ಟೋಲ್ ದರಗಳಲ್ಲಿ ಹೆಚ್ಚಳ..!?ಪ್ರತಿ ಬಾರಿಯು ದೇಶದಲ್ಲಿ ಟೋಲ್‌ಗಳ ದರವನ್ನು ಏಪ್ರಿಲ್ 1 ರಂದು ಪರಿಷ್ಕರಿಸಲಾಗುತ್ತದೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಮುಂದೂಡುವಂತೆ ಚುನಾವಣಾ ಆಯೋಗ ತಿಳಿಸಿದೆ.ದೇಶದಲ್ಲಿ ಚುನಾವಣೆಗಳು ಏಳು ಹಂತದಲ್ಲಿ ನಡೆಯಲಿದ್ದು, ಫಲಿತಾಂಶ ಜೂನ್ ೪ರಂದು ಬರಲಿದೆ. ಆ ಬಳಿಕ ನೂತನ ಸರ್ಕಾರದ ರಚನೆ ಆಗುತ್ತದೆ. ಚುನಾವಣೆಗಳ ಬಳಿಕವೇ ಟೋಲ್ ದರದಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.
ಎನ್‌ಎಚ್‌ಎಐಗೆ ಸೂಚನೆ:ಭಾರತೀಯ ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರಕ್ಕೆ (NHAI),ಚುನಾವಣಾ ಆಯೋಗವುದರ ಪರಿಷ್ಕರಣೆಯನ್ನುಸದ್ಯಕ್ಕೆ ಮುಂದೂಡಬೇಕು ಎಂದು ಹೇಳಿದೆ.ಟೋಲ್ ದರಗಳು ಸುಮಾರು5 ಪ್ರತಿಶತದಷ್ಟು ಹೆಚ್ಚಾಗಲಿವೆ ಎಂದು ಅಂದಾಜಿಸಲಾಗಿತ್ತು.