕ್ಯಾಮೆರಾ ಹೊಂದಿರುವ ಹೊಸ ವಿವೋ ವಿ23ಇ (VIVO V23e) ಸ್ಮಾರ್ಟ್‌ಫೋನ್‌ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.

ಸದ್ಯಕ್ಕೆ ವಿವೋ V23e ಸ್ಮಾರ್ಟ್‌ಫೋನ್‌ ಅನ್ನು ವಿಯೆಟ್ನಾಂನಲ್ಲಿ ಬಿಡುಗಡೆ ಆಗಿದೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆ. ವಿಯೆಟ್ನಾಂನಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು 8,490,000 VND. (ಸುಮಾರು ರೂ 28,000) ಗೆ ನಿಗದಿಪಡಿಸಲಾಗಿದೆ. ಈ ಡಿವೈಸ್‌ ಸಿಂಗಲ್‌ 8GB RAM ರೂಪಾಂತರದಲ್ಲಿ 128GB ಆಂತರಿಕ ಸಂಗ್ರಹಣೆಯೊಂದಿಗೆ ಲಭ್ಯವಾಗಲಿದೆ. ಇದು ಮೂನ್ಲೈಟ್ ಶ್ಯಾಡೋ (ಕಪ್ಪು) ಮತ್ತು ನೀಲಿ ಗುಲಾಬಿ ಕಲರ್‌ ಆಯ್ಕೆಯಲ್ಲಿ ಬರಲಿದೆ.

ವಿವೋ V23e ಸ್ಮಾರ್ಟ್‌ಫೋನ್ 2,400 x 1,080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44-ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಆಧಾರಿತ FunTouch 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ f/1.79 ಲೆನ್ಸ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್ ಸೆನ್ಸಾರ್‌ f/2.0 ಲೆನ್ಸ್‌ ಒಳಗೊಂಡಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇನ್ನು ಈ ರಿಯರ್‌ ಕ್ಯಾಮೆರಾದಲ್ಲಿ ಐ ಫೋಕಸ್, ನೈಟ್ ಮೋಡ್, ಪೋರ್ಟ್ರೇಟ್ ಎರೇಸರ್, ಲೈವ್ ಫೋಟೋ, ಎಆರ್ ಸ್ಟಿಕ್ಕರ್ ಮತ್ತು ಸ್ಲೋ-ಮೋಷನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್ 4050mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರ ಮೂಲಕ ಕೇವಲ 30 ನಿಮಿಷಗಳಲ್ಲಿ 69% ಚಾರ್ಜ್ ಮಾಡಲು ರೇಟ್ ಮಾಡಲಾಗಿದೆ. ಇನ್ನು ಕನನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ ಮತ್ತು ಜಿಪಿಎಸ್ ಬೆಂಬಲಿಸಲಿದೆ. ಡಿಸ್ಪ್ಲೇ ಒಳಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.

Poco M4 Pro 5G: ರೋಚಕತೆ ಸೃಷ್ಟಿಸಿರುವ ಬಹುನಿರೀಕ್ಷಿತ ಪೋಕೋ M4 ಪ್ರೊ 5G ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ

Duplicate contacts: ಮೊಬೈಲ್​ನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್​ಗಳನ್ನು ನಿಮಿಷಾರ್ಧದಲ್ಲಿ​ ಡಿಲೀಟ್ ಮಾಡಿ: ಇಲ್ಲಿದೆ ಟ್ರಿಕ್

(Vivo V23e has debuted as the companys latest model in its V-series)

TV9 Kannada


Leave a Reply

Your email address will not be published. Required fields are marked *