Vodafone Idea: ವೊಡಾಫೋನ್-ಐಡಿಯಾದಿಂದ ಡಬಲ್ ಡೇಟಾ ಆಫರ್: 2GB ಜೊತೆ ಪುನಃ 2GB ಫ್ರೀ | Vodafone Idea or Vi Latest Prepaid Plans with 4GB daily data under the double data benefit


Vodafone Idea: ವೊಡಾಫೋನ್-ಐಡಿಯಾದಿಂದ ಡಬಲ್ ಡೇಟಾ ಆಫರ್: 2GB ಜೊತೆ ಪುನಃ 2GB ಫ್ರೀ

vodafone idea

ದೇಶದ ಟೆಲಿಕಾಂ (Telecom) ವಲಯದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಕಡಿಮೆ ಬೆಲೆಗೆ ಅಧಿಕ ಡೇಟಾ, ಅನಿಯಮಿತ ಕರೆ ಸೇರಿದಂರೆ ಅನೇಕ ಆಫರ್​ಗಳನ್ನು (Offer) ಪೈಪೋಟಿಯಂತೆ ಪ್ರಸಿದ್ಧ ಟೆಲಿಕಾಂ ಕಂಪೆನಿಗಳು ತನ್ನ ಗ್ರಾಹಕರಿಗೆ ನೀಡುತ್ತಿದೆ. ಜಿಯೋ, ವಿ ಹಾಗೂ ಏರ್‌ಟೆಲ್‌ ಟೆಲಿಕಾಂಗಳು ಆಕರ್ಷಕ ಡೇಟಾ ಯೋಜನೆಗಳ ಲಿಸ್ಟ್​ನಲ್ಲಿ ಮುಂದಿದೆ. ಈ ಪೈಕಿ ವಿ ಟೆಲಿಕಾಂ ವೊಡಾಫೋನ್ ಐಡಿಯಾದ (Vodafone Idea) ಕೆಲವು ಪ್ರಿಪೇಯ್ಡ್‌ ಯೋಜನೆಗಳು (Prepaid Planss) ಗಮನ ಸೆಳೆದಿವೆ. ಡೇಟಾ ಜೊತೆಗೆ ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಸೌಲಭ್ಯ ಸಹ ಪಡೆದಿದೆ. ಪ್ರಮುಖವಾಗಿ ಕಡಿಮೆ ಬೆಲೆಗೆ 4GB ಡೇಟಾ ಪ್ರಯೋಜನ ಒದಗಿಸುವ ವಿ ಟೆಲಿಕಾಂನ (Vi Telecom) ಕೆಲವು ಪ್ಲಾನ್ ಅತ್ಯುತ್ತಮವಾಗಿದೆ.

ವೊಡಾಫೋನ್-ಐಡಿಯಾದ ಈ 299 ರೂ. ಪ್ಲಾನ್​​ನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಜೀ5 ಓಟಿಟಿ ಚಂದಾದಾರಿಕೆ, ವೀಲೆಂಟ್ ಡೇಟಾ ರೋಲ್‌ ಓವರ್, ವಿ ಮೂವಿಸ್ ಹಾಗೂ ಟಿವಿ ಸೌಲಭ್ಯಗಳು ಸಿಗಲಿರುವುದು ವಿಶೇಷ.

449 ರೂ. ಪ್ಲಾನ್​ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಇನ್ನು 501 ರೂ. ಪ್ರಿಪೇಯ್ಡ್‌ ಪ್ಲಾನ್ ಕೂಡ ಉತ್ತಮವಾಗಿದೆ. ಇದು ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಇದರೊಂದಿಗೆ ಈ ಯೋಜನೆಯಲ್ಲಿ ಅನಿಯಮಿತ ಉಚಿತ ಕರೆ ಹಾಗೂ ಉಚಿತ 100 ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ 16GB ಡೇಟಾ ಲಭ್ಯವಾಗಲಿದೆ.

699 ರೂ. ಪ್ಲಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Telegram Update: ಟೆಲಿಗ್ರಾಂ ಬಳಕೆದಾರರಿಗೆ ಬಿಗ್ ಅಪ್ಡೇಟ್: ಪರಿಚಯಿಸಿದೆ ಬೊಂಬಾಟ್ ಫೀಚರ್ಸ್

Moto G51: 5000mAh ಬ್ಯಾಟರಿ, 50MP ಕ್ಯಾಮೆರಾ: ಅತ್ಯಂತ ಕಡಿಮೆ ಬೆಲೆ ಮೋಟೋ G51 ಸ್ಮಾರ್ಟ್​ಫೋನ್ ರಿಲೀಸ್

(Vodafone Idea or Vi Latest Prepaid Plans with 4GB daily data under the double data benefit)

TV9 Kannada


Leave a Reply

Your email address will not be published. Required fields are marked *