Watch ಮಾರುವೇಷದಲ್ಲಿ ತುರ್ತು ಸಂಖ್ಯೆಗೆ ಕರೆ ಮಾಡಿದ ಉತ್ತರ ಪ್ರದೇಶದ ಹಿರಿಯ ಅಧಿಕಾರಿ; ಪೊಲೀಸರ ಸ್ಪಂದನೆ ಹೀಗಿತ್ತು – Watch woman police officer in Uttar Pradesh In Disguise, Surprised Cops


ಈ ತಂಡವು ಸುಮಾರು ಒಂದು ಗಂಟೆಗಳ ಕಾಲ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ ನಂತರ ಸಂತ್ರಸ್ತ ಮಹಿಳೆಯ ಸೋಗಿನಲ್ಲಿರುವುದು ತಮ್ಮ ಹಿರಿಯ ಅಧಿಕಾರಿ ಎಂಬುದನ್ನು ನೋಡಿ

ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಾರು ವೇಷದಲ್ಲಿ ಸ್ಥಳೀಯ ಪೊಲೀಸರ ಪ್ರತಿಕ್ರಿಯೆಯನ್ನು ಪರೀಕ್ಷಿಸಲು ಸಶಸ್ತ್ರ ದರೋಡೆಯ ನಕಲಿ ದೂರಿನೊಂದಿಗೆ ತುರ್ತು ಸಂಖ್ಯೆಗೆ ಡಯಲ್ ಮಾಡಿದ್ದಾರೆ. ಪೊಲೀಸರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ, ಇದು ಉತ್ತರ ಪ್ರದೇಶದಲ್ಲಿ ಪೊಲೀಸರ ನಿಷ್ಠೆಯನ್ನು ತೋರಿಸುತ್ತದೆ. ಗುರುವಾರದಂದು ಔರೈಯಾದ ಐಪಿಎಸ್ ಅಧಿಕಾರಿ (ಭಾರತೀಯ ಪೊಲೀಸ್ ಸೇವೆ) ಮತ್ತು ಪೊಲೀಸ್ ಅಧೀಕ್ಷಕರಾದ ಚಾರು ನಿಗಮ್ ಅವರು ಸಾದಾ ಉಡುಗೆ, ದುಪಟ್ಟಾ, ಸನ್ಗ್ಲಾಸ್ ಮತ್ತು ಮಾಸ್ಕ್ ಧರಿಸಿ ತಮ್ಮ ಅಧೀನ ಅಧಿಕಾರಿಗಳಿಗೆ ಗುರುತು ಸಿಗದಂತೆ ಪರೀಕ್ಷೆ ಮಾಡಿದ್ದಾರೆ. ನಿಗಮ್ ಅವರು ಹೆದ್ದಾರಿಯಿಂದ ಅಂತಹ SOS ಕರೆಗಳ ನಿಯಂತ್ರಣ ಕೊಠಡಿ ಸಂಖ್ಯೆ 112 ಅನ್ನು ಡಯಲ್ ಮಾಡುವಾಗ ಸಶಸ್ತ್ರ ದರೋಡೆಗೆ ಒಳಗಾದವರಂತೆ ನಟಿಸಿದರು. ನೀವು ಎಲ್ಲಿದ್ದರೂ ಐದು ನಿಮಿಷಗಳಲ್ಲಿ ಸಹಾಯವನ್ನು ನೀಡುತ್ತೇವೆ ಎಂದು ತುರ್ತು ಲೈನ್ ಭರವಸೆ ನೀಡಿತ್ತು.

“ಹಲೋ, ಇದು ಸರಿತಾ ಚೌಹಾಣ್. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ನನ್ನನ್ನು ದರೋಡೆ ಮಾಡಿದ್ದಾರೆ, ”ಎಂದು ಐಎಎಸ್ ಅಧಿಕಾರಿ ಅವಲತ್ತುಕೊಂಡಿದ್ದಾರೆ.  ಔರೈಯಾ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊಗಳು ಮತ್ತು ಚಿತ್ರಗಳು ನಿರ್ಜನ ರಸ್ತೆಯಲ್ಲಿ ಅಧಿಕಾರಿ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ತೋರಿಸುತ್ತವೆ.
ಮೂವರು ಪೊಲೀಸರು ಆಕೆಯ ಸಂಕಷ್ಟದ ಕರೆಗೆ ಸ್ಪಂದಿಸಿ ತಂಡದೊಂದಿಗೆ ಬಂದಿದ್ದರು.

ಅಧಿಕಾರಿಗಳು ಮಹಿಳೆಯ ದೂರನ್ನು ಗಮನಿಸಿ ತಮ್ಮ ವಿಚಾರಣೆ ನಡೆಸಿದರು, ತಮ್ಮ ಬಾಸ್ ನೋಡುತ್ತಿದ್ದಾರೆ ಎಂದು ಅವರಿಗೆ ತಿಳಿದಿರಲಿಲ್ಲ.

ಈ ತಂಡವು ಸುಮಾರು ಒಂದು ಗಂಟೆಗಳ ಕಾಲ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ ನಂತರ ಸಂತ್ರಸ್ತ ಮಹಿಳೆಯ ಸೋಗಿನಲ್ಲಿರುವುದು ತಮ್ಮ ಹಿರಿಯ ಅಧಿಕಾರಿ ಎಂಬುದನ್ನು ನೋಡಿ ಅವರಿಗೆ ಶಾಕ್ ಆಗಿದೆ

ಪೊಲೀಸ್ ಟ್ವೀಟ್ ಪ್ರಕಾರ, ನಿಗಮ್ ಅವರು ಸ್ಥಳೀಯ ಪೊಲೀಸರ “ಪ್ರತಿಕ್ರಿಯೆ ಸಮಯವನ್ನು” ಪರಿಶೀಲಿಸಲು ಬಯಸಿದ್ದರು ಮತ್ತು ಅದು “ತೃಪ್ತಿದಾಯಕ” ಎಂದು ಕಂಡುಕೊಂಡರು.
“ಪರೀಕ್ಷೆ” ನಡೆಸಲು ಸರಿಯಾದ ಸ್ಥಳವನ್ನು ಹುಡುಕುತ್ತಿರುವ ಅಧಿಕಾರಿ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.