We will hoist the flag on republic day at chamarajpet idgah maidan said nagarik okkut | Chamarajpet Idgah Maidan: ಗಣರಾಜ್ಯೋತ್ಸವದಂದು ಧ್ವಜ ಹಾರಿಸುತ್ತೇವೆ; ನಮ್ಮ ತಾಕತ್ತ ತೋರಿಸುತ್ತೇವೆ: ನಾಗರಿಕ ಒಕ್ಕೂಟ


ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವದ ದಿನ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಸಭೆಯಲ್ಲಿ ಒಕ್ಕೂಟ ವತಿಯಿಂದ ಆಚರಿಸಬೇಕೆಂದು ಎಲ್ಲರ ಒಮ್ಮತ ದೊರೆತಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೇಳಿದ್ದಾರೆ.

Chamarajpet Idgah Maidan: ಗಣರಾಜ್ಯೋತ್ಸವದಂದು ಧ್ವಜ ಹಾರಿಸುತ್ತೇವೆ; ನಮ್ಮ ತಾಕತ್ತ ತೋರಿಸುತ್ತೇವೆ: ನಾಗರಿಕ ಒಕ್ಕೂಟ

ಚಾಮರಾಜಪೇಟೆ ಈದ್ಗಾ ಮೈದಾನ

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Chamarajpet Idgah Maidan) ಗಣರಾಜ್ಯೋತ್ಸವ (Republic Day)ಆಚರಣೆಗೆ ಅನುಮತಿ ನೀಡುವಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ (Chamarajpet Nagarik Okkut) ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದೆ. ಈ ಸಂಬಂಧ ಒಕ್ಕೂಟ ಇಂದು (ಜ.22) ಸಭೆ ನಡೆಸಿತು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವದ ದಿನ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಸಭೆಯಲ್ಲಿ ಒಕ್ಕೂಟ ವತಿಯಿಂದ ಆಚರಿಸಬೇಕೆಂದು ಎಲ್ಲರ ಒಮ್ಮತ ಇದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ಆದೇಶದಲ್ಲೇ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಆಚರಣೆಗೆ ಅನುಮತಿ ಇದೆ. ಆದರೂ ಸರ್ಕಾರ ಇದುವರೆಗೆ ಯಾವುದೇ ನಿಲುವು ಪ್ರಕಟಿಸಿಲ್ಲ. ನಮ್ಮ ಒಕ್ಕೂಟದಿಂದಲೇ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಜ.26ರಂದು ಶಾಂತಿಭಂಗ ಉಂಟಾದರೆ ಅದಕ್ಕೆ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

ಸಭೆ ಮಾಡಿ ರೂಪುರೇಷೆ ಬಗ್ಗೆ ಮಾಹಿತಿ ನೀಡಲಿದ್ದೇವೆ

ಮಂಗಳವಾರ ಸಭೆ ಮಾಡಿ ಗಣರಾಜ್ಯೋತ್ಸವದ ಆಚರಣೆಗೆ ರೂಪುರೇಷೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತೇವೆ. ಜೈಲಿಗೆ ಹೋದ್ರೂ ಪರವಾಗಿಲ್ಲ, ಕೇಸ್ ಹಾಕಿದರೂ ಹೆದರೋದಿಲ್ಲ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸೇ ಹಾರಿಸೇ ಹಾರಿಸುತ್ತೇವೆ. ಸರ್ಕಾರ ಮೌನವಾಗಿದೆ, ಆದರೆ ನಾವು ಸುಮ್ಮನಿರೋದಿಲ್ಲ ಎಂದರು.

ತಾಕತ್ತಿದ್ದರೆ ಅನುಮತಿ ಕೊಡಿ, ಇಲ್ಲ ಅಂದರೇ ನಮ್ಮ ತಾಕತ್ ತೋರಿಸುತ್ತೇವೆ

ತಾಕತ್ತಿದ್ದರೆ ಅನುಮತಿ ಕೊಡಿ, ಇಲ್ಲ ಅಂದರೇ ನಮ್ಮ ತಾಕತ್ ತೋರಿಸುತ್ತೇವೆ. ಜ.26ರಂದು ಚಾಮರಾಜಪೇಟೆ ಹಿಂದೂಗಳು ಏನು ಅಂತ ತೋರಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ ಪ್ರಧಾನ ಕಾರ್ಯದರ್ಶಿ ರಾಜು ಹೇಳಿದ್ದಾರೆ. ಗಣೇಶ ಹಬ್ಬಕ್ಕೂ ಅನುಮತಿ ಕೊಟ್ಟಿಲ್ಲ, ಈಗಲೂ ಕೊಡದಿದ್ದರೆ ಸುಮ್ಮನಿರಲ್ಲ. ಜೈಲಿಗೆ ಹೋದರೂ ಪರವಾಗಿಲ್ಲ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ. ಅನುಮತಿ ನೀಡದ ಹಿಂದೆ ಕಾಂಗ್ರೆಸ್ ಶಾಸಕ ಜಮೀರ್ ಕೈವಾಡ ಇದ್ದರೂ ಇರಬಹುದು. ಅನುಮತಿ ಕೊಡದಿದ್ದರೆ ಚುನಾವಣೆಯಲ್ಲಿ ಚಾಮರಾಜಪೇಟೆಯ ಹಿಂದೂಗಳು ಏನು ಅಂತ ಗೊತ್ತಾಗುತ್ತೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *