ಇಂದು ಅರಮನೆ ಮೈದಾನದಲ್ಲಿ ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮಕ್ಕೆ ರಾಜ್ ಕುಟುಂಬಸ್ಥರು, ಸಿಎಂ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕರು ಸೇರಿದಂತೆ ಇಡೀ ಕನ್ನಡ ಚಿತ್ರರಂಗ ಹಾಗೂ ಪರಭಾಷ ಚಿತ್ರತಂಡದ ಅನೇಕ ನಟ ನಟಿಯರು ಆಗಮಿಸಿದ್ದಾರೆ. ಈ ಕಾರ್ಯಕ್ರಮಕ್ಕೂ ಮುನ್ನ ಮಾತಾಡಿದ ನಟಿ ಹರಿಪ್ರಿಯಾ, ವಿ ರಿಯಲ್ಲಿ ಮಿಸ್ ಅಪ್ಪು ಸಾರ್ ಎಂದರು.
ನಾನು ಪುನೀತ್ ಸಾರ್ ‘ಅಂಜನಿಪುತ್ರ’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಪುನೀತ್ ಸಾರ್ ಅವರೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದೆ. ಇವರು ಅದ್ಭುತ ವ್ಯಕ್ತಿ. ನಿಜವಾಗಿಯೂ ಇಷ್ಟು ಸಣ್ಣ ವಯಸ್ಸಿಗೆ ಹೀಗಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದರು. ಇಡೀ ಕರ್ನಾಟಕ ಪುನೀತ್ ರಾಜ್ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ವೀ ರಿಯಲ್ಲಿ ಮಿಸ್ ಹಿಮ್ ಎಂದು ಭಾವುಕರಾದರು.
The post ‘We really miss him’- ಅಪ್ಪು ನೆನೆದು ಗದ್ಗದಿತರಾದ ಹರಿಪ್ರಿಯಾ appeared first on News First Kannada.