Rashid Khan
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 46ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಮೋಡಿ ಮಾಡಿದ್ದಾರೆ. ಅದು ಕೂಡ ಎರಡು ಬಾರಿ. ಇದಾಗ್ಯೂ ಹ್ಯಾಟ್ರಿಕ್ ವಿಕೆಟ್ ಉರುಳಿಸಲು ಮಾತ್ರ ವಿಫಲರಾದರು. ಹೌದು, ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ಅಡಿಲೇಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಅಡಿಲೇಡ್ ಸ್ಟ್ರೈಕರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು.
ಕ್ರಿಸ್ ಲಿನ್ನಂತಹ ಬಲಿಷ್ಠ ದಾಂಡಿಗರನ್ನು ಹೊಂದಿದ್ದ ಈ ಪಂದ್ವನ್ನು ಬ್ರಿಸ್ಬೇನ್ ಹೀಟ್ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ರಶೀದ್ ಖಾನ್. 8 ಓವರ್ ವೇಳೆ 62 ರನ್ಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಬ್ರಿಸ್ಬೇನ್ ತಂಡಕ್ಕೆ ರಶೀದ್ ಖಾನ್ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಪವರ್ಪ್ಲೇ ಬಳಿಕ ಮೊದಲ ಓವರ್ ಎಸೆದಿದ್ದ ರಶೀದ್ ಖಾನ್ ಒಟ್ಟು 11 ರನ್ಗಳನ್ನು ನೀಡಿದ್ದರು.
ಆದರೆ 9ನೇ ಓವರ್ನಲ್ಲಿ ತಮ್ಮ ಮಾಂತ್ರಿಕ ಸ್ಪಿನ್ ಮೋಡಿ ಆರಂಭಿಸಿದ ರಶೀದ್ ಖಾನ್ ಎರಡನೇ ಎಸೆತದಲ್ಲಿ ಹೆಜ್ಲೆಟ್ ಅವರನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲಿ ಜಾಕ್ ಲೆಹ್ಮನ್ ಅವರ ವಿಕೆಟ್ ಪಡೆದರು. ಈ ವೇಳೆ ಹ್ಯಾಟ್ರಿಕ್ ಅವಕಾಶವಿದ್ದರೂ ವಿಕೆಟ್ ಪಡೆಯಲು ಯಶಸ್ವಿಯಾಗಲಿಲ್ಲ.
ಇನ್ನು 13ನೇ ಓವರ್ ವೇಳೆ ಮತ್ತೆ ದಾಳಿಗಿಳಿದ ರಶೀದ್ ಖಾನ್ ಮೂರನೇ ಎಸೆತದಲ್ಲಿ ವಿಲ್ ಪ್ರೆಸ್ವಿಜ್ಕ್ ಅವರನ್ನು ಔಟ್ ಮಾಡಿ ಮೂರನೇ ಯಶಸ್ಸನ್ನು ಪಡೆದರು. ಇನ್ನು ಕೊನೆಯ ಓವರ್ನ ಎರಡನೇ ಎಸೆತದಲ್ಲಿ ಕುಹೆನ್ಮನ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ಮುಜೀಬ್ ಅವರ ವಿಕೆಟ್ ಉರುಳಿಸಿ ಐದು ವಿಕೆಟ್ಗಳನ್ನು ಪೂರೈಸಿದರು. ಈ ವೇಳೆ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ರಶೀದ್ ಖಾನ್ ಮುಂದಿತ್ತು. ಆದರೆ ಈ ಅವಕಾಶಕ್ಕೆ ಲಿಯಾಮ್ ಗುತ್ರಿ ತಡೆಯಾಗಿ ನಿಂತರು. ಇದಾಗ್ಯೂ ಕೊನೆಯ ಎಸೆತದಲ್ಲಿ ಗುತ್ರಿಯ ವಿಕೆಟ್ ಪಡೆಯುವ ಮೂಲಕ ರಶೀದ್ ಖಾನ್ ಒಟ್ಟು 6 ವಿಕೆಟ್ಗಳನ್ನು ಕಬಳಿಸಿದರು.
ರಶೀದ್ ಖಾನ್ ಅವರ ಈ ಸ್ಪಿನ್ ಮೋಡಿಯಿಂದ ಬ್ರಿಸ್ಬೇನ್ ತಂಡವು 15 ಓವರ್ನಲ್ಲಿ ಕೇವಲ 90 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಅಡಿಲೇಡ್ ತಂಡವು 71 ರನ್ಗಳ ಜಯ ಸಾಧಿಸಿತು. 4 ಓವರ್ನಲ್ಲಿ 17 ನೀಡಿ 6 ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
RASHID KHAN’S GOT 6-17!
He dominates in his 300th and last #BBL11 game!
And the Strikers take the win! Wow! What a finish! pic.twitter.com/qgpeuckY7r
— cricket.com.au (@cricketcomau) January 12, 2022